ಕರ್ನಾಟಕ

karnataka

ETV Bharat / sports

ಸೌಥಿ ಕೆಕೆಆರ್​ಗೆ, ಇಂಗ್ಲೆಂಡ್​ ಸ್ಪಿನ್ನರ್ ಆದಿಲ್ ರಷೀದ್​ ಪಂಜಾಬ್ ಸೇರ್ಪಡೆ - ಐಪಿಎಲ್ 2021

ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿಯ ಮುಂದುವರಿದ ಭಾಗ ಆರಂಭವಾಗಲಿದೆ. ಆದರೆ, ಕೆಲವು ರಾಷ್ಟ್ರಗಳ ಆಟಗಾರರು ವೈಯಕ್ತಿಕ ಕಾರಣ, ರಾಷ್ಟ್ರೀಯ ಸೇವೆ ಹಾಗೂ ಗಾಯದ ಕಾರಣದಿಂದ ಲೀಗ್​ಗೆ ಗೈರಾಗುತ್ತಿದ್ದಾರೆ. ಹಾಗಾಗಿ ಫ್ರಾಂಚೈಸಿಗಳು ಅಂತಹ ಆಟಗಾರರ ಬದಲಿಗೆ ಲಭ್ಯರಿರುವ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

IPL 2021 Replacement
ಐಪಿಎಲ್ 2021 ಬದಲೀ ಆಟಗಾರರು

By

Published : Aug 26, 2021, 8:07 PM IST

ನವದೆಹಲಿ:ನ್ಯೂಜಿಲ್ಯಾಂಡ್​ ಅನುಭವಿ ಬೌಲರ್​ ಟಿಮ್ ಸೌಥಿಯನ್ನು ಪ್ಯಾಟ್​ ಕಮಿನ್ಸ್​ಗೆ ಬದಲೀ ಆಟಗಾರನಾಗಿ ಕೋಲ್ಕತ್ತಾ ನೈಟ್​ ರೈಡರ್ಸ್​ ಒಪ್ಪಂದ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್​ ಜೇ ರಿಚರ್ಡ್ಸನ್​ ಬದಲಿಗೆ ಇಂಗ್ಲೆಂಡ್​ ಅನುಭವಿ ಸ್ಪಿನ್ನರ್ ಆದಿಲ್ ರಶೀದ್​ಗೆ ಮಣೆ ಹಾಕಿದೆ.

ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿಯ ಮುಂದುವರಿದ ಭಾಗ ಆರಂಭವಾಗಲಿದೆ. ಆದರೆ, ಕೆಲವು ರಾಷ್ಟ್ರಗಳ ಆಟಗಾರರು ವೈಯಕ್ತಿಕ ಕಾರಣ, ರಾಷ್ಟ್ರೀಯ ಸೇವೆ ಹಾಗೂ ಗಾಯದ ಕಾರಣದಿಂದ ಲೀಗ್​ಗೆ ಗೈರಾಗುತ್ತಿದ್ದಾರೆ. ಹಾಗಾಗಿ ಫ್ರಾಂಚೈಸಿಗಳು ಅಂತಹ ಆಟಗಾರರ ಬದಲಿಗೆ ಲಭ್ಯರಿರುವ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

15.5 ಕೋಟಿ ರೂ ಪಡೆದು ಕೆಕೆಆರ್​ ಸೇರಿದ್ದ ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್​ ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ 2 ಬಾರಿಯ ಚಾಂಪಿಯನ್​ ಕಿವೀಸ್​ನ ಸೌಥಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಇದನ್ನು ಓದಿ:ಕೇನ್​ ರಿಚರ್ಡ್ಸನ್​ ಬದಲಿಗೆ ಇಂಗ್ಲೆಂಡ್​ನ ವೇಗಿ ಗಾರ್ಟನ್​ಗೆ​ ಗಾಳ ಹಾಕಿದ ಆರ್​ಸಿಬಿ

ಈಗಾಗಲೆ ರಿಲೇ ಮೆರಿಡಿತ್ ಬದಲಿಗೆ ಯುವ ಆಸೀಸ್​ ವೇಗಿ ನೇಥನ್ ಎಲ್ಲಿಸ್​ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಪಂಜಾಬ್ ಕಿಂಗ್ಸ್​ ಜೇಮ್ಸ್​ ರಿಚರ್ಡ್ಸನ್​ ಬದಲಿಗೆ ಆಂಗ್ಲ ಸ್ಪಿನ್ನರ್​ರನ್ನು ಯುಎಇ ಲೀಗ್​ಗೆ ಬದಲೀ ಆಟಗಾರನಾಗಿ ಘೋಷಿಸಿದೆ.

ಇನ್ನು ಆರ್​ಸಿಬಿ ಶ್ರಿಲಂಕಾದ ಆ್ಯಡಂ ಜಂಪಾ ಅವರನ್ನು, ಕೇನ್ ರಿಚರ್ಡ್ಸನ್​ ಬದಲಿಗೆ ಇಂಗ್ಲೆಂಡ್​ನ ಜಾರ್ಜ್ ಗಾರ್ಟನ್​ ಅವರನ್ನು, ಫಿನ್​ ಅಲೆನ್​ ಬದಲಿಗೆ ಟಿಮ್​ ಡೇವಿಡ್​ ಮತ್ತು ಡೇನಿಯಲ್ ಸ್ಯಾಮ್ಸ್ ಬದಲಿಗೆ ದುಷ್ಮಂತ ಚಮೀರರನ್ನು ಬದಲೀ ಆಟಗಾರರಾಗಿ ಘೋಷಿಸಿದೆ.

ರಾಜಸ್ಥಾನ್ ರಾಯಲ್ಸ್​ ಜೋಫ್ರಾ ಆರ್ಚರ್​​ ಬದಲಿಗೆ ಕಿವೀಸ್ ವಿಕೆಟ್ ಕೀಪರ್ ಗ್ಲೇನ್ ಫಿಲಿಪ್ಸ್​ರನ್ನು ಮತ್ತು ಆ್ಯಂಡ್ರ್ಯೂ ಟೈ ಬದಲಿಗೆ ವಿಶ್ವದ ನಂಬರ್ 1 ಟಿ-20 ಬೌಲರ್ ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಇದನ್ನು ಓದಿ:ವಿಶ್ವದ ನಂಬರ್ 1 ಟಿ20 ಬೌಲರ್ ತಬ್ರೈಜ್​ ಶಂಸಿ ರಾಜಸ್ಥಾನ್​ ರಾಯಲ್ಸ್​ಗೆ ಸೇರ್ಪಡೆ

ABOUT THE AUTHOR

...view details