ಮುಂಬೈ:ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಪಂಜಾಬ್ ನೀಡಿದ್ದ ಸ್ಪರ್ಧಾತ್ಮಕ 190 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಕೊನೆ ಓವರ್ನಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಭದ್ರವಾಗಿದೆ. ಆದರೆ, ಸೋಲು ಕಂಡಿರುವ ಪಂಜಾಬ್ ಪ್ಲೇ-ಆಫ್ ಹಾದಿ ಮತ್ತಷ್ಟು ದುರ್ಗಮವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಬೈರ್ಸ್ಟೋ ಅವರ ಆಕರ್ಷಕ 56ರನ್ ಹಾಗೂ ಜಿತೇಶ್ ಶರ್ಮಾ ಸ್ಫೋಟಕ 38ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 189ರನ್ಗಳಿಕೆ ಮಾಡಿತು. ಈ ಸ್ಕೋರ್ ಸುಲಭವಾಗಿ ಬೆನ್ನತ್ತಿದ ರಾಜಸ್ಥಾನ 19.4 ಓವರ್ಗಳಲ್ಲಿ 4ವಿಕೆಟ್ನಷ್ಟಕ್ಕೆ 190 ರನ್ಗಳಿಸಿ ಗೆಲುವಿನ ನಗೆ ಬೀರಿದೆ.
ಗುರಿ ಬೆನ್ನತ್ತಿದ ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಬಟ್ಲರ್-ಜೈಸ್ವಾಲ್ ಜೊಡಿ ಉತ್ತಮ ಆರಂಭ ಒದಗಿಸಿತು. ಆದರೆ, 30 ರನ್ಗಳಿಕೆ ಮಾಡಿದ ವೇಳೆ ಬಟ್ಲರ್ ರಬಾಡಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಕ್ಯಾಪ್ಟನ್ ಸ್ಯಾಮ್ಸನ್ ಕೇವಲ 12 ಎಸೆತಗಳಲ್ಲಿ 23ರನ್ಗಳಿಕೆ ಮಾಡಿ, ರಿಷಿ ಧವನ್ ಓವರ್ನಲ್ಲಿ ಕ್ಯಾಚ್ ನೀಡಿದರು.