ಕರ್ನಾಟಕ

karnataka

ETV Bharat / sports

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌​ಗೆ ಚೇತರಿಸಿಕೊಳ್ಳಲಿದ್ದಾರೆ ಉನಾದ್ಕತ್: ವರದಿ​ - ETV Bharath Kannada news

ಮೇ 1 ರಂದು ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯಕ್ಕೆ ತುತ್ತಾದ ಜಯುದೇವ್​ ಉನಾದ್ಕತ್​ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

Jaydev Unadkat To Be Fit Ahead Of WTC Final
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌​ಗೆ ಚೇತರಿಸಿಕೊಳ್ಳಲಿದ್ದಾರೆ ಉನಾದ್ಕತ್: ವರದಿ​

By

Published : May 12, 2023, 6:00 PM IST

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಇನ್ನೂ ತಿಂಗಳೂ ಬಾಕಿ ಇಲ್ಲ. ಹೀಗಿರುವಾಗ ಭಾರತ ತಂಡ ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಕೆಎಲ್​ ರಾಹುಲ್​ ಗಾಯದಿಂದಾಗಿ ತಂಡದಿಂದ ಹೊರಗುಳಿದರೆ, ಜಯದೇವ್​ ಉನಾದ್ಕತ್​ ಮತ್ತು ಉಮೇಶ್​ ಯಾದವ್​ ಇನ್ನೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ವರದಿಯೊಂದರ ಪ್ರಕಾರ ಉನಾದ್ಕತ್​ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ನಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

ಜೂನ್ 7 ರಿಂದ 11ರ ವರೆಗೆ (12 ಮೀಸಲು ದಿನ)ಲಂಡನ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯವನ್ನು ಆಡಲಿದೆ. ಭಾರತ ಪಂದ್ಯಕ್ಕಾಗಿ ಕಳೆದ ತಿಂಗಳಲ್ಲಿ ತಂಡವನ್ನು ಪ್ರಕಟಿಸಿತ್ತು. ಮೇ 1 ರಂದು ನಡೆಯುತ್ತಿರುವ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯಕ್ಕಾಗಿ ಲಖನೌ ಸೂಪರ್​ ಜೈಂಟ್ಸ್​ನ ವೇಗದ ಬೌಲರ್​ ಉನಾದ್ಕತ್​ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಸಮಯದಲ್ಲಿ ಫೀಲ್ಡಿಂಗ್​ ಮಾಡುವಾಗ ಲಕ್ನೋ ನಾಯಕ ಕೆಎಲ್​ ರಾಹುಲ್​ ಗಾಯಗೊಂಡರು.

ರಾಹುಲ್​ ಗಂಭೀರ ಗಾಯಕ್ಕೆ ಒಳಗಾಗಿರುವುದರಿಂದ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಬಿಸಿಸಿಐ ತಿಳಿಸಿತ್ತಲ್ಲದೇ ಅವರ ಬದಲಿಯಾಗಿ ವಿಕೆಟ್​ ಕೀಪರ್​​ ಕಮ್​ ಬ್ಯಾಟರ್​ ಇಶಾನ್ ಕಿಶನ್ ಅವರನ್ನು ತಂಡದ ಸದಸ್ಯರಾಗಿ ಪ್ರಕಟಿಸಿತ್ತು. ಈ ವೇಳೆ, ಸ್ಟ್ಯಾಂಡ್‌ಬೈ ಆಟಗಾರರಾಗಿ ಮುಖೇಶ್ ಕುಮಾರ್ ಅವರನ್ನು ಬೌಲಿಂಗ್​ ವಿಭಾಗಕ್ಕೆ ಪ್ರಕಟಿಸಿತ್ತು. ಹಾಗೇ ಬ್ಯಾಟಿಂಗ್​ನಲ್ಲಿ ಸೂರ್ಯ ಕುಮಾರ್​ ಯಾದವ್​ ಹಾಗೂ ರುತುರಾಜ್ ಗಾಯಕ್ವಾಡ್​ ಅವರನ್ನು ಹೆಸರಿಸಿತ್ತು.

ಸದ್ಯ ಬಂದಿರುವ ವರದಿಯೊಂದರ ಪ್ರಕಾರ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿಗೆ ಒಳಗಾಗಿರುವ ಜಯದೇವ್​ ಉನಾದ್ಕತ್​ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಪ್ರಕಟಿತ ತಂಡದಲ್ಲಿದ್ದ ಉಮೆಶ್​ ಯಾದವ್ ಅವರು ಸಹ ಗಾಯಕ್ಕೆ ಒಳಗಾಗಿದ್ದು, ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಉಮೇಶ್​ ಅವರಿಗೆ ಕೆಕೆಆರ್​ನ ವೈದ್ಯಕೀಯ ತಂಡದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರದಿಂದ ಮತ್ತೆ ಅಭ್ಯಾಸಕ್ಕೆ ಮರಳಲಿರುವ ಜಯದೇವ್​:ವರದಿಯಲ್ಲಿ ಮೂಲಗಳು ತಿಳಿಸಿರುವಂತೆ, "ಜಯದೇವ್ ಉನದ್ಕತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಅವರು ಪ್ರಸ್ತುತ ಎನ್‌ಸಿಎಯಲ್ಲಿ ತಮ್ಮ ಪುನರ್ವಸತಿಗೆ ಒಳಗಾಗಿದ್ದಾರೆ. ಅವರು ಸೋಮವಾರದಿಂದ ನೆಟ್ಸ್‌ನಲ್ಲಿ ಮತ್ತೆ ಬೌಲಿಂಗ್ ಮಾಡಲು ಪ್ರಾರಂಭಿಸುತ್ತಾರೆ" ಎಂದು ಹೇಳಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​)

ಸ್ಟ್ಯಾಂಡ್‌ಬೈ ಆಟಗಾರರು: ರುತುರಾಜ್ ಗಾಯಕ್‌ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ:ಕೆ ಎಲ್ ರಾಹುಲ್​, ಉನಾದ್ಕತ್​ಗೆ ಮುಂಬೈನಲ್ಲಿ ಸ್ಕ್ಯಾನಿಂಗ್​: ಈ ಐಪಿಎಲ್​ ಆವೃತ್ತಿಯಿಂದ ಹೊರಕ್ಕೆ ​

ABOUT THE AUTHOR

...view details