ಕರ್ನಾಟಕ

karnataka

ETV Bharat / sports

RR - LSG : ಪಂದ್ಯ ಗೆದ್ದು ಫ್ಲೇ-ಆಫ್​ ಪ್ರವೇಶಿಸುವ ಕನಸಿನಲ್ಲಿ ರಾಜಸ್ಥಾನ

ತಂಡಗಳಲ್ಲಿ ಬದಲಾವಣೆಗಳಾಗಿದ್ದು ಲಖನೌ ಭಾಗದಲ್ಲಿ ಕರಣ್ ಶರ್ಮಾ ಬದಲಿಗೆ ರವಿ ಬಿಷ್ಣೋಯ್ ಕಾಣಿಸಿಕೊಂಡರೆ, ಜಿಮ್ಮಿ ನೀಶಮ್ ಮತ್ತು ಒಬೆದ್ ಮೆಕಾಯ್ ಕುಲದೀಪ್​ ಸೇನ್​ ಮತ್ತು ಡಸ್ಸೆನ್ ಜಾಗಕ್ಕೆ ಬದಲಿಯಾಗಿ ಆಡಲಿದ್ದಾರೆ..

RR opt to bat against LSG
ಪಂದ್ಯ ಗೆದ್ದು ಫ್ಲೇ - ಆಫ್​ ಪ್ರವೇಶಿಸುವ ಕನಸಿನಲ್ಲಿ ರಾಜಸ್ಥಾನ

By

Published : May 15, 2022, 7:50 PM IST

ಮುಂಬೈ :ಭಾನುವಾರದ ಡಬಲ್ ಹೆಡರ್​ನ ಎರಡನೇ ಪಂದ್ಯ ಲಖನೌ ಸೂಪರ್​ ಜೈಂಟ್ಸ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ನಡುವೆ ನಡೆಯಲಿದೆ. ಟಾಸ್​ ಗೆದ್ದ ರಾಜಸ್ಥಾನ ಬ್ಯಾಟಿಂಗ್​ ಮಾಡಲು ಮುಂದಾಗಿದೆ. ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿರುವ ಲಖನೌ ಫ್ಲೇ-ಆಫ್​ಗೆ ಪ್ರವೇಶಿಸಿದೆ.

ರಾಜಸ್ಥಾನಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದ ಗೆಲುವಿನೊಂದಿಗೆ ಫ್ಲೇ-ಆಫ್​ ಖಚಿತವಾಗಲಿದೆ. ಈ ಪಂದ್ಯ ಸೋತಲ್ಲಿ ಫ್ಲೇ-ಆಫ್​ ಹಾದಿ ಕಠಿಣವಾಗಲಿದೆ. ರಾಜಸ್ಥಾನ 12 ಪಂದ್ಯಗಳಲ್ಲಿ ಏಳನ್ನು ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಲಖನೌ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಕರಣ್​ ಶರ್ಮಾ ಜಾಗಕ್ಕೆ ಬದಲಿಯಾಗಿ ರವಿ ಬಿಷ್ಣೋಯ್ ಆಡಲಿದ್ದಾರೆ. ರಾಜಸ್ಥಾನದಲ್ಲಿ ಎರಡು ಬದಲಾವಣೆಯಾಗಿದ್ದು, ಜೇಮ್ಸ್ ನೀಶಮ್ ಮತ್ತು ಒಬೆದ್ ಮೆಕಾಯ್ ಇಂದಿನ ಪಂದ್ಯದಲ್ಲಿ ಕುಲದೀಪ್​ ಸೇನ್​ ಮತ್ತು ಡಸ್ಸೆನ್ ಜಾಗಕ್ಕೆ ಬದಲಿಯಾಗಿ ಆಡಲಿದ್ದಾರೆ.

ಲಖನೌ ಸೂಪರ್​ ಜೈಂಟ್ಸ್​ :ಕ್ವಿಂಟನ್ ಡಿ ಕಾಕ್ (ಡಬ್ಲ್ಯು), ಕೆಎಲ್ ರಾಹುಲ್ (ಸಿ), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಅವೇಶ್ ಖಾನ್

ರಾಜಸ್ಥಾನ ರಾಯಲ್ಸ್​ :ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (w/c), ದೇವದತ್ ಪಡಿಕ್ಕಲ್, ಜೇಮ್ಸ್ ನೀಶಮ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಒಬೆದ್ ಮೆಕಾಯ್

ABOUT THE AUTHOR

...view details