ಮೊಹಾಲಿ (ಪಂಜಾಬ್):ಕಳೆದ ಪಂದ್ಯಗಳಲ್ಲಿ ಸೋಲು ಕಂಡಿರುವ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಂದು ಎದುರಾಗಲಿವೆ. ತವರು ನೆಲವಾದ ಮೊಹಾಲಿಯಲ್ಲಿ ಪಂಜಾಬ್ ಎರಡನೇ ಗೆಲುವು ದಾಖಲಿಸಲು ಕಾತುರವಾಗಿದ್ದರೆ, ರಿಂಕು ಸಿಂಗ್ ಅಬ್ಬರಕ್ಕೆ ಕೊನೆಯಲ್ಲಿ ಅಚ್ಚರಿಯ ಸೋಲುಂಡಿದ್ದ ಟೈಟಾನ್ಸ್ ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ.
ಪಂಜಾಬ್ ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 1 ರಲ್ಲಿ ಸೋಲು ಕಂಡಿದೆ. ಗುಜರಾತ್ ಕೂಡ ಇದೇ ಫಲಿತಾಂಶ ಕಂಡಿದೆ. ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ 99 ರನ್ ಗಳಿಸಿ 1 ರನ್ನಿಂದ ಶತಕ ತಪ್ಪಿಸಿಕೊಂಡಿದ್ದರು. ಉಳಿದ ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡದೇ ಇರುವುದು ತಂಡಕ್ಕೆ ತಲೆನೋವು ತಂದಿದೆ.
ಇತ್ತ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಯಲ್ಲಿ ಶಾಕಿಂಗ್ ಸೋಲು ಕಂಡಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯಕ್ಕೀಡಾದ ಕಾರಣ ಸ್ಪಿನ್ನರ್ ರಶೀದ್ ಖಾನ್ ತಂಡ ಮುನ್ನಡೆಸಿದ್ದರು. 200 ಅಧಿಕ ರನ್ ಗಳಿಸಿದಾಗ್ಯೂ ತಂಡ ರಿಂಕು ಸಿಂಗ್ರ ಅಬ್ಬರದ ಸತತ 5 ಸಿಕ್ಸರ್ಗಳಿಂದಾಗಿ ಸೋಲು ಕಂಡಿತ್ತು. ಕೆಕೆಆರ್ ಎದುರಿನ ಸೋಲಿನ ಬಳಿಕ ತಂಡ ಡೆತ್ ಓವರ್ಗಳನ್ನು ಬಲಪಡಿಸಬೇಕಿದೆ.
ಪಂಜಾಬ್ಗೆ ವಿದೇಶಿಯರ ಬಲ:ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಇಂಗ್ಲೆಂಡ್ ಆಟಗಾರಲಿಯಾಮ್ ಲಿವಿಂಗ್‌ಸ್ಟೋನ್ ತಂಡ ಸೇರಿಕೊಂಡಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಸ್ಥಾನ ಪಡೆಯಬಹುದು. ಕಳೆದ ಪಂದ್ಯದಲ್ಲಿ ಸಿಕಂದರ್ ರಾಜಾ ವಿಫಲವಾಗಿದ್ದು, ಭಾನುಕಾ ರಾಜಪಕ್ಸೆಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ನಾಥನ್ ಎಲ್ಲಿಸ್ ಅಥವಾ ಕಗಿಸೊ ರಬಾಡ ಬೌಲಿಂಗ್ಗೆ ಬಲ ನೀಡಲಿದ್ದಾರೆ. ಗಿಲ್ ಅವರ ವಿರುದ್ಧ ರಬಾಡ ಪರಿಣಾಮಕಾರಿಯಾಗಿದ್ದು, ಕಣಕ್ಕಿಳಿಯುವ ಸಾಧ್ಯತೆ ಇದೆ.
ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ರಶೀದ್ ಖಾನ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಇನ್ನು 2018 ರಿಂದ ಪಂಜಾಬ್ ಕಿಂಗ್ಸ್ ಮೊಹಾಲಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 9 ರಲ್ಲಿ ಗೆಲುವು ದಾಖಲಿಸಿದೆ.