ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಪ್ರಿಯರಿಗೆ ಗುಡ್​ನ್ಯೂಸ್.. IPL ಪುನಾರಂಭಿಸಲು BCCI ನಿರ್ಧಾರ.. ಎಲ್ಲಿ ನಡೆಯತ್ತೆ ಮ್ಯಾಚ್? - 14ನೇ ಆವೃತ್ತಿಯ ವಿವೋ ಐಪಿಎಲ್​ ಟೂರ್ನಿ

ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ ಮ್ಯಾಚ್​​ಗಳನ್ನು ನಡೆಸುವುದಾಗಿ ತಿಳಿಸಿದೆ..

Board of Control for Cricket in India
IPL ಪುನಾರಂಭಿಸಲು BCCI ನಿರ್ಧಾರ.

By

Published : May 29, 2021, 2:09 PM IST

ನವದೆಹಲಿ :ಕೋವಿಡ್​ ಉಲ್ಬಣದಿಂದಾಗಿ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ವಿವೋ ಐಪಿಎಲ್​ ಟೂರ್ನಿಯನ್ನು ಪುನಾರಂಭಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ಮಾಡಿದೆ.

ಆದರೆ, ಟೂರ್ನಿಯ ಉಳಿದ 31 ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ. ಬದಲಾಗಿ ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್‌ ಅರಬ್ ಎಮಿರೇಟ್ಸ್-ಯುಎಇ)ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ ಮ್ಯಾಚ್​​ಗಳನ್ನು ನಡೆಸುವುದಾಗಿ ತಿಳಿಸಿದೆ.

ABOUT THE AUTHOR

...view details