ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಫಾಪ್ ಡು ಪ್ಲೆಸಿಸ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.
ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ವಿರುದ್ಧ ಗೆದ್ದಿರುವ ಕೆಕೆಆರ್ ಹಾಗೂ ಪಂಜಾಬ್ ವಿರುದ್ಧ ಸೋಲು ಕಂಡಿರುವ ಆರ್ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಬೆಂಗಳೂರು ತಂಡ ಆಡುವ 11ರ ಬಳಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ, ಆದರೆ, ಕೆಕೆಆರ್ ಮಾವಿ ಜಾಗಕ್ಕೆ ಅನುಭವಿ ಸೌಥಿಗೆ ಮಣೆ ಹಾಕಿದೆ.
ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 205 ರನ್ ಬಾರಿಸಿದ್ದರೂ ಬೌಲಿಂಗ್ನಲ್ಲಿ ವೈಫಲ್ಯತೆ ಅನುಭವಿಸಿದ್ದ ಬೆಂಗಳೂರು 5 ವಿಕೆಟ್ಗಳಿಂದ ಸೋಲು ಕಂಡಿತ್ತು. ತಂಡ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಆರಂಭಿಕ ಪಂದ್ಯದಲ್ಲೇ ಮಿಂಚಿನ ಬ್ಯಾಟಿಂಗ್ ನಡೆಸಿ 57 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಆದರೆ, ಮೊಹಮದ್ ಸಿರಾಜ್ ಸೇರಿದಂತೆ ಪ್ರಮುಖ ಬೌಲರ್ಗಳ ವೈಫಲ್ಯತೆಯಿಂದ ಸೋಲು ಕಂಡಿತ್ತು.
ಇನ್ನೊಂದೆಡೆ, ಎದುರಾಳಿ ನೈಟ್ ರೈಡರ್ಸ್ ಯುವ ಮುಂದಾಳು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯದಲ್ಲಿನ ಗೆಲುವಿನ ವಿಶ್ವಾಸದಲ್ಲಿದೆ. ಉಮೇಶ್ ಯಾದವ್, ನರೈನ್ ಸೇರಿದಂತೆ ಬೌಲರ್ಗಳ ಕರಾರುವಾಕ್ ದಾಳಿಯಿಂದ ಚೆನ್ನೈ ವಿರುದ್ಧ ಸುಲಭದ ಜಯ ಸಾಧಿಸಿತ್ತು.ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ಕೋಲ್ಕತ್ತಾ, ಇಲ್ಲಿ ಯಾವುದೇ ಸೋಲು ಕಂಡಿಲ್ಲ. ಅಲ್ಲದೆ, ಬೆಂಗಳೂರು ವಿರುದ್ಧ ನೈಟ್ ರೈಡರ್ಸ್ ಕಳೆದ ಸೀಸನ್ನಲ್ಲಿನ ಎಲಿಮಿನೇಟರ್ ಸೇರಿದಂತೆ ಈ ಹಿಂದೆ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.