ಅಹಮದಾಬಾದ್ (ಗುಜರಾತ್):ಕಳೆದ ಎರಡು ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ 'ಮಿಲಿಯನ್ ಡಾಲರ್ ಟೂರ್ನಿ' ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್) ತಡರಾತ್ರಿ ಮುಕ್ತಾಯಗೊಂಡಿತು. ಬೃಹತ್ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿತು. ಈ ಮೂಲಕ 5 ನೇ ಬಾರಿಗೆ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಪಂದ್ಯ ಮುಕ್ತಾಯದ ಬಳಿಕ ಈ ಸೀಸನ್ನಿನ ಅತ್ಯುತ್ತಮ ಆಟಗಾರರು, ಬೆಸ್ಟ್ ಸ್ಟೇಡಿಯಂ ಆಫ್ ದಿ ಟೂರ್ನಿ, ಬೆಸ್ಟ್ ಕ್ಯಾಚ್ ಆಫ್ ದಿ ಟೂರ್ನಿ ಸೇರಿದಂತೆ ಹಲವು ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನಡೆಯಿತು.
- ಚೆನ್ನೈ ನಾಯಕ ಎಂ.ಎಸ್. ಧೋನಿಗೆ ಐಪಿಎಲ್ 2023ರ ಕಪ್, 20 ಕೋಟಿ ರೂ ಚೆಕ್ ಹಸ್ತಾಂತರ.
- ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯಗೆ ರನ್ನರ್ ಅಪ್ ಶೀಲ್ಡ್, 12.5 ಕೋಟಿ ರೂ ಚೆಕ್ ಹಸ್ತಾಂತರ
- ದೆಹಲಿ ಕ್ಯಾಪಿಟಲ್ಸ್ ಫೇರ್ ಪ್ಲೇ ಪ್ರಶಸ್ತಿ
ಬೆಸ್ಟ್ ಸ್ಟೇಡಿಯಂ ಅಫ್ ದಿ ಟೂರ್ನಿ:
- ಈಡನ್ ಗಾರ್ಡನ್ಸ್ ಮತ್ತು ವಾಂಖೆಡೆಗೆ ಋತುವಿನ ಅತ್ಯುತ್ತಮ ಕ್ರಿಕೆಟ್ ಮೈದಾನ ಪ್ರಶಸ್ತಿ.
ಟೂರ್ನಿಯ ಬೆಸ್ಟ್ ಆಟಗಾರ ಪ್ರಶಸ್ತಿ:
- ಶುಭಮನ್ ಗಿಲ್ ಆರೆಂಜ್ ಕ್ಯಾಪ್ (17 ಪಂದ್ಯ 890 ರನ್‌ಗಳು) ಪ್ರಶಸ್ತಿ
- ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ (17 ಪಂದ್ಯಗಳು, 28 ವಿಕೆಟ್) ಪ್ರಶಸ್ತಿ
- ಅಜಿಂಕ್ಯ ರಹಾನೆ ಫೇರ್‌ಪ್ಲೇ ಆಫ್ ದಿ ಸೀಸನ್ ಪ್ರಶಸ್ತಿ
- ರಶೀದ್ ಖಾನ್ ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿ
- ಫಾಫ್ ಡು ಪ್ಲೆಸಿಸ್ ಲಾಂಗೆಸ್ಟ್ ಸಿಕ್ಸ್ ಆಫ್ ದಿ ಟೂರ್ನಿ (115 ಮೀ) ಪ್ರಶಸ್ತಿ
- ಶುಭಮನ್ ಗಿಲ್ ಹೆಚ್ಚು ಬೌಂಡರಿ (84) ಪ್ರಶಸ್ತಿ
- ಶುಭಮನ್ ಗಿಲ್ ಋತುವಿನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ
- ಶುಭಮನ್ ಗಿಲ್ ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಸೀಸನ್ ಪ್ರಶಸ್ತಿ
- ಗ್ಲೆನ್ ಮ್ಯಾಕ್ಸ್‌ವೆಲ್ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ
- ಯಶಸ್ವಿ ಜೈಸ್ವಾಲ್ ವರ್ಷದ ಉದಯೋನ್ಮುಖ ಆಟಗಾರ (14 ಪಂದ್ಯ 625 ರನ್) ಪ್ರಶಸ್ತಿ