ಶಾರ್ಜಾ:ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ದಾಳಿಗೆ ರಾಜಸ್ಥಾನ ರಾಯಲ್ ತತ್ತರಿಸಿ, 16.1 ಓವರ್ಗಳಲ್ಲಿ 85 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿದೆ. ಈ ಗೆಲುವಿನ ಮೂಲಕ ಮೋರ್ಗನ್ ಪಡೆ ಪ್ಲೇ ಆಫ್ನತ್ತ ಮುನ್ನುಗ್ಗಿದ್ದು, ಮುಂಬೈಗೆ ಅಂತಿಮ ಲೀಗ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಅನಿವಾರ್ಯವಾಗಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಕೆಕೆಆರ್ 172 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್ ಗಿಲ್ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 56 ರನ್ಗಳಿಸಿದರೆ, ಇವರ ಜೊತೆಗಾರ ವೆಂಕಟೇಶ್ ಅಯ್ಯರ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 38 ರನ್ಗಳಿಸಿದರು.
ನಿತೀಶ್ ರಾಣಾ 12, ರಾಹುಲ್ ತ್ರಿಪಾಠಿ 14 ಎಸೆತಗಳಲ್ಲಿ 21, ದಿನೇಶ್ ಕಾರ್ತಿಕ್ ಅಜೇಯ 14 ಮತ್ತು ಇಯಾನ್ ಮಾರ್ಗನ್ ಅಜೇಯ 13 ರನ್ಗಳಿಸಿ 172 ರನ್ಗಳ ಗುರಿ ನೀಡಿದರು. ಇದು ಶಾರ್ಜಾದಲ್ಲಿ ಈ ಆವೃತ್ತಿಯಲ್ಲಿ ದಾಖಲಾದ ಗರಿಷ್ಠ ರನ್ ಗಳಿಕೆಯಾಗಿದೆ.
ರಾಜಸ್ಥಾನ್ ರಾಯಲ್ಸ್ ಪರ ಚೇತನ್ ಸಕಾರಿಯಾ 23ರನ್ ನೀಡಿ 1 ವಿಕೆಟ್ ಪಡೆದರೆ, ಮೋರಿಸ್ 28ಕ್ಕೆ1, ತೆವಾಟಿಯಾ 11ಕ್ಕೆ1, ಗ್ಲೇನ್ ಫಿಲಿಫ್ಸ್ 17ಕ್ಕೆ1 ವಿಕೆಟ್ ಪಡೆದರು.