ಕರ್ನಾಟಕ

karnataka

ETV Bharat / sports

IPL 2023: ಮುಂಬೈ ವಿರುದ್ಧ ಟಾಸ್​ ಗೆದ್ದ ಚೆನ್ನೈ ಬೌಲಿಂಗ್​ ಆಯ್ಕೆ

ಇಂಡಿಯನ್​ ಪ್ರೀಮಿಯರ್​ ಲೀಗ್​ನ 49ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಎದುರಾಗುತ್ತಿದ್ದು, ಟಾಸ್​ ಗೆದ್ದ ಧೋನಿ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದ್ದಾರೆ.

Etv Bharat
Etv Bharat

By

Published : May 6, 2023, 3:19 PM IST

ಚೆನ್ನೈ (ತಮಿಳುನಾಡು): ಭಾರತ ತಂಡದ ಹಾಲಿ ನಾಯಕ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್​​ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಇಂದು ನಡೆಯಲಿರು ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟಾಸ್​​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಣಯ ಮಾಡಿದೆ.

ಮುಂಬೈ ಇಂಡಿಯನ್ಸ್​ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ಕುಮಾರ್ ಕಾರ್ತಿಕೇಯ ಅವರನ್ನು ಹೊರಗಿಟ್ಟು ಅವರ ಬದಲಿಯಾಗಿ ರಾಘವ್ ಗೋಯಲ್ ಅವರನ್ನು ಆಡಿಸಲಾಗುತ್ತಿದೆ. ರಾಘವ್ ಗೋಯಲ್ ಮುಂಬೈ ಇಂಡಿಯನ್ಸ್​ ಪರ ಪಾದಾರ್ಪಣೆಯ ಪಂದ್ಯವನ್ನು ಆಡಲಿದ್ದಾರೆ. ಇನ್ನು ಅನಾರೋಗ್ಯಕ್ಕೆ ಒಳಗಾಗಿರುವ ತಿಲಕ್​ ವರ್ಮಾ ಬದಲಾಗಿ ಟ್ರಿಸ್ಟಾನ್ ಸ್ಟಬ್ಸ್ ಕಣಕ್ಕಿಳಿಯಲಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​​ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನ 16ನೇ ಆವೃತ್ತಿಯ 49ನೇ ಪಂದ್ಯ ಚೆನ್ನೈನ ತವರು ಮೈದಾನವಾದ ಚೆಪಾಕ್​ನಲ್ಲಿ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಕಳೆದ ಬಾರಿ ಚೆನ್ನೈ ಸೂಪರ್​ ಕಿಂಗ್ಸ್​ ಮುಂಬೈ ವಿರುದ್ಧ ಆಡಿದ್ದಾಗ ಗೆಲುವು ದಾಖಲಿಸಿತ್ತು. ಮುಂಬೈ ಅದು ಲೀಗ್​ನ ಎರಡನೇ ಸೋಲಾಗಿತ್ತು. ಇಂದು ಮುಂಬೈ ಇಂಡಿಯನ್ಸ್​ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಲೀಗ್​ನಲ್ಲಿ ಏರಿಳಿತಗಳನ್ನು ಕಂಡಿರುವ ಮುಂಬೈ ಇಂಡಿಯನ್ಸ್​ ಆಡಿದ 9 ಪಂದ್ಯಗಳಲ್ಲಿ 5 ಗೆದ್ದು 10 ಅಂಕದಿಂದ 6ನೇ ಸ್ಥಾನವನ್ನು ಅಂಕಪಟ್ಟಿಯಲ್ಲಿ ಹೊಂದಿದೆ. ಚೆನ್ನೈ ಉದ್ಘಾಟನಾ ಪಂದ್ಯದ ನಂತರ ಪುಟಿದೆದ್ದು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, 10 ಪಂದ್ಯಗಳಲ್ಲಿ 5 ಗೆದ್ದು, 1 ರದ್ದಾಗಿ 11 ಅಂಕದಿಂದ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್​ ಹತ್ತಿರಕ್ಕೆ ಹೋಗಲು ಎರಡೂ ತಂಡಗಳಿಗೆ ಇಂದಿನ ಗೆಲುವು ಅನಿವಾರ್ಯವಾಗಿದೆ.

ಕಳೆದ ಪಂದ್ಯ ಚೆನ್ನೈ ಮಳೆಯಿಂದಾಗಿ ಕಳೆದುಕೊಂಡಿತು. ಲಕ್ನೋ ವಿರುದ್ಧ 19.2 ಓವರ್​ನ ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಯಿತು. ಮತ್ತೆ ಬಂದ ಮಳೆಯ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು. ಎರಡೂ ತಂಡಕ್ಕೆ ಒಂದೊಂದು ಅಂಕಗಳನ್ನು ಹಂಚಲಾಯಿತು.

ಮುಂಬೈ ಇಂಡಿಯನ್ಸ್​ ತಂಡ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಫಾರ್ಮ್​ನಲ್ಲಿದೆ. ರಾಜಸ್ಥಾನ ರಾಯಲ್ಸ್​ ಎದುರು 213 ರನ್​ನ ಗುರಿಯನ್ನು ಹಾಗೂ ಪಂಜಾಬ್​ ವಿರುದ್ಧ 215 ರನ್​ನ ಗುರಿಯನ್ನು ಬೆನ್ನಟ್ಟಿ ಗೆದ್ದಿದೆ. ಕ್ಯಾಮರಾನ್​ ಗ್ರೀನ್​, ಟಿಮ್​ ಡೇವಿಡ್​ ಮತ್ತು ಸೂರ್ಯ ಕುಮಾರ್​ ಯಾದವ್​ ಮುಂಬೈ ಪರ ಘರ್ಜಿಸುತ್ತಿದ್ದಾರೆ. ಇದರಿಂದ ಬೃಹತ್​ ಮೊತ್ತದ ಗುರಿಯನ್ನು ಎರಡು ಬಾರಿ ತಂಡ ಸಲೀಸಾಗಿ 6 ವಿಕೆಟ್​ಗಳ ಗೆಲುವನ್ನು ದಾಖಲಿಸಿದೆ.

ತಂಡಗಳು ಇಂತಿವೆ..: ಮುಂಬೈ ಇಂಡಿಯನ್ಸ್​:ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​​), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಅರ್ಷದ್ ಖಾನ್

ಚೆನ್ನೈ ಸೂಪರ್​ ಕಿಂಗ್ಸ್​​:ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್​ ಕೀಪರ್​/ನಾಯಕ), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಇದನ್ನೂ ಓದಿ:ಐಪಿಎಲ್​ 2023: ಗಾಯಾಳು​ ರಾಹುಲ್​ ಸ್ಥಾನಕ್ಕೆ ಕರುಣ್​ ನಾಯರ್​​

ABOUT THE AUTHOR

...view details