ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್ ಪ್ರೀಮಿಯರ್ ಲೀಗ್ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಟಾಸ್ ನಂತರ ಮಳೆ ಬಂದ ಕಾರಣ ಪಂದ್ಯ ವಿಳಂಬವಾಗಿದೆ.
ಗುಜರಾತ್ ತಂಡದಲ್ಲಿ ಕಳೆದ ತಂಡದಲ್ಲೇ ಮುಂದುವರೆದಿದೆ. ಕೆಕೆಆರ್ನಲ್ಲಿ ಎರಡು ಬದಲಾವಣೆಗಳಾಗಿದ್ದು, ಜೇಸನ್ ರಾಯ್ ಅವರಿಗೆ ಬೆನ್ನಿನ ಸಮಸ್ಯೆ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ರಹಮಾನುಲ್ಲಾ ಗುರ್ಬಾಜ್ ಆಡಲಿದ್ದಾರೆ. ಉಮೇಶ್ ಯಾದವ್ ಬದಲಿಗೆ ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರೌಂಡ್-ರಾಬಿನ್ ಸುತ್ತಿನ ಎರಡನೇ ಮುಖಾಮುಖಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗುಜರಾತ್ ಟೈಟಾನ್ಸ್ಅನ್ನು ಮೂರು ವಿಕೆಟ್ಗಳಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಣಿಸಿತ್ತು. ಇಂದು ಗುಜರಾತ್ ಕೆಕೆಆರ್ನ್ನು ಮಣಿಸಿದಲ್ಲಿ ಅಗ್ರಸ್ಥಾನಕ್ಕೇರಲಿದೆ. ಈವರೆಗೆ ಆಡಿದ 7 ಪಂದ್ಯದಲ್ಲಿ ಜಿಟಿ 5 ಗೆಲುವಿನಿಂದ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ತ ಕೆಕೆಆರ್ 8 ಪಂದ್ಯದಲ್ಲಿ 3 ರಲ್ಲಿ ಗೆದ್ದು, 6 ಅಂಕ ಗಳಿಸಿದೆ.