ಮುಂಬೈ: ಲಿಯಾಮ್ ಲಿವಿಂಗ್ಸ್ಟೋನ್ರ ಭರ್ಜರಿ ಆಟದಿಂದಾಗಿ ಚೆನ್ನೈ ಸೂಪರ್ ಕಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೇಟ್ ನಷ್ಟಕ್ಕೆ 180 ರನ್ಗಳ ಸವಾಲಿನ ಮೊತ್ತ ಪೇರಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭ ಮಾಡಿದ ಪಂಜಾಬ್ ಕಿಂಗ್ಸ್ಗೆ ಮುಖೇಶ್ ಚೌಧರಿ ನಾಯಕ ಮಯಾಂಕ್ ಅಗರ್ವಾಲ್(4) ವಿಕೇಟ್ ಪಡೆದು ಆರಂಭಿಕ ಆಘಾತವನ್ನು ನೀಡಿದರು. ನಂತರ ಬಂದ ಭಾನುಕಾ ರಾಜಪಕ್ಸೆ(9) ಧೋನಿ ಮಾಡಿದ ರನ್ ಔಟ್ಗೆ ಬಲಿಯಾದರು.
ಈ ಹಂತದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡಿದ್ದು ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಶಿಖರ್ ಧವನ್. ಲಿಯಾಮ್ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 32 ಎಸೆತಗಳಲ್ಲಿ 5 ಸಿಕ್ಸ್ ಮತ್ತು 5 ಬೌಂಡರಿಗಳಿಂದ 62ರನ್ ಮಾಡಿ ರವೀಂದ್ರ ಜಡೇಜ ಅವರಿಗೆ ವಿಕೇಟ್ ಒಪ್ಪಿಸಿದರು. ಶಿಖರ್ ಧವನ್(33) ಲಿಯಾಮ್ಗೆ ಬೆಂಬಲವಾಗಿ ನಿಂತರೂ ಸಹ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಬಂದ ಶಾರುಖ್ ಖಾನ್(6), ಓಡಿಯನ್ ಸ್ಮಿತ್(3), ರಾಹುಲ್ ಚಾಹರ್(12), ಕಗಿಸೊ ರಬಾಡ(12*) ,ವೈಭವ್ ಅರೋರಾ(1*) ರನ್ ಗಳಿಸಿದರು.