ಕರ್ನಾಟಕ

karnataka

ETV Bharat / sports

IPL​​ 2022: ನಾಲ್ವರು ಪ್ಲೇಯರ್ಸ್​ಗೆ ಉಳಿಸಿಕೊಳ್ಳಲು ಅವಕಾಶ... RTMಗಿಲ್ಲ ಚಾನ್ಸ್​​​! -

ಐಪಿಎಲ್​​ ತಂಡಗಳು ಮುಂದಿನ ವರ್ಷದ ಟೂರ್ನಿಗಾಗಿ ನಾಲ್ವರು ಪ್ಲೇಯರ್ಸ್​​ಗಳಿಗೆ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆರ್​​ಟಿಎಂಗೆ ಅನುಮತಿ ನೀಡುವುದಿಲ್ಲವೆಂದು ಬಿಸಿಸಿಐ ತಿಳಿಸಿರುವುದಾಗಿ ವರದಿಯಾಗಿದೆ.

IPL auction
IPL auction

By

Published : Oct 22, 2021, 3:02 PM IST

Updated : Oct 22, 2021, 3:25 PM IST

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್​ ಲೀನ್​​ನ 15ನೇ ಆವೃತ್ತಿಗಾಗಿ ಈಗಿನಿಂದಲೇ ಭರ್ಜರಿ ತಯಾರಿ ಆರಂಭಗೊಂಡಿದ್ದು, ಎರಡು ತಂಡಗಳು ಸೇರ್ಪಡೆ ಮಾಡಿಕೊಳ್ಳಲು ಈಗಾಗಲೇ ಬಿಡ್​​ ಖರೀದಿ ಕೂಡ ಮುಗಿದಿದೆ. ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ.

ಮುಂದಿನ ಆವೃತ್ತಿ ಐಪಿಎಲ್​ಗಾಗಿ ಡಿಸೆಂಬರ್ ತಿಂಗಳಲ್ಲಿ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಈಗಾಗಲೇ 8 ಫ್ರಾಂಚೈಸಿಗಳು ಕೇವಲ ನಾಲ್ವರು ಆಟಗಾರರಿಗೆ ಉಳಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ, ಆರ್​​ಟಿಎಂಗೆ ಯಾವುದೇ ರೀತಿಯ ಅವಕಾಶವಿಲ್ಲ ಎಂದಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಬ್ಬರು ಭಾರತೀಯರು, ಇಬ್ಬರು ವಿದೇಶಿ ಆಟಗಾರರು ಅಥವಾ ಮೂವರು ಭಾರತೀಯ ಪ್ಲೇಯರ್ಸ್​, ಓರ್ವ ವಿದೇಶಿ ಆಟಗಾರನಿಗೆ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿರಿ:ಐಪಿಎಲ್ ಹೊಸ ತಂಡಗಳ ಹರಾಜು ಪ್ರಕ್ರಿಯೆಗೆ ದಿನಗಣನೆ: ಅಹಮದಾಬಾದ್, ಲಖನೌ ಹೊಸ ಫ್ರಾಂಚೈಸಿ?

ಆದರೆ, ಈ ಹಿಂದೆ ಮೂವರು ಸ್ವದೇಶಿ ಹಾಗೂ ಇಬ್ಬರು ವಿದೇಶಿ ಪ್ಲೇಯರ್ಸ್​ಗೆ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆರ್​​​ಟಿಎಂ( Right to match card) ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ, ಇದೀಗ ಅದಕ್ಕೆ ಅವಕಾಶವಿಲ್ಲ ಎಂದು ವರದಿಯಾಗಿದೆ.

ಮುಂದಿನ ವರ್ಷದ ಐಪಿಎಲ್​ನಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು, ಅದಕ್ಕಾಗಿ ಬಿಡ್​​ ಖರೀದಿ ಸಮಯವಕಾಶ ಈಗಾಗಲೇ ಮುಕ್ತಾಯಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅಹಮದಾಬಾದ್​ ಹಾಗೂ ಲಖನೌ ಹೊಸ ಫ್ರಾಂಚೈಸಿಗಳಾಗಿ ಕಾಣಿಸಿಕೊಳ್ಳಬಹುದು ಎನ್ನಲಾಗ್ತಿದೆ. ಐಪಿಎಲ್‌ನ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆ ಅಕ್ಟೋಬರ್ 25 ರಂದು ನಡೆಯುವ ಸಾಧ್ಯತೆ ಇದೆ.

Last Updated : Oct 22, 2021, 3:25 PM IST

ABOUT THE AUTHOR

...view details