ಪುಣೆ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಜೊತೆಗೆ ಅವುಗಳನ್ನ ಬ್ರೇಕ್ ಮಾಡುವುದು ಕೂಡ ಸರ್ವೆ ಸಾಮಾನ್ಯ. ಈ ಸಲದ ಐಪಿಎಲ್ನಲ್ಲಿ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ ನಿರ್ಮಾಣ ಮಾಡಿದ್ದ ದಾಖಲೆವೊಂದನ್ನ ಖುದ್ದಾಗಿ ಅವರೇ ಬ್ರೇಕ್ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವೇಗಿ ಉಮ್ರಾನ್ ಮಲಿಕ್ ದಾಖಲೆಯ 157 KMPH ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಈ ಹಿಂದಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ತಾವು ಎಸೆದ 154 KMPH ದಾಖಲೆ ಬ್ರೇಕ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡ್ತಿದ್ದ ಸಂದರ್ಭದಲ್ಲಿ ಉಮ್ರಾನ್ ಮಲಿಕ್, 12ನೇ ಓವರ್ನ 2ನೇ ಎಸೆತವನ್ನ 155ಕಿಲೋ ಮೀಟರ್ ವೇಗದಲ್ಲಿ ಎಸೆದಿದ್ದಾರೆ.
ಐಪಿಎಲ್ನಲ್ಲಿ ಶರವೇಗದ ಬೌಲಿಂಗ್ ಮಾಡುವ ಮೂಲಕ 150 ಪ್ಲಸ್ ವೇಗದಲ್ಲಿ ಬೌಲಿಂಗ್ ಮಾಡ್ತಿರುವ ಈ ಸೆನ್ಷೆಷನಲ್ ಸ್ಟಾರ್ ಉಮ್ರಾನ್ ಮಲಿಕ್ ಈವರೆಗೆ ಆಡಿರುವ 8 ಪಂದ್ಯಗಳಿಂದ 15 ವಿಕೆಟ್ ಪಡೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಸೆದಿರುವ ವೇಗದ ಬೌಲಿಂಗ್ಗಳಲ್ಲಿ ಇದು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
20ನೇ ಓವರ್ನಲ್ಲಿ 157 kmph ವೇಗ ಎಸೆದ ಉಮ್ರಾನ್:ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಲ್ಲಿ 20ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲಿಕ್ ದಾಖಲೆಯ 157 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಮಲಿಕ್, 4 ಓವರ್ಗಳಲ್ಲಿ 52ರನ್ ನೀಡಿದ್ದು, ಯಾವುದೇ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ಈಗಾಗಲೇ ಶಾನ್ ಟೈಟ್ 157.71 ಕಿ. ಮೀ, ಅನ್ರಿಚ್ ನಾರ್ಟ್ಜೆ 156.22 ಕಿ.ಮೀ, ಅನ್ರಿಚ್ ನಾರ್ಟ್ಜೆ 155.21 ಕಿ.ಮೀ ವೇಗ ಎಸೆಯಲಾಗಿದ್ದು, ಇದೀಗ ಉಮ್ರಾನ್ ಮಲಿಕ್ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ.