ಕರ್ನಾಟಕ

karnataka

ETV Bharat / sports

IPL 2023: ಅಂತಿಮ ಪಂದ್ಯಗಳಿಗೆ ವೇದಿಕೆ ಸಜ್ಜು; ಗುಜರಾತ್‌ಗೆ ಫೈನಲ್​ ಪಂದ್ಯದ ಆತಿಥ್ಯ - ಕ್ವಾಲಿಫೈಯರ್ 2

ಐಪಿಎಲ್​ 16ನೇ ಆವೃತ್ತಿಯ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳ ಕ್ರೀಡಾಂಗಣಗಳ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.​

IPL final in Ahmedabad on May 28 Chennai gets Qualifier 1 and Eliminator
IPL 2023: ಅಂತಿಮ ಪಂದ್ಯಗಳಿಗೆ ವೇದಿಕೆ ಸಜ್ಜು.. ಫೈನಲ್​ ಪಂದ್ಯದ ಆತಿಥ್ಯ ಈ ಬಾರಿಯೂ ಗುಜರಾತ್​ಗೆ

By

Published : Apr 21, 2023, 9:53 PM IST

ಮುಂಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​ 2023ರ ಕಾಲು ಭಾಗದಷ್ಟು ಪಂದ್ಯಗಳು ಮುಕ್ತಾಯವಾಗಿವೆ. ಈ ಸಂದರ್ಭದಲ್ಲಿ ಬಿಸಿಸಿಐ ಅಂತಿಮ ಹಂತದ ಪಂದ್ಯಗಳು ಎಲ್ಲಿ ನಡೆಯಲಿವೆ ಎಂಬ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮೇ 26 ಮತ್ತು 28 ರಂದು ನಡೆಯಲಿರುವ ಕ್ವಾಲಿಫೈಯರ್ 2 ಮತ್ತು ಫೈನಲ್‌ಗೆ ಆತಿಥ್ಯ ವಹಿಸಲಿದೆ ಎಂದು ಬಿಸಿಸಿಐ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್​) ಮೇ 23 ಮತ್ತು 24 ರಂದು ಕ್ರಮವಾಗಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ನಡೆಯಲಿದೆ. ಈ ಹಿಂದೆ ಲೀಗ್​ನ ಡಬಲ್​ ರಾಬಿನ್​ ರೌಂಡ್​ನ ವೇಳಾ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಪೈನಲ್​ ಪಂದ್ಯ ನಡೆಯುವ ದಿನಾಂಕ ಘೋಷಣೆಯಾಗಿತ್ತಾದರೂ, ಕ್ರೀಡಾಂಗಣಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ.

16ನೇ ಆವೃತ್ತಿಯ ಐಪಿಎಲ್​ ಮಾರ್ಚ್​ 31 ರಂದು ಅಹಮದಾಬಾದ್​ ಕ್ರೀಡಾಂಗಣದಿಂದ ಆರಂಭವಾಗಿತ್ತು. ಉದ್ಘಾಟನಾ ಪಂದ್ಯಕ್ಕೂ ಮುನ್ನ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಮತ್ತು ಅರಿಜಿತ್ ಸಿಂಗ್ ಭರ್ಜರಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಮೊದಲ ಪಂದ್ಯ ನಾಲ್ಕು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ನಡುವೆ ನಡೆದಿತ್ತು. ಲೀಗ್​ ಆರಂಭವಾದ ಕ್ರೀಡಾಂಗಣದಲ್ಲೇ ಕೊನೆಯ ಪಂದ್ಯವನ್ನೂ ಆಡಿಸಲಾಗುತ್ತಿದೆ.

2022ರ ಆವೃತ್ತಿಯಲ್ಲಿ ಕೋವಿಡ್​ ಕಾರಣದಿಂದ ಇಡೀ ಲೀಗ್ ಅ​ನ್ನು ಸೀಮಿತ ಕ್ರೀಡಾಂಗಣದಲ್ಲಿ ಆಡಿಸಲಾಗಿತ್ತು. ಮುಂಬೈ ಮತ್ತು ಪುಣೆಯಲ್ಲಿ ನಾಲ್ಕು ಸ್ಥಳಗಳಲ್ಲಿ ಆಟಗಾರರಿಗೆ ಬಯೋ ಬಬಲ್​ ವ್ಯವಸ್ಥೆ ಮಾಡಿಸಿ ಆಡಿಸಲಾಗಿತ್ತು. ಈ ವರ್ಷ ಮತ್ತೆ ತವರು ಮತ್ತು ಪ್ರವಾಸಿ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಟೂರ್ನಿಯ ಪ್ರತಿ ಪಂದ್ಯದಲ್ಲೂ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದಾರೆ. 22ರ ಪ್ಲೇ-ಆಫ್ ಮತ್ತು ಫೈನಲ್ ಅನ್ನು ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ನಡೆಸಲಾಗಿತ್ತು.

ಪ್ರಸಕ್ತ ಆವೃತ್ತಿಯಲ್ಲಿ 10 ತಂಡಗಳಿಂದ 70 ಪಂದ್ಯಗಳನ್ನು ಆಡಿಸಲಾಗುತ್ತಿದ್ದು, ಲೀಗ್​ನ ಕೊನೆಯ ಪಂದ್ಯ ಮೇ 21 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.

ಗುಜರಾತ್​ನಲ್ಲೇ ಫೈನಲ್​ ಏಕೆ?:ಗುಜರಾತ್​ನ ಮೊಟೆರಾ ಕ್ರೀಡಾಂಗಣವನ್ನು ಕೆಲ ವರ್ಷಗಳ ಹಿಂದೆ ನವೀಕರಿಸಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್​ಕ್ಲೇವ್​ ಎಂದು ಕರೆಯಲಾಗುತ್ತದೆ. ಇದರಲ್ಲಿ ಬೇರೆ ಬೇರೆ ಕ್ರೀಡೆಗೆ ಅವಕಾಶವಿದ್ದು, ಕ್ರಿಕೆಟ್​ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಕರೆಯಲಾಗುತ್ತದೆ. ಇದು 1 ಲಕ್ಷದ 32 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಭಾರತದ ಅತಿ ದೊಡ್ಡ ಕ್ರೀಡಾಂಗಣ ಎಂಬ ಖ್ಯಾತಿಯೂ ಇದಕ್ಕಿದೆ. ಹೀಗಾಗಿ ಇಲ್ಲಿ ಅಂತಿಮ ಪಂದ್ಯ ಆಯೋಜಿಸಲಾಗಿದೆ.

ಇದನ್ನೂ ಓದಿ:ಪೊಲೀಸರಿಗೆ ಧನ್ಯವಾದ ತಿಳಿಸಿದ ಡೆಲ್ಲಿ ನಾಯಕ ಡೇವಿಡ್​ ವಾರ್ನರ್

ABOUT THE AUTHOR

...view details