ಕರ್ನಾಟಕ

karnataka

ETV Bharat / sports

IPL-2021: ಸನ್​ರೈಸರ್ಸ್ ಮೇಲೆ ಸವಾರಿ ಮಾಡಿದ ನೈಟ್​ ರೈಡರ್ಸ್​ - ಕೊಲ್ಕತ್ತಾ ನೈಟ್‌ ರೈಡರ್ಸ್‌

ಐಪಿಎಲ್ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ಕೆಕೆಆರ್ ತಂಡವು ಸನ್‌ರೈಸರ್ಸ್‌ ತಂಡವನ್ನು 10 ರನ್ನುಗಳಿಂದ ಮಣಿಸಿತು. ಕೆಕೆಆರ್ ನೀಡಿದ 188 ರನ್ನುಗಳ ಗುರಿ ಬೆನ್ನತ್ತಿದ ಹೆದರಾಬಾದ್‌ 5 ವಿಕೆಟ್‌ಗಳನ್ನು ಕಳೆದುಕೊಂಡು 177 ರನ್ ಗಳಿಸಲಷ್ಟೇ ಶಕ್ತವಾಯಿತು. ಮನೀಶ್ ಪಾಂಡೆ ಏಕಾಂಗಿ ಹೋರಾಟ ಫಲ ನೀಡಲಿಲ್ಲ.

IPL-2021
IPL-2021

By

Published : Apr 12, 2021, 7:20 AM IST

ಚೆನ್ನೈ (ತಮಿಳುನಾಡು):ನಿತೀಶ್ ರಾಣಾ ಹಾಗು ರಾಹುಲ್ ತ್ರಿಪಾಠಿ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಹಾಗು ಬೌಲರ್‌ಗಳ ಮಿಂಚಿನ ದಾಳಿಯ ಕಾರಣ ಸನ್‌ರೈಸರ್ಸ್‌ ವಿರುದ್ಧ ಕೊಲ್ಕತ್ತಾ ನೈಟ್‌ರೈಡರ್ಸ್‌ 10 ರನ್​ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿತೀಶ್ ರಾಣಾ ಅವರ 80 ಹಾಗೂ ರಾಹುಲ್ ತ್ರಿಪಾಠಿ ಅವರ ಆಕರ್ಷಕ 53 ರನ್ ಗಳ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 187 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.

ಈ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಮನೀಶ್ ಪಾಂಡೆ 61 ಹಾಗೂ ಜಾನಿ ಬೈರ್‌ಸ್ಟೋವ್ 55 ರನ್ ಗಳ ಹೊರತಾಗಿಯೂ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌:ಕೋಲ್ಕತಾ ನೈಟ್ ರೈಡರ್ಸ್‌ 20 ಓವರ್​​ಗಳಲ್ಲಿ 187/6 (ನಿತೇಶ್ ರಾಣಾ 80, ರಾಹುಲ್ ತ್ರಿಪಾಠಿ 53, ರಶೀದ್‌ ಖಾನ್ 2/24)

ಸನ್‌ರೈಸರ್ಸ್ ಹೈದರಾಬಾದ್ 20 ಓವರ್​​ಗಳಲ್ಲಿ 177/5 (ಮನೀಶ್ ಪಾಂಡೆ 62 *, ಬೈರ್‌ಸ್ಟೋವ್ 55, ಪ್ರಸಿದ್ಧ್ ಕೃಷ್ಣ 2/35)

ಇದನ್ನೂ ಓದಿ : ಹೊಸ ಹುರುಪಿನಲ್ಲಿರುವ ಪಂಜಾಬ್ ಕಿಂಗ್ಸ್​ಗೆ ರಾಯಲ್ಸ್​ ಸವಾಲು

For All Latest Updates

ABOUT THE AUTHOR

...view details