ನವದೆಹಲಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ವಿರುದ್ಧದ (ಮೇ 1ರಂದು) ಕೊನೆಯ ಪಂದ್ಯದ ವೇಳೆ ತೊಡೆಗೆ ಗಂಭೀರ ಗಾಯವಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದಲೇ ಹೊರಗುಳಿಯಲಿದ್ದಾರೆ. ಇಂದು ಲಕ್ನೋ ಸೂಪರ್ ಜೈಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡುತ್ತಿದ್ದು, ಕೃನಾಲ್ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್ನಲ್ಲಿ ಅಭ್ಯಾಸದಲ್ಲಿ ತೊಡಗಿರುವಾಗ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದ ಅನುಭವ ವೇಗಿ ಜಯದೇವ್ ಉನದ್ಕತ್ ಅವರು ಸಹ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಇನ್ನು ಅರ್ಧದಷ್ಟು ಪಂದ್ಯಗಳನ್ನು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್‌ನಲ್ಲಿ ಆಡಬೇಕಿದೆ. ತಂಡ ಇಬ್ಬರು ಪರ್ಯಾಯ ಆಟಗಾರರನ್ನು ಹುಡಕಬೇಕಿದೆ. ಜೂನ್ 7 ರಿಂದ 11 ರವರೆಗೆ ಲಂಡನ್‌ನ ಓವೆಲ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರಕಟವಾದ ತಂಡದಲ್ಲಿ ಪರ್ಯಾಯ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಇದ್ದಾರೆ. ಬೌಲಿಂಗ್ನಲ್ಲಿ ಜಯದೇವ್ ಉನಾದ್ಕತ್ಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡ್ರ್ ಗವಾಸ್ಕರ್ ಟ್ರೋಫಿಗೂ ಜಯದೇವ್ ಆಯ್ಕೆಯಾಗಿದ್ದರು. ಈ ವರ್ಷದ ರಣಜಿಯಲ್ಲಿ ಸೌರಾಷ್ಟ್ರ ಉನಾದ್ಕತ್ ನಾಯಕತ್ವ ಚಾಂಪಿಯನ್ ಆಗಿತ್ತು.
"ಕೆಎಲ್ ಪ್ರಸ್ತುತ ಲಕ್ನೋದಲ್ಲಿ ತಂಡದೊಂದಿಗೆ ಇದ್ದಾರೆ. ಆದರೆ, ಅವರು ಬುಧವಾರ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಶಿಬಿರದಿಂದ ನಿರ್ಗಮಿಸುತ್ತಿದ್ದಾರೆ. ಅವರ ಸ್ಕ್ಯಾನ್‌ಗಳನ್ನು ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಮಾಡಲಾಗುತ್ತದೆ. ರಾಹುಲ್ ಅವರಿಗೆ ತಿಳಿದ ವೈದ್ಯಕೀಯ ಸಲಹೆಯನ್ನೇ ಜಯದೇವ್ ಪ್ರಕರಣದಲ್ಲೂ ನಿರ್ವಹಿಸಲಾಗುತ್ತದೆ" ಎಂದು ಬಿಸಿಸಿಐನ ಅನಾಮಧೇಯ ಮೂಲದಿಂದ ಮಾಹಿತಿ ದೊರೆತಿದೆ. ಇಲ್ಲಿಯವರೆಗೆ ಯಾವುದೇ ಸ್ಕ್ಯಾನ್ ಮಾಡಲಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.