ಕರ್ನಾಟಕ

karnataka

ETV Bharat / sports

ಬೈರ್​​ಸ್ಟೋ-ಲಿವಿಂಗ್​ಸ್ಟೋನ್ ಸ್ಫೋಟಕ ಬ್ಯಾಟಿಂಗ್​... ಆರ್​ಸಿಬಿ ಗೆಲುವಿಗೆ 210ರನ್ ಟಾರ್ಗೆಟ್​​​​ - ಬೆಂಗಳೂರು ವರ್ಸಸ್ ಪಂಜಾಬ್

ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಪಂಜಾಬ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತಿ ಅವಶ್ಯವಾಗಿದೆ. ಹೀಗಾಗಿ, ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿ 20 ಓವರ್​​ಗಳಲ್ಲಿ 209ರನ್​​ಗಳಿಸಿದೆ.

RCB vs PBKS
RCB vs PBKS

By

Published : May 13, 2022, 7:20 PM IST

Updated : May 13, 2022, 9:36 PM IST

ಮುಂಬೈ: ಪಂಜಾಬ್​ ಕಿಂಗ್ಸ್ ತಂಡದ ಬೈರ್​​ಸ್ಟೋ(66) ಹಾಗೂ ಲಿವಿಗ್​​ಸ್ಟೋನ್​​(70)ರನ್​ಗಳ ನೆರವಿನಿಂದ ನಿಗದಿತ 20 ಓವರ್​​​ಗಳಲ್ಲಿ 9 ವಿಕೆಟ್​​ನಷ್ಟಕ್ಕೆ 209ರನ್​​​ಗಳಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್​ ಕಿಂಗ್ಸ್​​​ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿತು.

ಆರಂಭಿಕರಾಗಿ ಕಣಕ್ಕಿಳಿದ ಬೈರ್​ಸ್ಟೋ-ಶಿಖರ್​ ಧವನ್ ಮೊದಲ ವಿಕೆಟ್​ನಷ್ಟಕ್ಕೆ 60ರನ್​​​ಗಳಿಕೆ ಮಾಡಿತು. ಆರ್​​ಸಿಬಿ ಬೌಲರ್​​ಗಳನ್ನ ಯದ್ವಾತದ್ವಾ ದಂಡಿಸಿದ ಬೈರ್​​ಸ್ಟೋ ತಾವು ಎದುರಿಸಿದ 29 ಎಸೆತಗಳಲ್ಲಿ 7 ಸಿಕ್ಸರ್​, 4 ಬೌಂಡರಿ ಸಮೇತ 66ರನ್​​​ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ಧವನ್ ಕೂಡ 15 ಎಸೆತಗಳಲ್ಲಿ 21ರನ್​​​ಗಳಿಕೆ ಮಾಡಿ ಮ್ಯಾಕ್ಸವೆಲ್​ ಓವರ್​​ನಲ್ಲಿ ಔಟಾದರು. ಇದರ ಬೆನ್ನಲ್ಲೇ ಬಂದ ರಾಜಪಕ್ಸೆ 1 ರನ್​​ಗಳಿಸಿ ಹಸರಂಗ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದರು.

ನಾಲ್ಕು ವಿಕೆಟ್ ಪಡೆದು ಮಿಂಚಿದ ಹರ್ಷಲ್ ಪಟೇಲ್​

ಬೈರ್​ಸ್ಟೋ- ಲಿವಿಂಗ್​ಸ್ಟೋನ್​ ಅಬ್ಬರದಾಟ: ಆರ್​ಸಿಬಿ ಬೌಲರ್​​ಗಳ ಮೇಲೆ ದಾಳಿ ನಡೆಸಿದ ಆರಂಭಿಕ ಬ್ಯಾಟರ್​ ಬೈರ್​ಸ್ಟೋ ಹಾಗೂ ಮಧ್ಯಮ ಕ್ರಮಾಂಕದ ಲಿವಿಂಗ್​ಸ್ಟೋನ್ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಬೈರ್​ ಸ್ಟೋ 66ರನ್​​​ಗಳಿಕೆ ಮಾಡಿದರೆ, ಲಿವಿಗ್​ಸ್ಟೋನ್​ 42 ಎಸೆತಗಳಲ್ಲಿ 4 ಸಿಕ್ಸರ್​, 5 ಬೌಂಡರಿ ಸಮೇತ 70ರನ್​​​ಗಳಿಸಿದರು.​

ಇದಾದ ಬಳಿಕ ಬಂದ ಲಿವಿಂಗ್​ಸ್ಟೋನ್(70)​ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಇವರಿಗೆ ಕ್ಯಾಪ್ಟನ್ ಮಯಾಂಕ್​​(19), ಶರ್ಮಾ(9), ಬ್ರಾರ್​​(7)ರನ್​, ರಿಷಿ ಧವನ್​(7)ರನ್​ಗಳಿಸಿದರು. ಕೊನೆಯದಾಗಿ ತಂಡ 20 ಓವರ್​​​​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 209ರನ್​​​ಗಳಿಕೆ ಮಾಡಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 4 ವಿಕೆಟ್​​, ಹಸರಂಗ ತಲಾ 2 ವಿಕೆಟ್​ ಪಡೆದರೆ, ಮ್ಯಾಕ್ಸವೆಲ್​, ಅಹ್ಮದ್ ತಲಾ 1 ವಿಕೆಟ್ ಕಿತ್ತರು.

ಇಂಡಿಯನ್​ ಪ್ರೀಮಿಯರ್​ ಲೀಗ್​​ನ 60ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಪಂಜಾಬ್​ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದ ಆರ್​ಸಿಬಿ ಕ್ಯಾಪ್ಟನ್​ ಡುಪ್ಲೆಸಿ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಪ್ಲೇ-ಆಫ್​​​ಗೆ ಲಗ್ಗೆ ಹಾಕುವ ಉದ್ದೇಶದಿಂದ ಆರ್​​ಸಿಬಿಗೆ ಈ ಪಂದ್ಯ ಮಹತ್ವದಾಗಿದ್ದು, ಪಂಜಾಬ್​ ವಿರುದ್ಧ ಇಂದಿನ ಪಂದ್ಯದಲ್ಲಿ ಜಯ ದಾಖಲು ಮಾಡಿದರೆ, ಮುಂದಿನ ಹಂತಕ್ಕೆ ಬಹುತೇಕ ಲಗ್ಗೆ ಹಾಕಲಿದೆ.

ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಡುಪ್ಲೆಸಿ

ಪಂಜಾಬ್ ಕಿಂಗ್ಸ್​​: ಬೈರ್​​ಸ್ಟೋ, ಶಿಖರ್ ಧವನ್​, ಭಾನುಕ್ ರಾಜಪಕ್ಸೆ, ಮಯಾಂಕ್ ಅಗರವಾಲ್​(ಕ್ಯಾಪ್ಟನ್), ಜಿತೇಶ್ ಶರ್ಮಾ(ವಿ,ಕೀ), ಲಿವಿಂಗ್​​ಸ್ಟೋನ್​, ರಿಷಿ ಧವನ್​, ಕಾಗಿಸೋ ರಬಾಡಾ, ರಾಹುಲ್ ಚಹರ್​, ಹರ್ಪ್ರಿತ್​ ಬ್ರಾರ್​,ಅರ್ಷದೀಪ್​ ಸಿಂಗ್

ಬೆಂಗಳೂರು ತಂಡ:ವಿರಾಟ್​ ಕೊಹ್ಲಿ, ಫಾಫ್ ಡು ಪ್ಲೆಸಿಸ್​(ಕ್ಯಾಪ್ಟನ್), ರಜತ್ ಪಟಿದಾರ್​, ಗ್ಲೇನ್ ಮ್ಯಾಕ್ಸ್​ವೆಲ್, ದಿನೇಶ್ ಕಾರ್ತಿಕ್​(ವಿ,ಕೀ), ಮಹಿಪಾಲ್, ಅಹ್ಮದ್​, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್​, ಜೋಸ್ ಹ್ಯಾಜಲ್​ವುಡ್

ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ವೇಳೆ ಪಂಜಾಬ್ ತಂಡ 5 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ. ಐಪಿಎಲ್​​ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಪಂಜಾಬ್​ 16 ಹಾಗೂ ಆರ್​ಸಿಬಿ 13 ಸಲ ಗೆಲುವಿನ ನಗೆ ಬೀರಿದೆ.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಪ್ಲೇ-ಆಫ್​ ರೇಸ್​ನಲ್ಲಿರುವ ಕಾರಣ ಎರಡು ತಂಡಗಳಿಗೂ ಈ ಪಂದ್ಯ ಅತಿ ಮುಖ್ಯವಾಗಿದೆ. ಐಪಿಎಲ್​​ನಲ್ಲಿ ಆರ್​​ಸಿಬಿ ಇಲ್ಲಿಯವರೆಗೆ 12 ಪಂದ್ಯಗಳ ಪೈಕಿ 7ರಲ್ಲಿ ಜಯ, 5ರಲ್ಲಿ ಸೋಲು ಕಂಡಿದ್ದು, 14 ಪಾಯಿಂಟ್​​ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಪಂಜಾಬ್​ ಸದ್ಯ 8ನೇ ಸ್ಥಾನದಲ್ಲಿದೆ.

Last Updated : May 13, 2022, 9:36 PM IST

For All Latest Updates

ABOUT THE AUTHOR

...view details