ಲಕ್ನೋ (ಉತ್ತರ ಪ್ರದೇಶ): ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದು, ಜಯದೇವ್ ಉನದ್ಕತ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಗಾಯಗೊಂಡಿರುವ ಬೆನ್ನಲ್ಲೇ ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯಕ್ಕೆ ಬದಲಿ ಆಟಗಾರರನ್ನು ಹುಡುಕಬೇಕಾಗಿದೆ.
ನೆಟ್ಸ್‌ನಲ್ಲಿ ಅಭ್ಯಾಸ ಗಾಯಗೊಂದ ಉನದ್ಕತ್ ಇಬ್ಬರೂ ಆಟಗಾರರ ಗಾಯ ಗಂಭೀರತೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇಬ್ಬರು ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಆಡುವುದು ಅನುಮಾನಾಸ್ಪದವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಪರ್ಯಾಯ ಆಟಗಾರರನ್ನೂ ಹುಡುಕ ಬೇಕಾಗಿದೆ. ಅಗ್ರ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಎಡಗೈ ಬದಲಿ ಬೌಲರ್ ಆಯ್ಕೆ ಮಾಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಸ್ಪರ್ಧಿಗಳ ಹೆಸರುಗಳು ಮುನ್ನೆಲೆಗೆ ಬರುತ್ತಿವೆ.
ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ, ಕೆಎಲ್ ರಾಹುಲ್ ಅವರು ಔಟ್‌ಫೀಲ್ಡ್‌ನಲ್ಲಿ ಚೆಂಡು ಹಿಡಿಯಲು ಪ್ರಯತ್ನಿಸುವಾಗ ಗಂಭೀರವಾಗಿ ಗಾಯಗೊಂಡರು. ಅವರಿಗೆ ತೊಡೆ ಭಾಗದಲ್ಲಿ ಗಾಯವಾಗಿದ್ದು, ನಡೆಯಲು ಮತ್ತು ವೇಗವಾಗಿ ಓಡಲು ಸಾಧ್ಯವಾಗುತ್ತಿಲ್ಲ.
ಫೀಲ್ಡಿಂಗ್ ವೇಳೆ ಗಾಯಗೊಂಡ ಕೆ ಎಲ್ ರಾಹುಲ್
ಗಾಯವಾದ ಕಾರಣ ಅವರು 6 ರಿಂದ 8 ವಾರಗಳ ಕಾಲ ಆಟದ ಮೈದಾನದಿಂದ ಹೊರಗುಳಿಯಬೇಕಾಗಬಹುದು. ಇದು ಸಂಭವಿಸಿದಲ್ಲಿ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2023 ಅಂತಿಮ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತಂಡಕ್ಕೆ ವಿಕೆಟ್ ಕೀಪರ್ ಕಮ್ ಬ್ಯಾಟರ್ನ ಅಗತ್ಯ ಇದ್ದು, ಇದಕ್ಕಾಗಿ ಅಭಿಮನ್ಯು ಈಶ್ವರನ್ ಮತ್ತು ಇಶಾನ್ ಕಿಶನ್ ಅವರಿಗೆ ಬಿಸಿಸಿಐ ಮಣೆಹಾಕುವ ಸಾಧ್ಯತೆ ಇದೆ.
ಉನಾದ್ಕತ್ ಬದಲು ಅರ್ಷದೀಪ್ಗೆ ಅವಕಾಶ ಸಾಧ್ಯತೆ
ಶ್ರೀಕರ್ ಭರತ್ ವಿಕೆಟ್ ಕೀಪರ್ ಆಗಿ ತಂಡದ ಮೊದಲ ಆಯ್ಕೆಯಾಗುತ್ತಿದ್ದಾರೆ. ಇದರಿಂದಾಗಿ ಪರ್ಯಾಯ ವಿಕೆಟ್ ಕೀಪರ್ ಬದಲು ಬ್ಯಾಟರ್ಗಾಗಿ ಬಿಸಿಸಿಐ ಎದುರು ನೋಡಲಿದೆ. ದೇಶಿ ಕ್ರಿಕೆಟ್ ಇರಾನಿ ಕಪ್ನಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿ ಗಮನ ಸೆಳೆದಿದ್ದ ಯಶಸ್ವಿ ಜೈಸ್ವಾಲ್ ಐಪಿಎಲ್ನಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಭಾರತ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಬಲ್ಲರು. ಇದಲ್ಲದೇ ಸಂಜು ಸ್ಯಾಮ್ಸನ್ ಅವರನ್ನು ಇತರ ಸ್ಪರ್ಧಿಗಳಲ್ಲಿ ಸೇರಿಸಿಕೊಳ್ಳಬಹುದು.
ಜಯದೇವ್ ಉನಾದ್ಕತ್ಗೆ ಪರ್ಯಾಯವಾಗಿ, ಎಡಗೈ ವೇಗದ ಬೌಲರ್ ಅರ್ಷ್‌ದೀಪ್ ಸಿಂಗ್ ತಂಡದ ಭಾಗವಾಗಬಹುದು. ಈ ಸಮಯದಲ್ಲಿ ಅವರು ತಂಡವನ್ನು ಸೇರಲು ಏಕೈಕ ಆಯ್ಕೆಯಾಗಬಹುದು. ಐಪಿಎಲ್ ಮುಗಿದ ನಂತರ ಅರ್ಷದೀಪ್ ಸಿಂಗ್ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡಲು ಹೋಗುತ್ತಿದ್ದಾರೆ. ಈ ಋತುವಿನಲ್ಲಿ ಅವರು ಕೆಂಟ್ ಪರ ಆಡಲಿದ್ದಾರೆ.
ಇಬ್ಬರು ಆಟಗಾರರ ಆರೋಗ್ಯ ಸ್ಥಿತಿ ಬಗ್ಗೆ ಬಿಸಿಸಿಐ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮ್ಯಾನೇಜ್‌ಮೆಂಟ್ ಜೊತೆಗೆ ಚರ್ಚಿಸಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಕೂಡ ಇಬ್ಬರೂ ಆಟಗಾರರ ಗಾಯದ ನವೀಕರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇಬ್ಬರು ಎರಡು ವಾರಕ್ಕಿಂತ ಹೆಚ್ಚು ಕಾಲ ತಂಡದಿಂದ ಹೊರಗುಳಿಯ ಬೇಕಾದಲ್ಲಿ ಬಿಸಿಸಿಐ ಪರ್ಯಾಯ ಆಟಗಾರನನ್ನು ನೋಡಬಹುದು. ಈ ಇಬ್ಬರೂ ಆಟಗಾರರು ಚೇತರಿಸಿಕೊಳ್ಳುವವರೆಗೆ ಪುನರ್ವಸತಿಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬೆಂಗಳೂರಿಗೆ ಬರಬೇಕಾಗಬಹುದು.
ಇದನ್ನೂ ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಆಸ್ಟ್ರೇಲಿಯಾ ಮಣಿಸಿದ ಭಾರತ, ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ