ಕರ್ನಾಟಕ

karnataka

ETV Bharat / sports

ಅಂದು 68ಕ್ಕೆ ಆಲೌಟ್​, ಇಂದು 67 ರನ್​ಗಳ ಜಯ... ಹೈದರಾಬಾದ್​ ವಿರುದ್ಧ ಸೇಡು ತೀರಿಸಿಕೊಂಡ ಆರ್​ಸಿಬಿ - ಹೈದರಾಬಾದ್​ ವಿರುದ್ಧ ಗೆದ್ಧ ಆರ್​ಸಿಬಿ

ಏಪ್ರಿಲ್​ 23ರಂದು ನಡೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೇವಲ 68 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಮುಖಭಂಗಕ್ಕೊಳಗಾಗಿದ್ದ ಬೆಂಗಳೂರು ತಂಡ, ಇಂದಿನ ಪಂದ್ಯದಲ್ಲಿ 67 ರನ್​ಗಳ ಅಂತರದ ಜಯ ದಾಖಲಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

IPL 2022: RCB win against SRH
IPL 2022: RCB win against SRH

By

Published : May 8, 2022, 8:40 PM IST

Updated : May 8, 2022, 9:11 PM IST

ಮುಂಬೈ:ಏಪ್ರಿಲ್​ 23 ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕರಾಳ ದಿನ. ಹೈದರಾಬಾದ್​ ವಿರುದ್ಧದ ಈ ಹಿಂದಿನ ಪಂದ್ಯದಲ್ಲೂ ಇದು ಸಾಬೀತಾಗಿತ್ತು. ಕೇನ್​ ವಿಲಿಯಮ್ಸನ್ ಪಡೆ ವಿರುದ್ಧ ಡುಪ್ಲೆಸಿಸ್​ ಬಳಗ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ, ಕೇವಲ 68 ರನ್​ಗಳಿಗೆ ಆಲೌಟ್​ ಆಗಿತ್ತು. ಇದೀಗ ಆ ಮುಖಭಂಗಕ್ಕೆ ಸೇಡು ತೀರಿಸಿಕೊಂಡಿದೆ.

ನವಿ ಮುಂಬೈ ಮೈದಾನದಲ್ಲಿ ಭಾನುವಾರ ನಡೆದ 54ನೇ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ಆರಂಭಿಕ ಆಘಾತದ ನಡುವೆಯೂ ನಾಯಕ ಡುಪ್ಲೆಸಿಸ್​​ 73 ರನ್​, ಪಾಟಿದಾರ್ 48 ರನ್​, ಮ್ಯಾಕ್ಸವೆಲ್​ 33 ಹಾಗೂ ದಿನೇಶ್ ಕಾರ್ತಿಕ್​ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್​ ಸಮೇತ ಅಜೇಯ 30 ರನ್​ಗಳಿಕೆ ಮಾಡಿ ತಂಡ 192 ರನ್​ ಪೇರಿಸಲು ನೆರವಾದರು.

ಇದನ್ನೂ ಓದಿ: ಆರ್​ಸಿಬಿಗೆ ಮತ್ತೊಮ್ಮೆ ಕರಾಳದಿನವಾದ ಏಪ್ರಿಲ್ 23! ಅಂದು 49, ಇಂದು 68ಕ್ಕೆ ಆಲೌಟ್​

ಇದರ ಬೆನ್ನತ್ತಿದ ಹೈದರಾಬಾದ್​ ಆರಂಭದಲ್ಲೇ ಕ್ಯಾಪ್ಟನ್ ವಿಲಿಯಮ್ಸನ್ ಹಾಗೂ ಅಭಿಷೇಕ್​ ಶರ್ಮಾ ವಿಕೆಟ್ ಕಳೆದುಕೊಂಡಿತು. 19.2 ಓವರ್​ಗಳಲ್ಲಿ 125 ರನ್​ಗಳಿಗೆ ಆಲೌಟ್​ ಆಗುವ ಮೂಲಕ 67 ರನ್​ಗಳ ಸೋಲು ಕಂಡಿತು. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ವನಿಂದು ಹಸರಂಗ 5 ವಿಕೆಟ್​ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಆರ್​ಸಿಬಿ 14 ಪಾಯಿಂಟ್​ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಸತತ 4ನೇ ಸೋಲು ಕಂಡ ಹೈದರಾಬಾದ್​ 6ನೇ ಸ್ಥಾನಕ್ಕೆ ತಲುಪಿದೆ.

ಆರ್​ಸಿಬಿಗೆ ಏಪ್ರಿಲ್ 23 ಕರಾಳ:2013ರಲ್ಲಿ ಪುಣೆ ತಂಡದ ವಿರುದ್ಧ ನಡೆದ ಪಂದ್ಯದಲ್ಲೂ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್​ ಆಗಿತ್ತು. ಈ ವರ್ಷ ಕೂಡ ಹೈದರಾಬಾದ್​ ವಿರುದ್ಧ 68 ರನ್​ಗಳಿಗೆ ಆಲೌಟ್​ ಆಗಿ, ಈ ಆವೃತ್ತಿಯಲ್ಲಿ ಅತಿ ಕಡಿಮೆ ರನ್​ಗಳಿಗೆ ಆಲೌಟ್​ ಆದ ತಂಡವಾಗಿದೆ. ಇದೀಗ, ಅದಕ್ಕೆ ಸೇಡು ತೀರಿಸಿಕೊಂಡಿದೆ.

Last Updated : May 8, 2022, 9:11 PM IST

ABOUT THE AUTHOR

...view details