ದುಬೈ:ರುತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 156 ರನ್ಗಳ ಸವಾಲಿನ ಮೊತ್ತ ದಾಖಲಿಸಿದೆ.
ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 14ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಚೆನ್ನೈ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿರಣ್ ಪೊಲಾರ್ಡ್ ನೇತೃತ್ವದಲ್ಲಿ ಕಣಕ್ಕೆ ಇಳಿದ ಮುಂಬೈ ಆರಂಭದಿಂದಲೇ ಚೆನ್ನೈ ಮೇಲೆರಗಿತು. ಚೆನ್ನೈನ ಫಾಪ್ ಡು ಪ್ಲೆಸಿಸ್, ಮೋಯಿನ್ ಅಲಿ, ಆಂಬುಟಿ ರಾಯುಡು ಸೊನ್ನೆ ಸುತ್ತಿ ಔಟಾದರು. ಭರವಸೆಯ ಆಟಗಾರ ಸುರೇಶ್ ರೈನಾ (4), ನಾಯಕ ಧೋನಿ (3) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
ರವೀಂದ್ರ ಜಡೇಜಾ (26), ಡ್ವೇನ್ ಬ್ರಾವೋ (23) ರನ್ ತಂಡಕ್ಕೆ ಆಸರೆಯಾದರು. ಇನ್ನು ಏಕಾಂಗಿ ಹೋರಾಟ ನಡೆಸಿದ ರುತುರಾಜ್ ಗಾಯಕ್ವಾಡ್ ಔಟಾಗದೇ 88 ರನ್ ಸಿಡಿಸಿ ತಂಡವನ್ನು ಕಾಪಾಡಿದರು.
ಆರಂಭದಿಂದ ಮಾರಕ ದಾಳಿಗಿಳಿದ ಮುಂಬೈ ವೇಗಿಗಳಲ್ಲಿ ಟ್ರೆಂಟ್ ಬೋಲ್ಟ್, ಆಡಮ್ ಮಿಲ್ನೆ, ಬೂಮ್ರಾ ತಲಾ 2 ವಿಕೆಟ್ ಕಬಳಿಸಿ ಚೆನ್ನೈ ತಂಡವನ್ನು ಕಟ್ಟಿ ಹಾಕಿದರು.