ಅಬುಧಾಬಿ:ಐಪಿಎಲ್ -2021ನ ತನ್ನ ಮೊದಲ ಐಪಿಎಲ್ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಅನುಭವಿಸಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆಡಿದ ಆರ್‌ಸಿಬಿ 19 ಓವರ್ನಲ್ಲಿ ಆಲ್ಔಟ್ ಆಗಿ ಕೇವಲ 92 ರನ್ ಗಳಿಸಲು ಮಾತ್ರವೇ ಶಕ್ತವಾಗಿತ್ತು.
ಈ ರನ್ ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ಕೇವಲ 10 ಓವರ್ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 94 ರನ್ ಗಳಿಸುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಇದು ವಿರಾಟ್ ಕೊಹ್ಲಿಗೆ 200ನೇ ಪಂದ್ಯವಾಗಿದ್ದು, ಕೇವಲ 5 ರನ್ ಗಳಿಸಿ, ನಿರಾಸೆ ಪ್ರಸಿಧ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ಗೆ ತೆರಳಿದರು. ದೇವದತ್ ಪಡಿಕ್ಕಲ್ 22, ಶ್ರೀಕಾರ್ ಭರತ್ 16, ಹರ್ಷಲ್ ಪಟೇಲ್ 12 ರನ್ ಗಳಿಸಿದ್ದು ಬಿಟ್ಟರೆ ಇನ್ಯಾರೂ ಎರಡಂಕಿಯ ರನ್ ಮುಟ್ಟಿಲ್ಲ. ಎಬಿ ಡಿಲಿಯರ್ಸ್ ಕೂಡಾ ಶೂನ್ಯಕ್ಕೆ ಔಟಾಗಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಕೇವಲ 92 ರನ್ ಬೆನ್ನತ್ತಿದ ಕೋಲ್ಕತಾ ತಂಡ, ಕೇವಲ 1 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. ಶುಭ್ಮನ್ ಗಿಲ್ 48 ರನ್ ಮತ್ತು ವೆಂಕಟೇಶ್ ಅಯ್ಯರ್ 41 ರನ್ ಬಾರಿಸಿದ್ದು, 69 ಎಸೆತಗಳು ಬಾಕಿ ಇರುವಂತೆ ಪಂದ್ಯ ತನ್ನದಾಗಿಸಿಕೊಂಡಿತು.