ಜೈಪುರ:ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸುವಲ್ಲಿ ಯಶಸ್ವಿ ಆದರು. ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್‌ಗಳು ಚೆನ್ನೈ ಸೂಪರ್ ಕಿಂಗ್ಸ್‌ಗೆ 32 ರನ್‌ಗಳ ಸೋಲುಣಿಸಿ, ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.
ಆರ್ ಆರ್ ತಂಡದ ಸ್ಪಿನ್ನರ್ಗಳಾದ ಆಡಮ್ ಝಂಪಾ 3 ಓವರ್‌ಗಳಲ್ಲಿ 22ರನ್ ನೀಡಿ ಮೂರು ವಿಕೆಟ್ ಉರುಳಿಸಿದರು. ರವಿಚಂದ್ರನ್ ಅಶ್ವಿನ್ 35 ರನ್ ನೀಡಿ ಪ್ರಮುಖ ಎರಡು ವಿಕೆಟ್ ಪಡೆದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ ರುತುರಾಜ್ ಗಾಯಕ್‌ವಾಡ್ 47 ಮತ್ತು ಶಿವಂ ದುಬೆ 52 ರನ್ ಬಾರಿಸಿದರಾದರೂ ಸಿಎಸ್‌ಕೆ 6 ವಿಕೆಟ್‌ಗೆ 170 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 32 ರನ್‌ಗಳ ಸೋಲು ಅನುಭವಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿತು. ಇನ್ನು ಈ ಗೆಲುವಿನ ಮೂಲಕ ಆರ್ಆರ್ ತಂಡ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 202 ರನ್ ಬಾರಿಸುವ ಮೂಲಕ ಧೋನಿ ಪಡೆಗೆ ಗೆಲ್ಲಲು 203 ರನ್‌ಗಳ ಗುರಿ ನೀಡಿತು. ಆರ್ ಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗು ಜೋಸ್ ಬಟ್ಲರ್ ಪವರ್ ಫ್ಲೇನಲ್ಲಿ ಉತ್ತಮ ಆಟವಾಡುವ ಮೂಲಕ ತಂಡದ ಮೊತ್ತ 50 ರನ್ ಗಡಿ ದಾಟಿಸಿದರು. ಹೀಗೆ ಆರ್ಕಷಕ ಬೌಂಡರಿ ಸಿಕ್ಸರ್ ಹೊಡೆಯುತ್ತಿದ್ದ ಈ ಜೋಡಿಯನ್ನು 9ನೇ ಓವರ್ನಲ್ಲಿ ರವೀಂದ್ರ ಜಡೇಜಾ ಬೌಲಿಂಲಿಗ್ ಮಾಡಿ ಜೋಸ್ ಬಟ್ಲರ್ನನ್ನು ಔಟ್ ಮಾಡುವ ಮೂಲಕ ಬೇರ್ಪಡಿಸಿದರು. ಜೋಸ್ ಬಟ್ಲರ್ 21 ಬಾಲ್ನಲ್ಲಿ 27 ರನ್ ಗಳಿಸಿ ಶಿವಂ ದುಬೆಗೆ ಕ್ಯಾಚ್ ಕೊಟ್ಟು ಪೆವಿಲಿಯನ್ಯತ್ತ ಹೆಜ್ಜೆಹಾಕಿದರು.