ಕರ್ನಾಟಕ

karnataka

ETV Bharat / sports

ಸೋತು ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದ ಪಂಜಾಬ್​... ಭರ್ಜರಿ ಜಯದೊಂದಿಗೆ 4ನೇ ಸ್ಥಾನಕ್ಕೆ ಡೆಲ್ಲಿ ಲಗ್ಗೆ - ಪಂಜಾಬ್ ಕಿಂಗ್ಸ್​

ಪ್ಲೇ-ಆಫ್​ ರೇಸ್​ನಲ್ಲಿ ಜೀವಂತವಾಗಿರಲು ಇಂದಿನ ಪಂದ್ಯ ಡೆಲ್ಲಿ ಹಾಗೂ ಪಂಜಾಬ್​ಗೆ ಮಹತ್ವದಾಗಿತ್ತು. ರೋಚಕ ಪಂದ್ಯದಲ್ಲಿ ಸೋಲು ಕಂಡಿರುವ ಪಂಜಾಬ್​ ರೇಸ್​​ನಿಂದ ಹೊರಬಿದ್ದಿದೆ.

Punjab Kings vs Delhi Capitals
Punjab Kings vs Delhi Capitals

By

Published : May 16, 2022, 7:16 PM IST

Updated : May 17, 2022, 12:35 AM IST

ಮುಂಬೈ:ಮಿಚೆಲ್​ ಮಾರ್ಷ್​ ಆಕರ್ಷಕ ಅರ್ಧಶತಕ ಹಾಗೂ ಬೌಲರ್​ಗಳ ಸಂಘಟಿತ ಪ್ರದರ್ಶನದಿಂದ ಪಂಜಾಬ್ ವಿರುದ್ಧ 17ರನ್​​ಗಳ ಅಂತರದ ಗೆಲುವಿನ ನಗೆ ಬೀರಿರುವ ಡೆಲ್ಲಿ ಕ್ಯಾಪಿಟಲ್​​​ ಪಾಯಿಂಟ್​ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಮಹತ್ವದ ಪಂದ್ಯದಲ್ಲಿ ಸೋಲು ಕಂಡಿರುವ ಮಯಾಂಕ್​ ಅಗರವಾಲ್ ಪಡೆ ಐಪಿಎಲ್​​​ನಲ್ಲಿ ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದಿದೆ.

ಡಿವೈ ಪಾಟೀಲ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಲಿವಿಂಗ್​​ಸ್ಟೋನ್​ ಸ್ಪಿನ್ ಮೋಡಿ ನಡುವೆ ಕೂಡ ಮಿಚೆಲ್​ ಮಾರ್ಷ್​​(63) ಅಮೋಘ ಬ್ಯಾಟಿಂಗ್ ನೆರವಿನಿಂದ 20 ಓವರ್​​ಗಳಲ್ಲಿ 7 ವಿಕೆಟ್​ನಷ್ಟಕ್ಕೆ 159ರನ್​ಗಳಿಕೆ ಮಾಡಿತು.

160ರನ್​ಗುರಿ ಬೆನ್ನತ್ತಿದ ಪಂಜಾಬ್ ಆರಂಭ ಉತ್ತಮವಾಗಿತ್ತು. ಆದರೆ, 28ರನ್​​ಗಳಿಕೆ ಮಾಡಿದ್ದ ವೇಳೆ ಬೈರ್​ಸ್ಟೋ ವಿಕೆಟ್​ ಪತನಗೊಳ್ಳುತ್ತಿದ್ದಂತೆ ತಂಡದ ಪೆವಲಿಯನ್ ಪರೇಡ್​ ಶುರುವಾಯಿತು. ರಾಜಪಕ್ಸೆ ಕೂಡ 4ರನ್​​ಗಳಿಸಿ ನಿರಾಸೆ ಮೂಡಿಸಿದರು. ಧವನ್ ಕೂಡ 19ರನ್​​ಗಳಿಸಿ ಔಟಾದರು.ಇದರ ಬೆನ್ನಲ್ಲೇ ಲಿವಿಂಗ್​ಸ್ಟೋನ್​​(4), ಕ್ಯಾಪ್ಟನ್ ಅಗವಾಲ್​​(0), ಹರ್ಪ್ರಿತ್ ಬ್ರಾರ್​(1) ರಿಷಿ ಧವನ್​​(4) ನಿರಾಸೆ ಮೂಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ ಶರ್ಮಾ-ಚಹರ್​: ಒಂದರ ಹಿಂದೆ ಮತ್ತೊಂದರಂತೆ ವಿಕೆಟ್​ ಕಳೆದುಕೊಳ್ಳುತ್ತಿದ್ದ ವೇಳೆ ಮಧ್ಯಮ ಕ್ರಮಾಂಕದಲ್ಲಿ ಒಂದಾದ ಜಿತೇಶ್​ ಶರ್ಮಾ(44) ಹಾಗೂ ರಾಹುಲ್​ ಚಹರ್​(25) ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, 44ರನ್​ಗಳಿಸಿದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಶರ್ಮಾ ವಿಕೆಟ್​ ಒಪ್ಪಿಸುತ್ತಿದ್ದಂತೆ ತಂಡದ ಗೆಲುವಿನ ಆಸೆ ಕಮರಿತು. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ 9ವಿಕೆಟ್​ ಕಳೆದುಕೊಂಡು 142ರನ್​ ಮಾತ್ರ ಗಳಿಸಲು ಶಕ್ತವಾಯಿತು.

ಡೆಲ್ಲಿ ಪರ ಮಿಂಚಿದ ಶಾರ್ದೂಲ್ ಠಾಕೂರ್ 4ವಿಕೆಟ್​, ಅಕ್ಸರ್​, ಕುಲ್ದೀಪ್ ತಲಾ 2ವಿಕೆಟ್​ ಪಡೆದರೆ, ನೋರ್ಟ್ಜೆ ತಲಾ 1ವಿಕೆಟ್​ ಪಡೆದರು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್​ ಸರ್ಫರಾಜ್​​ ಖಾನ್​(32), ಮಿಚೆಲ್ ಮಾರ್ಷ್​​​​(63) ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್​​​​​​​​​​​​​ ಗೆಲುವಿಗೆ 160​ ರನ್​​ಗಳ ಗುರಿ ನೀಡಿತ್ತು. ಡಿವೈ ಪಾಟೀಲ್ ಮೈದಾನದಲ್ಲಿ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಆರಂಭದಲ್ಲೇ ವಾರ್ನರ್​(0) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಸರ್ಫರಾಜ್​(32ರನ್​) ಮಿಚೆಲ್ ಮಾರ್ಷ್​​(63) ಉತ್ತಮ ಜೊತೆಯಾಟವಾಡಿದರು. ಸರ್ಫರಾಜ್ ವಿಕೆಟ್ ಪತದನ ಬಳಿಕ ಬಂದ ಲಲಿತ್ ಯಾದವ್​(24) ತಂಡಕ್ಕೆ ಆಸರೆಯಾದರು.

ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಪಂತ್(7), ಪೊವೆಲ್(2), ಠಾಕೂರ್​(3) ನಿರಾಸೆ ಮೂಡಿಸಿದರು. ಅಕ್ಸರ್ ಪಟೇಲ್​ 17ರನ್​​ಗಳಿಸಿದರು. ತಂಡ ಕೊನೆಯದಾಗಿ 20 ಓವರ್​​​ಗಳಲ್ಲಿ 7 ವಿಕೆಟ್​​ನಷ್ಟಕ್ಕೆ 159ರನ್​​​ಗಳಿಕೆ ಮಾಡಿತು. ಪಂಜಾಬ್ ಪರ ಲಿವಿಂಗ್​ಸ್ಟೋನ್​, ಅರ್ಷದೀಪ್ ಸಿಂಗ್​ ತಲಾ 3 ವಿಕೆಟ್​ ಪಡೆದರೆ, ರಬಾಡಾ 1 ವಿಕೆಟ್ ಕಿತ್ತರು.

ಡೆಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ ಪಂಜಾಬ್​

ಇಂಡಿಯನ್​ ಪ್ರೀಮಿಯರ್ ಲೀಗ್​​ನ 64ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಿದ್ದವು. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಮಯಾಂಕ್​ ಅಗರವಾಲ್ ಪಡೆ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಇಂದಿನ ಪಂದ್ಯ ಎರಡು ತಂಡಗಳಿಗೆ ಮಹತ್ವದಾಗಿತ್ತು.

ಪಂಜಾಬ್ ಕಿಂಗ್ಸ್ : ಬೈರ್​ಸ್ಟೋ, ಶಿಖರ್ ಧವನ್, ರಾಜಪಕ್ಸೆ, ಲಿವಿಂಗ್​ಸ್ಟೋನ್, ಮಯಾಂಕ್ ಅಗರವಾಲ್​(ಕ್ಯಾಪ್ಟನ್), ಜಿತೇಶ್ ಶರ್ಮಾ(ವಿ,ಕೀ), ಹರ್ಮಪ್ರಿತ್ ಬ್ರಾರ್, ರಿಷಿ ಧವನ್, ಕಾಗಿಸೋ ರಬಾಡಾ, ರಾಹುಲ್ ಚಹರ್, ಅರ್ಷದೀಪ್ ಸಿಂಗ್

ಡೆಲ್ಲಿ ಕ್ಯಾಪಿಟಲ್ಸ್ :ಡೇವಿಡ್​​ ವಾರ್ನರ್, ಸರ್ಫರಾಜ್ ಖಾನ್​, ಮಿಚೆಲ್ ಮಾರ್ಷ್, ರಿಷಭ್ ಪಂತ್(ಕ್ಯಾಪ್ಟನ್​, ವಿ,ಕೀ), ಲಲಿತ್ ಯಾದವ್​, ರೊಮನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಸಿಂಗ್, ಖಲೀಲ್ ಅಹ್ಮದ್, ನೊರ್ಟ್ಜೆ

ಇಂದು ಮುಖಾಮುಖಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​​ 12 ಪಂದ್ಯಗಳ ಪೈಕಿ 6ರಲ್ಲಿ ಜಯ, 6ರಲ್ಲಿ ಸೋಲು ಕಂಡು 12 ಪಾಯಿಂಟ್​​ಗಳೊಂದಿಗೆ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್​​​ ಕೂಡ ಇಷ್ಟೇ ಪಂದ್ಯಗಳಿಂದ 12 ಪಾಯಿಂಟ್​​ಗಳಿಸಿ, 7ನೇ ಸ್ಥಾನದಲ್ಲಿದೆ. ರನ್​​ರೇಟ್​ ಚೆನ್ನಾಗಿರುವ ಕಾರಣ ಇಂದಿನ ಪಂದ್ಯದಲ್ಲಿ ಜಯ ದಾಖಲಿಸುವ ತಂಡ ನೇರವಾಗಿ 4ನೇ ಸ್ಥಾನಕ್ಕೆ ಜಿಗಿಯಲಿದೆ. ಸೋಲುವ ತಂಡ ಪ್ಲೇ-ಆಫ್​​ ರೇಸ್​ನಿಂದ ಹೊರಬೀಳಲಿದೆ. ಇದರ ಜೊತೆಗೆ ಆರ್​​ಸಿಬಿ 5ನೇ ಸ್ಥಾನಕ್ಕೆ ಕುಸಿತ ಕಾಣಲಿದೆ.

ಇದನ್ನೂ ಓದಿ:ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್: ಸೆಮೀಸ್​​ಗೆ ಲಗ್ಗೆ ಹಾಕಿ, ಭಾರತಕ್ಕೆ ಪದಕ ಖಚಿತಪಡಿಸಿದ ನಿಖಾತ್​ ಜರೀನ್

ಐಪಿಎಲ್​​ನಲ್ಲಿ ಉಭಯ ತಂಡಗಳು ಈವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಪಂಜಾಬ್​ 14 ಹಾಗೂ ಡೆಲ್ಲಿ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. 2018ರಿಂದ ಉಭಯ ತಂಡಗಳು 9 ಪಂದ್ಯಗಳಲ್ಲಿ ಎದುರಾಗಿವೆ. ಈ ಪೈಕಿ ಪಂಜಾಬ್ 5ರಲ್ಲಿ ಗೆದ್ದಿದೆ. ಈ ಹಿಂದಿನ ಪಂದ್ಯದಲ್ಲಿ ಪಂಜಾಬ್​ ತಂಡ ಆರ್​ಸಿಬಿ ವಿರುದ್ಧ ಗೆಲುವಿನ ನಗೆ ಬೀರಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ರಾಜಸ್ಥಾನ ರಾಯಲ್ಸ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ.

Last Updated : May 17, 2022, 12:35 AM IST

ABOUT THE AUTHOR

...view details