ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ನ ಮುಂಬರುವ ಟಿ20 ಲೀಗ್‌ನಲ್ಲಿ ಫ್ರಾಂಚೈಸಿಯನ್ನು ನಿರ್ವಹಿಸುವ ಮಾಲೀಕತ್ವದ ಹಕ್ಕುಗಳನ್ನು ಕೋಲ್ಕತ್ತಾ ನೈಟ್‌ರೈಡರ್ಸ್ ಪಡೆದುಕೊಂಡಿದೆ. ಈ ಫ್ರಾಂಚೈಸಿ ಅಬು ಧಾಬಿಯದ್ದಾಗಿದ್ದು, ಅಬುಧಾಬಿ ನೈಟ್ ರೈಡರ್ಸ್ ಎಂದು ಹೆಸರಿಡಲಾಗಿದೆ. ಜೂಹಿ ಚಾವ್ಲಾ ಮತ್ತು ಶಾರೂಖ್ ಖಾನ್ ನೇತೃತ್ವದ ನೈಟ್‌ರೈಡರ್ಸ್ ಗ್ರೂಪ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮತ್ತು ಮೇಜರ್ ಕ್ರಿಕೆಟ್ ಲೀಗ್ (ಎಂಎಲ್‌ಸಿ)ನಲ್ಲಿ ಟಿ20 ಫ್ರಾಂಚೈಸಿಗಳನ್ನು ಹೊಂದಿದೆ. ಈಗ ನೈಟ್ ರೈಡರ್ಸ್ ಗ್ರೂಪ್‌ನಿಂದ ವಿಶ್ವಾದ್ಯಂತ ನಾಲ್ಕನೇ ಟಿ 20 ಫ್ರಾಂಚೈಸ್ ಖರೀದಿಯಾಗಿದೆ.
'ಹಲವು ವರ್ಷಗಳಿಂದ ನಾವು ನೈಟ್‌ರೈಡರ್ಸ್ ಬ್ರ್ಯಾಂಡ್ ಅನ್ನು ಜಾಗತಿಕವಾಗಿ ವಿಸ್ತರಿಸುತ್ತಿದ್ದೇವೆ. ಯುಎಇಯಲ್ಲಿ ನಡೆಯುವ ಟಿ20 ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆವು. ಈ ಲೀಗ್‌ನ ಭಾಗವಾಗಲು ಉತ್ಸುಕರಾಗಿದ್ದೇವೆ. ಇಲ್ಲಿ ನಿಸ್ಸಂದೇಹವಾಗಿ ನಾವು ದೊಡ್ಡ ಯಶಸ್ಸು ಪಡೆಯುತ್ತೇವೆ' ಎಂದು ಶಾರುಖ್ ಖಾನ್ ತಿಳಿಸಿದ್ದಾರೆ.