ಕರ್ನಾಟಕ

karnataka

ETV Bharat / sports

ವಾರ್ನರ್ ಅಬ್ಬರ, ಅಕ್ಷರ್​​ ಸಮಯೋಚಿತ ಆಟ: ಗೆಲುವಿನ ಖಾತೆ ತೆರೆದ ಡೆಲ್ಲಿ, ಕೆಕೆಆರ್​ಗೆ ಸತತ ಮೂರನೇ ಸೋಲು - Etv Bharat Kannada

ಕೆಕೆಆರ್​ ವಿರುದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗೆಲವು ಸಾಧಿಸಿದ್ದು, ಟೂರ್ಮಿಯಲ್ಲಿ ಮೊದಲ ಜಯಗಳಿಸಿದೆ.

ಗೆಲುವಿನ ಖಾತೆ ತೆರೆದ ಡೆಲ್ಲಿ
ಗೆಲುವಿನ ಖಾತೆ ತೆರೆದ ಡೆಲ್ಲಿ

By

Published : Apr 21, 2023, 7:45 AM IST

Updated : Apr 21, 2023, 8:20 AM IST

ದೆಹಲಿ: ಸತತ ಸೋಲಿನಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೊನೆಗೂ ಮೊದಲ ಜಯ ಗಳಿಸಿದೆ. ಗುರುವಾರ ಕೆಕೆಆರ್​ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 4 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಐಪಿಎಲ್​ 16ನೇ ಆವೃತ್ತಿಯಲ್ಲಿ ಗೆಲುವಿನ ಖಾತೆಯನ್ನು ತೆರೆದಿದೆ. ಇಲ್ಲಿಯ ಅರುಣ್​ ಜೆಟ್ಲಿ ಮೈದಾನದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾಯಿತು.

ಮೊದಲಿಗೆ ಟಾಸ್​ ಗೆದ್ದ ವಾರ್ನರ ಪಡೆ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ, ಡೆಲ್ಲಿ ಬೌಲರ್​ಗಳ ಮಾರಕ ದಾಳಿಗೆ ಸಿಲುಕಿ ನಿಗದಿತ 20 ಓವರ್​ಗಳಲ್ಲಿ ಕೇವಲ 127 ರನ್ ಗಳಿಗೆ ಸರ್ವಪತನ ಕಂಡಿತು. ಕೆಕೆಆರ್​ ಪರ ಜೇಸನ್ ರಾಯ್ (43: 39 ಎಸೆತಗಳಲ್ಲಿ 1x6, 5x4) ಮತ್ತು ರಸೆಲ್ (38: 31 ಎಸೆತಗಳಲ್ಲಿ 4x6, 1x4) ಹೊರತು ಪಡಿಸಿ ಉಳಿದ ಆಟಗಾರುರು ಬುಹುಬೇಗ ತಮ್ಮ ವಿಕೆಟ್​ಗಳನ್ನು ಕೈಚೆಲ್ಲಿ ಪೆವಿಲಿಯನ್​ಗೆ ಮರಳಿದರು.

ಸಾಧರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 19.2 ಓವರ್​ಗೆ 6 ವಿಕೆಟ್​ ನಷ್ಟಕ್ಕೆ 128ರನ್​ಗಳ ಬಾರಿಸುವ ಮೂಲಕ ಕೆಕೆಆರ್​ ವಿರುದ್ದ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಆರಂಭಿಕ ಆಟಗಾರರಾದ ವಾರ್ನರ್​ ಮತ್ತು ಪೃಥ್ವಿ ಶಾ ಜೋಡಿ ನಾಲ್ಕು ಓವರ್​ಗಳಲ್ಲಿ 34 ರನ್​ ಕಲೆ ಹಾಕುವ ಮೂಲಕ ಉತ್ತಮ ಆರಂಭ ಒದಗಿಸಿದರು. ನಂತರ ವರಣ್​ ಚಕ್ರವರ್ತಿ ಎಸೆತಕ್ಕೆ ಸಿಲುಕಿದ ಪೃಥ್ವಿ ಶಾ (13) ಬೌಲ್ಡ್​ ಆಗಿ ಪರೆವಿಲಿಯನ್​ ಸೇರಿದರು. ಇದರೊಂದಿಗೆ ಡೆಲ್ಲಿ 38 ರನ್​ಗಳಿಗೆ ತನ್ನ ಮೊದಲ ವಿಕೆಟ್​ ಕಳೆದುಕೊಂಡಿತು.

ಮತ್ತೊಂದೆಡೆ ಉತ್ತಮ ಫಾರ್ಮ್​ನಲ್ಲಿದ್ದ ನಾಯಕ ವಾರ್ನರ್ ಬೌಂಡರಿಗಳ ಬಾರಿಸುತ್ತ​ ನಿಧಾನವಾಗಿ ತಂಡದ ಸ್ಕೋರ್​ಅನ್ನು ಹೆಚ್ಚಿಸತೊಡಗಿದರು. ಪವರ್​ ಪ್ಲೇ ಮುಕ್ತಾಯದ ವೇಳೆಗೆ ತಂಡ 1 ವಿಕೆಟ್​ ನಷ್ಟಕ್ಕೆ 61ರನ್​ಗಳ ಕಲೆ ಹಾಕಿತ್ತು. ಇದರೊಂದಿಗೆ ತಂಡ ಸುಲಭವಾಗಿ ಗೆಲುವಿನ ದಡ ಸೇರಲಿದೆ ಎಂದು ಭಾವಿಸಲಾಗಿತ್ತು. ಪೃಥ್ವಿ ಶಾ ನಿರ್ಗಮದ ನಂತರ ಕ್ರೀಸ್​ಗಿಳಿದಿದ್ದ ಮಿಚೆಲ್​ ಮಾರ್ಷ್​ (2) ನಿತೇಶ್​ ರಾಣ ಎಸೆತಕ್ಕೆ ಔಟಾದರು. ಫಿಲಿಫ್​ ಸಾಲ್ಟ್​ (5) ಅನ್​ಕುಲ್​ ರಾಯ್​ಗೆ ವಿಕೆಟ್​ ಒಪ್ಪಿಸಿ ಹೊರನಡೆದರು.

9 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ತಂಡ 3 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. 14ನೇ ಓವರ್​ನ ಮೊದಲ ಎಸೆತದಲ್ಲಿ ವಾರ್ನರ್ (57) ಚಕ್ರವರ್ತಿಗೆ ಕ್ಯಾಚಿತ್ತು ನಿರ್ಗಮಿಸಿದಾಗ ಡೆಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. 15 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ 4 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತು. ಬಳಿಕ ಕ್ರೀಸ್​ಗಿಳಿದ ಮನಿಶ್​ ಪಾಂಡೆ (21) ಉತ್ತಮ ಪ್ರದರ್ಶನ ತೋರಿ ಅನ್​ಕುಲ್​ ರಾಯ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಅಕ್ಷರ್​ ಪಾಟೇಲ್​ (19 ಅಜೇಯ) ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್​ ವಿವಿರ, ಕೆಕೆಆರ್​: 20 ಓವರ್‌ಗಳಿಗೆ 127-10 (ಜೆಸನ್​ ರಾಯ್​ 43, ರಸೆಲ್ 38; ಮುಕೇಶ್​​ ಕುಮಾರ್​ 34ಕ್ಕೆ1 ಇಶಾಂತ್​​ ಶರ್ಮಾ, ಅನ್ರಿಚ್​ ನಾರ್ಟ್ಜೆ, ಅಕ್ಷರ್​ ಪಾಟೇಲ್​,ಕುಲ್​ದೀಪ್​ ಯಾದವ್​ ತಲಾ ಎರಡು ವಿಕೆಟ್​)​

ಡೆಲ್ಲಿ ಕ್ಯಾಪಿಟಲ್ಸ್​:19.2 ಓವರ್‌ಗಳಿಗೆ 128-6 (ಡೇವಿಡ್​ ವಾರ್ನರ್ 57, ಮನಿಶ್​ ಪಾಂಡೆ 21, ಅಕ್ಷರ್​ ಪಾಟೇಲ್​ 19; ವರುಣ್​ ಚಕ್ರವರ್ತಿ, ಅನ್​ಕುಲ್​ ರಾಯ್​, ನಿತೇಶ್​​ ರಾಣ ತಲಾ ಎರಡು ವಿಕೆಟ್​)

ಇದನ್ನೂ ಓದಿ:IPL: ಡುಪ್ಲೆಸಿಸ್‌, ಕೊಹ್ಲಿ, ಸಿರಾಜ್‌ ಆಕರ್ಷಕ ಪ್ರದರ್ಶನ; ಪಂಜಾಬ್​​ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ

Last Updated : Apr 21, 2023, 8:20 AM IST

ABOUT THE AUTHOR

...view details