16 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಲೀಗ್ ಹಂತದ ಪಂದ್ಯಗಳು ಇಂದೇ ಕೊನೆ ಆಗಲಿವೆ. ಮೂರು ತಂಡಗಳು ಈಗಾಗಲೇ ಪ್ಲೇಆಫ್ಗೆ ಕ್ವಾಲಿಫೈ ಆಗಿವೆ. ನಾಲ್ಕನೇ ಸ್ಥಾನಕ್ಕಾಗಿ ಮೂರು ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ನಿನ್ನೆ ನಡೆದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್ಕೆ, ಕೆಕೆಆರ್ ವಿರುದ್ಧ ಎಲ್ಎಸ್ಜಿ ಗೆಲುವು ಸಾಧಿಸಿ ಪ್ಲೇಆಫ್ಗೇರಿದವು. ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ಮೊದಲ ತಂಡವಾಗಿ ನಾಕೌಟ್ ಪ್ರವೇಶಿಸಿತ್ತು.
ನಾಕೌಟ್ ಹಂತದ ನಾಲ್ಕನೇ ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ಸೆಣಸಾಟ ನಡೆಯುತ್ತಿದೆ. ಇಂದು ಆರ್ಸಿಬಿ ಮತ್ತು ಗುಜರಾತ್, ಮುಂಬೈ ಮತ್ತು ಹೈದರಾಬಾದ್ ನಡುವಣ ಪಂದ್ಯ ಪ್ಲೇಫ್ ಸ್ಥಾನವನ್ನು ನಿರ್ಧರಿಸಲಿದೆ.
ಆರ್ಸಿಬಿ ಪ್ಲೇಆಫ್ ಹಾದಿ ಹೀಗಿದೆ..:ಸದ್ಯಕ್ಕೆ ಪ್ಲೇಆಫ್ಗೇರುವ ಹೆಚ್ಚಿನ ಅವಕಾಶ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡಕ್ಕಿದೆ. ನೆಟ್ ರನ್ರೇಟ್ನಲ್ಲಿ(+0.180) ಎರಡೂ ತಂಡಕ್ಕಿಂತಲೂ ಇದು ಮುಂದಿದೆ. ಇಂದಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ 16 ಅಂಕಗಳೊಂದಿಗೆ ನಾಕೌಟ್ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಆದರೆ, ಹೈದರಾಬಾದ್ ವಿರುದ್ಧ ಮುಂಬೈ ಹೆಚ್ಚಿನ ರನ್ ಅಂತರದಲ್ಲಿ ಗೆಲುವು ಸಾಧಿಸಿದಲ್ಲಿ ತುಸು ಕಷ್ಟವಾಗಬಹುದು. ಒಂದು ವೇಳೆ ಗುಜರಾತ್ ವಿರುದ್ಧ ಸೋತಲ್ಲಿ ಆರ್ಸಿಬಿ ಟೂರ್ನಿಯಿಂದ ಹೊರಬೀಳಬಹುದು.
ಮುಂಬೈ ಮತ್ತು ಹೈದರಾಬಾದ್ ಮಧ್ಯೆ ಮೊದಲು ಪಂದ್ಯ ನಡೆಯುವ ಕಾರಣ ಅದರ ಫಲಿತಾಂಶದ ಆಧಾರದ ಮೇಲೆ ಆರ್ಸಿಬಿ ತಂತ್ರ ಮಾಡಬಹುದು. ಅಚಾನಕ್ಕಾಗಿ ಮುಂಬೈ ಸೋಲು ಕಂಡಲ್ಲಿ ಆರ್ಸಿಬಿ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಕಾರಣ ರಾಜಸ್ಥಾನ ರಾಯಲ್ಸ್ ರನ್ರೇಟ್ನಲ್ಲಿ ಈಗಾಗಲೇ ಹಿಂದಿದೆ.
ಮುಂಬೈ ಇಂಡಿಯನ್ಸ್ ಕತೆಯೇನು?:ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ಗೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಕಡ್ಡಾಯ. ಅಲ್ಲದೇ, ಭಾರಿ ಅಂತರದಿಂದ ಜಯಿಸಿ ರನ್ರೇಟ್ (-0.128) ಕಾಯ್ದುಕೊಳ್ಳಬೇಕಿದೆ. ಇಷ್ಟಾದರೂ ತಂಡ ಪ್ಲೇಆಫ್ಗೇರುವ ಅವಕಾಶ ತುಸು ಕಡಿಮೆಯೇ. ಕಾರಣ ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲಬೇಕು. ರಾಜಸ್ಥಾನ ರಾಯಲ್ಸ್ ಕೂಡ ಮುಂಬೈಗಿಂತ ರನ್ರೇಟ್ನಲ್ಲಿ ಮುಂದಿದೆ. ಹೀಗಾಗಿ ತಂಡದ ಮುಂದಿನ ಹಂತದ ಪ್ರವೇಶ ಆರ್ಸಿಬಿ ಕೈಯಲ್ಲಿದೆ.
ರಾಜಸ್ಥಾನ ರಾಯಲ್ಸ್ ಸನ್ನಿವೇಶವೇನು?:ಸಂಜು ಸ್ಯಾಮ್ಸನ್ ನೇತೃತ್ವದ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಿ ಪ್ಲೇಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ತಂಡಕ್ಕೆ ಹೆಚ್ಚಿನ ಅವಕಾಶಗಳು ಇಲ್ಲವಾದರೂ ಅದೃಷ್ಟದ ಹುಡುಕಾಟದಲ್ಲಿದೆ. ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಎರಡೂ ತಂಡಗಳು ಹೆಚ್ಚಿನ ಅಂತರದ ಸೋಲು ಕಂಡಲ್ಲಿ ನೆಟ್ ರನ್ರೇಟ್ ಆಧಾರದ ಮೇಲೆ ರಾಯಲ್ಸ್ ನಾಕೌಟ್ ಪ್ರವೇಶ ಪಡೆಯಬಹುದು. ಒಂದು ವೇಳೆ ತಂಡಗಳು ಗೆದ್ದಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಪ್ರಸ್ತುತ ಆರ್ಆರ್ +0.148 ರನ್ ರೇಟ್ ಹೊಂದಿದೆ.
ಇದನ್ನೂ ಓದಿ:ಡೆಲ್ಲಿ ಮಣಿಸಿ ಪ್ಲೇ ಆಫ್ಗೆ ಪ್ರವೇಶ ಪಡೆದ ಚೆನ್ನೈ: ತವರಿನಲ್ಲಿ ಧೋನಿಗೆ ಇನ್ನೊಂದು ಪಂದ್ಯದ ಅವಕಾಶ