ಮುಂಬೈ: ಬೆಂಗಳೂರು ತಂಡದ ಆಲ್ರೌಂಡರ್ ವನಿದು ಹಸರಂಗ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಬೆಂಗಳೂರು ತಂಡದ ಗೆಲುವಿಗೆ 129 ರನ್ಗಳ ಸುಲಭ ಟಾರ್ಗೆಟ್ ನೀಡಿದೆ. ಡಿ.ವೈ.ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ ಪಡೆ, ಆರ್ಸಿಬಿ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋಯಿತು.
ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್(10) ಹಾಗೂ ರಹಾನೆ(9) ಮೊದಲ ಮೂರು ಓವರ್ಗಳಲ್ಲೇ ವಿಕೆಟ್ ಕಳೆದುಕೊಂಡರು. ಅಯ್ಯರ್ ವಿಕೆಟ್ ಕೀಳುವಲ್ಲಿ ಆಕಾಶ್ ದೀಪ್ ಯಶಸ್ವಿಯಾದರೆ, ರಹಾನೆ ವಿಕೆಟ್ ಸಿರಾಜ್ ಪಡೆದುಕೊಂಡರು. ಇದಾದ ಬಳಿಕ ಯಾವುದೇ ಆಟಗಾರ ಹೇಳಿಕೊಳ್ಳುವಂತಹ ಆಟ ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್ ರಹಾನೆ(13), ನಿತೀಶ್ ರಾಣಾ(10), ಸುನಿಲ್ ನರೈನ್(12), ಬಿಲ್ಲಿಂಗ್ಸ್(14)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮೊದಲ 10 ಓವರ್ಗಳಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು 76ರನ್ಗಳಿಕೆ ಮಾಡಿತು.