ಕರ್ನಾಟಕ

karnataka

ETV Bharat / sports

IPL 2022: ಪಂಜಾಬ್​ ಸಂಘಟಿತ ಬ್ಯಾಟಿಂಗ್​.. ರಾಜಸ್ಥಾನ ಗೆಲುವಿಗೆ 190 ರನ್ ಟಾರ್ಗೆಟ್​ - ಪಂಜಾಬ್ ಕಿಂಗ್ಸ್​

ಪ್ಲೇ-ಆಫ್ ರೇಸ್​ನಲ್ಲಿ ಉಳಿದುಕೊಳ್ಳಲು ಮಹತ್ವದ ಪಂದ್ಯವಾಗಿದ್ದು, ಇಂದಿನ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್​ ಕಿಂಗ್ಸ್ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿರುವ ಪಂಜಾಬ್​ ಎದುರಾಳಿ ತಂಡಕ್ಕೆ 190ರನ್​ಗಳ ಟಾರ್ಗೆಟ್ ನೀಡಿದೆ.

Punjab Kings vs Rajasthan Royals
Punjab Kings vs Rajasthan Royals

By

Published : May 7, 2022, 3:24 PM IST

Updated : May 7, 2022, 5:29 PM IST

ಮುಂಬೈ:ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​​ನಷ್ಟಕ್ಕೆ 189 ರನ್​ಗಳಿಕೆ ಮಾಡಿದ್ದು, ಎದುರಾಳಿ ರಾಜಸ್ಥಾನ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್​ ನೀಡಿದೆ.

ಆರಂಭಿಕರಾಗಿ ಕಣಕ್ಕಿಳಿದ ಬೈರ್​​ಸ್ಟೋ - ಶಿಖರ್ ಧವನ್ ಜೋಡಿ ಉತ್ತಮ ಆರಂಭ ಒದಗಿಸಿತು. ಕೇವಲ 5 ಓವರ್​ಗಳಲ್ಲಿ 47ರನ್​ ಸೊರೆಗೈದರು. ಆದರೆ, 12ರನ್​​ಗಳಿಕೆ ಮಾಡಿದ್ದ ಧವನ್​​ ಅಶ್ವಿನ್ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಬಂದ ರಾಜಪಕ್ಸೆ ತಾವು ಎದುರಿಸಿದ 18 ಎಸೆತಗಳಲ್ಲಿ 27ರನ್​ಗಳಿಕೆ ಮಾಡಿ ಚಹಲ್ ಓವರ್​ನಲ್ಲಿ ಔಟಾದರು. 56 ರನ್​ಗಳಿಸಿ ಉತ್ತಮವಾಗಿ ಆಡ್ತಿದ್ದ ಬೈರ್​ ಸ್ಟೋ ಕೂಡ ಚಹಲ್ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಅಗರವಾಲ್​ 15ರನ್​, ಜಿತೇಶ್ ಶರ್ಮಾ 38ರನ್​​ ಗಳಿಸಿದರೆ, ಲಿವಿಗ್​ಸ್ಟೋನ್​​ 22ರನ್​ಗಳಿಸಿ ಮಿಂಚಿದರು. ತಂಡ ಕೊನೆಯದಾಗಿ 5 ವಿಕೆಟ್​​ನಷ್ಟಕ್ಕೆ 189 ರನ್​ಗಳಿಕೆ ಮಾಡಿತು. ರಾಜಸ್ಥಾನ ತಂಡದ ಪರ ಚಹಲ್ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ಅಶ್ವಿನ್​ ತಲಾ 1 ವಿಕೆಟ್ ಪಡೆದರು.

ಇಂಡಿಯನ್​ ಪ್ರೀಮಿಯರ್​ ಲೀಗ್​​ನ 25ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಸವಾಲು ಎದುರಿಸಲು ಪಂಜಾಬ್​ ಕಿಂಗ್ಸ್​ ಸನ್ನದ್ಧವಾಗಿದ್ದು, ಟಾಸ್​​ ಗೆದ್ದು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಪ್ಲೇ-ಆಫ್​​ ರೇಸ್​​ನಲ್ಲಿ ಉಳಿದುಕೊಳ್ಳುವ ಉದ್ದೇಶದಿಂದ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಈಗಾಗಲೇ ಪಾಯಿಂಟ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ಇಂದಿನ ಪಂದ್ಯದಲ್ಲಿ ಗೆದ್ದು, ಎರಡನೇ ಸ್ಥಾನಕ್ಕೆ ಲಗ್ಗೆ ಹಾಕುವ ತವಕದಲ್ಲಿದ್ದರೆ, ಪಂಜಾಬ್​ ಕಿಂಗ್ಸ್​​​ ಕೂಡ ಈ ಪಂದ್ಯ ಗೆದ್ದು ರೇಸ್​​ನಲ್ಲಿ ಉಳಿಯವ ಇರಾದೆ ಹೊಂದಿದೆ.

ಇಂದಿನ ಪಂದ್ಯಕ್ಕಾಗಿ ಪಂಜಾಬ್ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ, ರಾಜಸ್ಥಾನ ತಂಡ ಕರುಣ್ ನಾಯರ್ ಜಾಗಕ್ಕೆ ಯಶಸ್ವಿ ಜೈಸ್ವಾಲ್​ಗೆ ಮಣೆ ಹಾಕಿದೆ.

ರಾಜಸ್ಥಾನ ರಾಯಲ್ಸ್​​:ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​(ವಿ.ಕೀ/ ಕ್ಯಾಪ್ಟನ್​), ದೇವದತ್​ ಪಡಿಕ್ಕಲ್​, ರಿಯಾಗ್ ಪರಾಗ್, ಶಿಮ್ರಾನ್ ಹೆಟ್ಮಾಯರ್​, ಆರ್​.ಅಶ್ವಿನ್​, ಟ್ರೆಟ್​ ಬೊಲ್ಟ್​, ಪ್ರಸಿದ್ಧ್​ ಕೃಷ್ಣ, ಯಜುವೇಂದ್ರ ಚಹಲ್​, ಕುಲ್ದೀಪ್ ಸೇನ್​

ಪಂಜಾಬ್ ಕಿಂಗ್ಸ್​​:ಬೈರ್​ಸ್ಟೋ, ಶಿಖರ್ ಧವನ್, ಮಯಾಂಕ್​ ಅಗರವಾಲ್​(ಕ್ಯಾಪ್ಟನ್​), ಭಾನುಕಾ ರಾಜಪಕ್ಸೆ, ಲಿವಿಗ್​ಸ್ಟೋನ್​, ಜಿತೇಶ್ ಶರ್ಮಾ(ವಿ.ಕೀ), ರಿಶಿ ಧವನ್​, ಕಾಗಿಸೊ ರಬಾಡಾ, ರಾಹುಲ್ ಚಹರ್​, ಅರ್ಷದೀಪ್​ ಸಿಂಗ್​, ಸಂದೀಪ್ ಶರ್ಮಾ

Last Updated : May 7, 2022, 5:29 PM IST

ABOUT THE AUTHOR

...view details