ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮೇ 20 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ ಜೆರ್ಸಿಯನ್ನು ಧರಿಸಿ ಆಡಲಿದೆ. ಕೋಲ್ಕತ್ತಾದ ಆರ್‌ಪಿಎಸ್‌ಜಿ ಹೌಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸ್ಟ್ಯಾಂಡ್ ಇನ್ ನಾಯಕ ಕೃನಾಲ್ ಪಾಂಡ್ಯ ಮತ್ತು ವಿಕೆಟ್ ಕೀಪರ್ - ಬ್ಯಾಟರ್ ನಿಕೋಲಸ್ ಪೂರನ್ ಉಪಸ್ಥಿತಿಯಲ್ಲಿ ಈ ಘೋಷಣೆ ಮಾಡಲಾಯಿತು.
ಎಲ್‌ಎಸ್‌ಜಿ ಮತ್ತು ಮೋಹನ್ ಬಗಾನ್ ಫುಟ್‌ಬಾಲ್ ಕ್ಲಬ್‌ನ ಮಾಲೀಕರಾಗಿರುವ ಸಂಜೀವ್ ಗೋಯೆಂಕಾ, ಎಲ್‌ಎಸ್‌ಜಿ ಮೋಹನ್ ಬಗಾನ್‌ಗೆ ಗೌರವ ಸಲ್ಲಿಸುತ್ತದೆ ಎಂದು ಹೇಳಿದರು.
ಜೆರ್ಸಿಯನ್ನು ಪ್ರದರ್ಶಿಸಿದ ಪತ್ರಿಕಾಗೋಷ್ಠಿಯಲ್ಲಿ, ಸಂಜೀವ್ ಗೋಯೆಂಕಾ, "ಇದು ಮೋಹನ್ ಬಗಾನ್ ಪರಂಪರೆಗೆ ಮತ್ತು ನಮ್ಮ ನಗರದ ಪರಂಪರೆಗೆ ಗೌರವ ಸಲ್ಲಿಸುವ ಮಾರ್ಗವಾಗಿದೆ. ಮೋಹನ್ ಬಗಾನ್ ಒಂದು ಶತಮಾನದಷ್ಟು ಹಳೆಯದಾದ ಸಂಸ್ಥೆಯಾಗಿದೆ. ನಾವು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಶನಿವಾರದಂದು ನಾವು ಕೆಕೆಆರ್ ವಿರುದ್ಧ ಆಡುವ ಪಂದ್ಯದಲ್ಲಿ ಮೋಹನ್ ಬಗಾನ್‌ನ ಐಕಾನಿಕ್ ಗ್ರೀನ್ ಮತ್ತು ಮರೂನ್ ಜರ್ಸಿ ಧರಿಸುತ್ತೇವೆ ಆಡುತ್ತಿದ್ದೇವೆ" ಎಂದು ಹೇಳಿದ್ದಾರೆ.
"ಕೇವಲ ಮೋಹನ್ ಬಗಾನ್ ಅಭಿಮಾನಿಗಳು ಮಾತ್ರವಲ್ಲ, ಕೋಲ್ಕತ್ತಾದ ಎಲ್ಲಾ ನಿವಾಸಿಗಳು ನಮ್ಮನ್ನು ಬೆಂಬಲಿಸುತ್ತಾರೆ ಎಂದು ಭಾವಿಸುತ್ತೇವೆ. ನಮಗೆ, ಕೋಲ್ಕತ್ತಾ ನಮ್ಮ ಮನೆಯ ಹಕ್ಕು. ಆದ್ದರಿಂದ, ನಮಗೆ ಎಷ್ಟು ಸಾಧ್ಯವೋ ಅಷ್ಟು ಬೆಂಬಲವನ್ನು ನಾವು ಕೇಳುತ್ತೇವೆ" ಎಂದು ಗೋಯೆಂಕಾ ತಿಳಿಸಿದ್ದಾರೆ.