ಮುಂಬೈ (ಮಹಾರಾಷ್ಟ್ರ):ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ಗೆ ಮುಂಬೈ ಇಂಡಿಯನ್ಸ್ ತಂಡ ಎಂಟ್ರಿ ಕೊಟ್ಟಿದೆ. ಕ್ಯಾಮರೂನ್ ಗ್ರೀನ್ ಮತ್ತು ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 16 ಅಂಕಗಳೊಂದಿಗೆ ಮುಂಬೈ ತಂಡ ನಾಲ್ಕನೇ ಸ್ಥಾನಕ್ಕೆ ಏರಿದೆ. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದರೆ ಮುಂಬೈ ತಂಡ ಕುಸಿಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಇಂದು ನಡೆಯುವ ಪಂದ್ಯದ ಮೇಲೆ ರೋಹಿತ ಪಡೆಯ ಭವಿಷ್ಯ ನಿಂತಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಇದರಿಂದ ಮೊದಲ ಬ್ಯಾಟಿಂಗ್ಗೆ ಇಳಿದಿದ್ದ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಬರೋಬ್ಬರಿ 200 ರನ್ ಪೇರಿಸಿತ್ತು. ಈ ಕಠಿಣ ಗುರಿ ಬೆಟ್ಟಿದ್ದ ಮುಂಬೈ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕರಾದ ಇಶಾನ್ ಕಿಶನ್ 14 ರನ್ ಸಿಡಿಸಿ ನಿರ್ಗಮಿಸಿದರೂ ಕ್ಯಾಮರೂನ್ ಗ್ರೀನ್ ಮತ್ತು ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್ಗೆ 128 ರನ್ಗಳ ಭರ್ಜರಿ ಜೊತೆಯಾಟ ನೀಡಿತು. ರೋಹಿತ್ 37 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 56 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ಕ್ಯಾಮರೂನ್ ಗ್ರೀನ್ ಬಿರುಸಿನಿಂದ ಬ್ಯಾಟಿಂಗ್ ಮಾಡಿದರು. 48 ಎಸತೆಗಳನ್ನು ಎದುರಿಸಿ ಭರ್ಜರಿ ತಲಾ ಎಂಟು ಸಿಕ್ಸರ್ ಮತ್ತು ಬೌಂಡರಿಗಳ ಸಮೇತ ಅಜೇಯ 100 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಂತರ ಕ್ಯಾಮರೂನ್ಗೆ ಉತ್ತಮ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ 16 ಬಾಲ್ಗಳಲ್ಲಿ ನಾಲ್ಕು ಬೌಂಡರಿಗಳ ಸಮೇತ 25 ರನ್ಗಳ ಕಾಣಿಕೆ ನೀಡಿದರು. ಇದರಿಂದ ಇನ್ನೂ ಎರಡು ಓವರ್ಗಳ ಬಾಕಿ ಇರುವಾಗಲೇ ಮುಂಬೈ ತಂಡ 201 ರನ್ ಸಿಡಿಸಿ ಗೆಲುವಿನ ಕೇಕೆ ಹಾಕಿತು.