ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಸನ್ ರೈಸರ್ಸ್ ತಂಡ 23 ರನ್ಗಳಿಂದ ಜಯ ದಾಖಲಿಸಿದೆ. ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಶತಕದ ನೆರವಿನಿಂದ ಎಸ್ಆರ್ಹೆಚ್ 228 ರನ್ಗಳ ಬೃಹತ್ ರನ್ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರೂ 20 ಓವರ್ಗಳಲ್ಲಿ 205 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 288 ರನ್ಗಳನ್ನು ಪೇರಿಸಿತ್ತು. ಈ ಸವಾಲಿನ ಮತ್ತು ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭ ಪಡೆಯಲಿಲ್ಲ. ಇನ್ಸಿಂಗ್ನ ಮೂರನೇ ಬಾಲ್ನಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ರಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಮಾರ್ಕ್ ಜಾನ್ಸೆನ್ ಸತತ ಎರಡು ಎಸತೆಗಳಲ್ಲಿ ವೆಂಕಟೇಶ್ ಅಯ್ಯರ್ (10) ಮತ್ತು ಸುನಿಲ್ ನರೈನ್ (0) ವಿಕೆಟ್ ಉರುಳಿಸಿ ಕೆಕೆಆರ್ ತಂಡಕ್ಕೆ ಶಾಕ್ ನೀಡಿದರು. ಅಲ್ಲದೇ, 20 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಆರಂಭಿಕ ಜಗದೀಸನ್ ಜೊತೆಗೂಡಿದ ನಾಯಕ ನಿತೀಶ್ ರಾಣಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ನಡುವೆ 21 ಎಸತೆಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 36 ಬಾರಿಸಿದ ಜಗದೀಸನ್ ಔಟಾದರು. ಈ ಮೂಲಕ 4ನೇ ವಿಕೆಟ್ಗೆ 62 ರನ್ಗಳನ್ನು ಕಲೆ ಹಾಕಿದ್ದ ಈ ಜೋಡಿ ಬೇರ್ಪಟ್ಟಿತು. ಮತ್ತೊಂದೆಡೆ, ಆಂಡ್ರೆ ರಸೆಲ್ 3 ರನ್ಗಳಿಗೆ ಔಟ್ ಆಗಿ ನಿರಾಶೆ ಮೂಡಿಸಿದರು.
ಮತ್ತೆ ಮಿಂಚಿದ ರಿಂಕು: ರಸೆಲ್ ಔಟಾದ ಬಳಿಕ ನಾಯಕ ರಾಣಾ ಜೊತೆಗೂಡಿದ ರಿಂಕು ಸಿಂಗ್ ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಟ ನಡೆಸಿದರು. 6ನೇ ವಿಕೆಟ್ಗೆ ರಾಣಾ ಮತ್ತು ರಿಂಕು 69 ರನ್ಗಳನ್ನು ಬಾರಿಸಿದರು. 41 ಎಸೆತಗಳಲ್ಲಿ ರಾಣಾ ಆರು ಸಿಕ್ಸರ್ಗಳು ಮತ್ತು ಐದು ಬೌಂಡರಿಗಳ ಸಮೇತ 75 ರನ್ ಗಳಿಸಿ ನಿರ್ಗಮಿಸಿದರು. ಇದರಿಂದ ಪಂದ್ಯವು ಕೆಕೆಆರ್ ಪರ ತಿರುಗಿತು. ಇತ್ತ, ರಿಂಕು ಸಿಂಗ್ ಕುಗ್ಗದೆ ಬ್ಯಾಟ್ ಬೀಸಿದರು. ಕೊನೆಯ ಓವರ್ಗೆ 32 ರನ್ಗಳ ಅಗತ್ಯವಿತ್ತು. ಆದರೆ, ಗೆಲವು ತಂದುಕೊಡಲು ಸಾಧ್ಯವಾಗಲಿಲ್ಲ. ತಲಾ ನಾಲ್ಕು ಸಿಕ್ಸರ್ಗಳ ಮತ್ತು ಬೌಂಡರಿಗಳೊಂದಿಗೆ ಅಜೇಯ 58 ಸಿಡಿಸಿ ರಿಂಕು ಗಮನ ಸೆಳೆದರು.