ಕರ್ನಾಟಕ

karnataka

ETV Bharat / sports

IPL 2023: ಕಾನ್ವೆ ಅರ್ಧಶತಕ, ಚೆನ್ನೈಗೆ ತವರಿನಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು - ಚೆನ್ನೈನ ಚೆಪಾಕ್​ ಪಿಚ್

ಚೆನ್ನೈನ ಚೆಪಾಕ್​ ಪಿಚ್​ನಲ್ಲಿ ಟಾಸ್ ​ಗೆದ್ದ ಸೂಪರ್​ ಕಿಂಗ್ಸ್​ ಮೊದಲು ಕ್ಷೇತ್ರ ರಕ್ಷಣೆ ನಿರ್ಧಾರ ತೆಗೆದುಕೊಂಡಿತು.

Chennai Super Kings vs Sunrisers Hyderabad Match Score update
Chennai Super Kings vs Sunrisers Hyderabad Match Score update

By

Published : Apr 21, 2023, 7:15 PM IST

Updated : Apr 21, 2023, 11:01 PM IST

ಚೆನ್ನೈ (ತಮಿಳುನಾಡು):ರವೀಂದ್ರ ಜಡೇಜಾ ಮೂರು ವಿಕೆಟ್​ ಪಡೆದು ಕಮಾಲ್​ ಮಾಡಿದರೆ, ಬ್ಯಾಟಿಂಗ್​ನಲ್ಲಿ ಆರಂಭಿಕರಾದ ಡೆವೂನ್​ ಕಾನ್ವೆ ಮತ್ತು ರುತುರಾಜ್​ ಗಾಯಕ್ವಾಡ್​ ಜೋಡಿ 87 ರನ್​ಗಳ ಉತ್ತಮ ಜೊತೆಯಾಟ ನೀಡಿ ಚೆನ್ನೈ ಸೂಪರ್​ ಕಿಂಗ್ಸ್ ಅ​ನ್ನು 7 ವಿಕೆಟ್​ಗಳಿಂದ ಗೆಲುವಿನ ದಡ ಸೇರಿಸಿದರು. ಬೌಲಿಂಗ್​ನಲ್ಲಿ ಬಲಿಷ್ಠವಾಗಿರುವ ಹೈದರಾಬಾದ್​ ಪಡೆ 1 ಓವರ್​ 2 ಬಾಲ್​ ಇರುವಂತೆಯೇ ಸೋಲು ಕಂಡಿತು.

134ರನ್​ ಸರಳ ಗುರಿ ಬೆನ್ನತ್ತಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಭರ್ಜರಿ ಫಾರ್ಮ್​ನಲ್ಲಿರುವ ಆರಂಭಿಕರಾದ ಡೆವೂನ್​ ಕಾನ್ವೆ ಮತ್ತು ರುತುರಾಜ್​ ಗಾಯಕ್ವಾಡ್ ಅರ್ಧಶತಕ ಮೀರಿ ಜೊತೆಯಾಟ ಮಾಡಿದರು. 35 ರನ್​ ಗಳಿಸಿ ಆಡುತ್ತಿದ್ದ ಗಾಯಕ್ವಾಡ್​ ದುರಾದೃಷ್ಟದಿಂದ ಕಾನ್ವೆ ಹೊಡೆದ ಸ್ಟ್ರೈಟ್​ ಡ್ರೈವ್​ನಿಂದ ರನ್​ ಔಟ್​ಗೆ ಬಲಿಯಾದರು. ಕಾನ್ವೆ ಅವರು ಉಮ್ರಾನ್​ ಮಲಿಕ್​ ಎಸೆತವನ್ನು ನೇರವಾಗಿ ಕಳಿಸಿದ್ದು, ಬೌಲರ್​ ಕೈಗೆ ತಗುಲಿ ವಿಕೆಟ್​ಗೆ ಬಡಿದ ಕಾರಣ ಗಾಯಕ್ವಾಡ್​ ಕ್ರೀಸ್​ ತೊರೆಯಬೇಕಾಯಿತು.

ನಂತರ ಬಂದ ಅಜಿಂಕ್ಯ ರಹಾನೆ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಅವರ ಬೆನ್ನಲ್ಲೇ ಅಂಬಟಿ ರಾಯುಡು ಸಹ 9 ರನ್​ಗೆ ಪೆವಿಲಿಯನ್​ ದಾರಿ ಹಿಡಿದರು. ಒಂದೆಡೆ ವಿಕೆಟ್​ ಹೋಗುತ್ತಿದ್ದರೂ ನಿಂತು ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇನ್ನಿಂಗ್ಸ್​ನಲ್ಲಿ 57 ಬಾಲ್​ಗಳನ್ನು ಎದುರಿಸಿದ ಅವರು 12 ಬೌಂಡರಿ ಮತ್ತು ಒಂದು ಸಿಕ್ಸ್​ನಿಂದ ಅಜೇಯ 77 ರನ್​ ಗಳಿಸಿ ಐಪಿಎಲ್​ನ 6ನೇ ಅರ್ಧಶತಕ ದಾಖಲಿಸಿದರು. 5ನೇ ವಿಕೆಟ್​ ಆಗಿ ಬಂದ ಅಲಿ ಕೂಡಾ ಅಜೇಯರಾಗಿ 6 ರನ್​ ಗಳಿಸಿದರು. ಚೆನ್ನೈ ಮೂರು ವಿಕೆಟ್​ ಕಳೆದುಕೊಂಡು, 1.2 ಓವರ್​ ಉಳಿಸಿ ಪಂದ್ಯ ಗೆದ್ದುಕೊಂಡಿತು. ಹೈದರಾಬಾದ್​ ಪರ ಮಯಾಂಕ್​ ಮಾರ್ಕಂಡೆ 2 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ ಮತ್ತು ಚೆನ್ನೈ ತಂಡದ ಇತರ ಬೌಲರ್​ಗಳ ಸಾಂಘಿಕ ದಾಳಿಗೆ ನಲುಗಿದ ಸನ್​ ರೈಸರ್ಸ್​ ಹೈದರಾಬಾದ್​ ನಿಗದಿತ ಓವರ್​ ಅಂತ್ಯಕ್ಕೆ 7 ವಿಕೆಟ್​ ನಷ್ಟದಿಂದ 134 ರನ್ ಗಳಿಸಿತು. ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ಹಿಂದಿನ ಪಂದ್ಯಗಳಂತೆ ಬ್ಯಾಟಿಂಗ್​ ವೈಫಲ್ಯ ಎದುರಿಸಿತು. ಈ ಆವೃತ್ತಿಯ ಮೊದಲ ಶತಕ ಗಳಿಸಿದ್ದ ಹ್ಯಾರಿ ಬ್ರೂಕ್​ ಮತ್ತೊಂದು ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದರು. ತಂಡದ ಮೊತ್ತ 35 ಆಗಿದ್ದಾಗ 18 ರನ್​ ಗಳಿಸಿದ್ದ ಬ್ರೂಕ್​ ಆಕಾಶ್ ಸಿಂಗ್​​ಗೆ ವಿಕೆಟ್​ ಕೊಟ್ಟರು. ಬಳಿಕ ಬಂದ ಯಾರೂ ಕೂಡಾ ಬೃಹತ್​ ರನ್​ ಗಳಿಸಲಿಲ್ಲ.

ಪಿಚ್​ ಅರ್ಥ ಮಾಡಿಕೊಳ್ಳುವುದು ಬ್ಯಾಟರ್​ಗಳಿಗೆ ಕಬ್ಬಿಣದ ಕಡಲೆಯಂತಾಯಿತು. ವಿಕೆಟ್‌ಗೆ ಗಟ್ಟಿಯಾಗಿ ನೆಲೆಯೂರುವ ಮೊದಲೇ ಬ್ಯಾಟರ್‌ಗಳನ್ನು ಸಿಎಸ್​ಕೆ ಬೌಲರ್​ಗಳು ಪೆವಿಲಿಯನ್ ಸೇರಿಸುವ ಕೆಲಸ ಮಾಡಿದರು. ಬ್ರೂಕ್​ ನಂತರ ಬಂದ ತ್ರಿಪಾಠಿ ಮತ್ತೋರ್ವ ಅಭಿಷೇಕ್ ಶರ್ಮಾ ಅವರ ಜೊತೆಗೆ ಇನ್ನಿಂಗ್ಸ್​ ಮುಂದುವರೆಸಿದರು. ರನ್​ ಕದಿಯುವ ಹಸಿವಿನಲ್ಲಿದ್ದ ಅಭಿಷೇಕ್ ಶರ್ಮಾ (34) ರವೀಂದ್ರ ಜಡೇಜಾಗೆ ವಿಕೆಟ್​ ಕೊಟ್ಟರು. ಶರ್ಮಾ ಗಳಿಸಿದ 34 ರನ್​ ತಂಡದ ಅತಿ ಹೆಚ್ಚಿನ ಮೊತ್ತ ಗಳಿಕೆಯಾಗಿದೆ.

ಉಳಿದಂತೆ, ರಾಹುಲ್ ತ್ರಿಪಾಠಿ (21), ಐಡೆನ್ ಮಾರ್ಕ್ರಾಮ್ (12), ಹೆನ್ರಿಚ್ ಕ್ಲಾಸೆನ್(17​) ಮತ್ತು ಮಯಾಂಕ್ ಅಗರ್ವಾಲ್ (2) ಬೇಗ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (9) ಮತ್ತು ಮಾರ್ಕೊ ಜಾನ್ಸೆನ್ (17*) ತಂಡಕ್ಕೆ ಅಳಿಲ ಸೇವೆಯ ರೀತಿ ರನ್ ಸೇರಿಸಿ ಮೊತ್ತವನ್ನು 134ಕ್ಕೆ ಏರಿಸಿದರು.

ಜಡೇಜಾ 3 ವಿಕೆಟ್​ ಪಡೆದರೆ, ಉಳಿದಂತೆ ಆಕಾಶ್ ಸಿಂಗ್, ಮಥೀಶ ಪತಿರಾನ ಮತ್ತು ತುಷಾರ್ ದೇಶಪಾಂಡೆ ತಲಾ ಒಂದು ವಿಕೆಟ್​ ಕಬಳಿಸಿದರು. ಕೊನೆಯ ಬಾಲ್​ಗೆ ವಾಷಿಂಗ್ಟನ್ ಸುಂದರ್ ರನ್​ ಔಟ್​ಗೆ ಬಲಿಯಾದರು.

ಇದನ್ನೂ ಓದಿ:CSK vs SRH: ಮೂರನೇ ಸ್ಥಾನ ಉಳಿಸಿಕೊಳ್ಳುವತ್ತ ಧೋನಿ ಚಿತ್ತ.. ಗೆಲುವಿಗೆ ಮಾರ್ಕ್ರಾಮ್​ ತಂತ್ರವೇನು?

Last Updated : Apr 21, 2023, 11:01 PM IST

ABOUT THE AUTHOR

...view details