ಕರ್ನಾಟಕ

karnataka

ETV Bharat / sports

ಗಿಲ್​ ಅಬ್ಬರ... ಮೋಹಿತ್ ಮೋಡಿ.. ಸತತ ಎರಡನೇ ಬಾರಿ ಐಪಿಎಲ್ ಫೈನಲ್​ಗೆ ಗುಜರಾತ್​ ಎಂಟ್ರಿ - ಶುಭಮನ್​ ಗಿಲ್

ಐಪಿಎಲ್​ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಗುಜರಾತ್​ ತಂಡ ಫೈನಲ್​ಗೆ ಪ್ರವೇಶಿಸಿದೆ. ಮೇ 28ರಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡದೊಂದಿಗೆ ಪ್ರಶಸ್ತಿಗಾಗಿ ಕದಾಟ ನಡೆಸಲಿದೆ

IPL 2023
IPL 2023

By

Published : May 27, 2023, 12:56 AM IST

Updated : May 27, 2023, 1:09 AM IST

ಅಹಮದಾಬಾದ್‌ (ಗುಜರಾತ್​): ಐಪಿಎಲ್​ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್​ ಭರ್ಜರಿ ಗೆಲವಿನೊಂದಿಗೆ ಫೈನಲ್​ಗ ಲಗ್ಗೆ ಇಟ್ಟಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಹಾರ್ದಿಕ್​ ಪಾಂಡ್ಯ ನೇತೃತ್ವದ ಪಡೆಯು ಶುಭಮನ್​ ಗಿಲ್​ ಅವರ ದಾಖಲೆಯ ಶತಕದ ನೆರವಿನೊಂದಿಗೆ 233 ರನ್​ಗಳ ಬೃಹತ್​​ ಮೊತ್ತ ಪ್ರೇರಿಸಿತ್ತು. ಮುಂಬೈ ತಂಡ 18.2 ಓವರ್​ಗಳಲ್ಲಿ 171 ರನ್​ಗಳಿಗೆ ಸರ್ವಪತನ ಕಂಡಿತು.

ಬೃಹತ್​ ರನ್​ ಟಾರ್ಗೆಟ್​ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸೂರ್ಯಕುಮಾರ್‌ ಯಾದವ್‌, ಕ್ಯಾಮರೂನ್‌ ಗ್ರೀನ್‌ ಹಾಗೂ ತಿಲಕ್‌ ವರ್ಮ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಬ್ಯಾಟರ್​ನಿಂದ ದೊಡ್ಡ ಮೊತ್ತದ ರನ್​ಗಳು ಬರಲಿಲ್ಲ. ಮೊಹಮ್ಮದ್​ ಶಮಿ ಎಸೆತದ ಮೊದಲ ಓವರ್​​ನಲ್ಲೇ ನೆಹಲ್​ ವಧೇರಾ ಕೇವಲ 4 ರನ್​ಗೆ ಪೆವಿಲಿಯನ್​ ಸೇರಿದರು. ನಾಯಕ ರೋಹಿತ್​ ಶರ್ಮಾ ಅವರನ್ನೂ ಶಮಿ 8 ರನ್​ಗೆ ಕಟ್ಟಿ ಹಾಕಿದರು. ಈ ನಡುವೆ ಕ್ಯಾಮರೂನ್ ಗ್ರೀನ್ ಮತ್ತು ತಿಲಕ್​ ವರ್ಮಾ 50 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮಾಡಿದರು.​

ಅದರಲ್ಲೂ ತಿಲಕ್​ ವರ್ಮಾ ಸ್ಫೋಟಕ ಬ್ಯಾಟಿಂಗ್​ ಪ್ರರ್ದಶಿಸಿದರು. ಕೇವಲ 14 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್​ ಸಮೇತ 43 ರನ್​ ಸಿಡಿಸಿ ರಶೀದ್​ ಖಾನ್​ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರದಲ್ಲಿ ಗ್ರೀನ್​ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಈ ಜೋಡಿ ಸಹ 50 ರನ್​ಗಳ ಜೊತೆಯಾಟ ನೀಡಿತು. ಆದರೆ, ತಾಳ್ಮೆಯ ಆಟವಾಡುತ್ತಿದ್ದ ಗ್ರೀನ್ 20 ಬಾಲ್​ ಎದುರಿಸಿ ತಲಾ ಎರಡು ಬೌಂಡರಿ, ಸಿಕ್ಸರ್​ ಸಮೇತ 30 ರನ್ ಕಲೆ ಹಾಕಿ ಜೋಶುವಾ ಲಿಟಲ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದಾದ ಸ್ವಲ್ಪ ಹೊತ್ತಲೇ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್​ಗಳೊಂದಿಗೆ 61 ರನ್​ ಬಾರಿಸಿ ಸೂರ್ಯಕುಮಾರ್​ ಯಾದವ್ ಕೂಡ ಮೋಹಿತ್ ಶರ್ಮಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ಇದರ ನಂತರ ಯಾವುದೇ ಬ್ಯಾಟರ್​ ಕೂಡ ಹೆಚ್ಚು ನಿಲ್ಲಲ್ಲಿ. ಇದರಿಂದ ದಿಢೀರ್​ ಕುಸಿತಗೊಂಡ ಮುಂಬೈ ಸೋಲಿಗೆ ಶರಣಾಗಿ ಐಪಿಎಲ್​ ಟೂರ್ನಿಯ ಪ್ರಯಣವನ್ನು ಮುಗಿಸಿತು. 62 ರನ್​ಗಳಿಂದ ಗೆಲುವಿನ ನಗೆ ಬೀರಿದ ಹಾಲಿ ಚಾಂಪಿಯನ್​ ಗುಜರಾತ್​ ಫೈನಲ್​ಗೆ ಪ್ರವೇಶಿಸಿತು. ಗುಜರಾತ್‌ ಟೈಟಾನ್ಸ್‌ ಪರ ಮೋಹಿತ್ ಶರ್ಮಾ 2.2 ಓವರ್​ಗಳಲ್ಲಿ ಕೇವಲ 10 ರನ್​ ನೀಡಿ ಐದು ವಿಕೆಟ್‌ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಮೇ 28ರಂದು ಇದೇ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದೊಂದಿಗೆ ಪ್ರಶಸ್ತಿಗಾಗಿ ಹಾರ್ದಿಕ್​ ಪಾಂಡ್ಯ ಪಡೆ ಹೋರಾಟ ನಡೆಸಲಿದೆ. ​​ ಇನ್ನು ಐಪಿಎಲ್​ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಫೈನಲ್​ಗೆ ಪ್ರವೇಶಿಸಿದ ಮೂರನೇ ತಂಡ ಗುಜರಾತ್​ ಆಗಿದೆ. ಈ ಹಿಂದೆ ಚೆನ್ನೈ ಮತ್ತು ಮುಂಬೈ ಸತತವಾಗಿ ಫೈನಲ್​ಗೆ ಲಗ್ಗೆ ಇಟ್ಟಿದ್ದವು. ಇದುವರೆಗೆ ಮುಂಬೈ ಐದು ಬಾರಿ ಪ್ರಶಸ್ತಿಗೆ ಗೆದ್ದಿದ್ದರೆ, ಚೆನ್ನೈ ನಾಲ್ಕು ಬಾರಿ ಗೆದ್ದಿದೆ. ಗುಜರಾತ್​ ಎರಡನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ:IPL 2023 Qualifier 2: ಮೂರನೇ ಶತಕ ಗಳಿಸಿದ ಶುಭಮನ್​ ಗಿಲ್​: ಮುಂಬೈಗೆ 234 ರನ್​​ಗಳ ಬೃಹತ್​ ಗುರಿ

Last Updated : May 27, 2023, 1:09 AM IST

ABOUT THE AUTHOR

...view details