ಮುಂಬೈ:ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಐಪಿಎಲ್ನ 48ನೇ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಮಯಾಂಕ್ ನೇತೃತ್ವದ ಪಂಜಾಬ್ ಕಿಂಗ್ಸ್ 8 ವಿಕೆಟ್ಗಳ ಗೆಲುವಿನ ನಗೆ ಬೀರಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಸಾಹಸಕ್ಕೆ ಕೈಹಾಕಿದ ಗುಜರಾತ್ ಟೈಟನ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಹೊರತಾಗಿ ಕೂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 143ರನ್ಗಳಿಕೆ ಮಾಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಸಾಯಿ ಸುದರ್ಶನ್ ತಾವು ಎದುರಿಸಿದ 50 ಎಸೆತಗಳಲ್ಲಿ 64ರನ್ಗಳಿಕೆ ಮಾಡಿ, ತಂಡ ಸ್ಪರ್ಧಾತ್ಮಕ ರನ್ಗಳಿಸಲು ಸಹಾಯ ಮಾಡಿದರು.
ಗುಜರಾತ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್ ಗಿಲ್(1) ರನೌಟ್ ಆದರೆ, ನಂತರ ವೃದ್ಧಿಮಾನ್ ಸಹಾ(21) ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಾಯಕ ಪಾಂಡ್ಯ ಕೇವಲ 1ರನ್ಗಳಿಸಿ ರಿಷಿ ಧವನ್ ಬೌಲಿಂಗ್ನಲ್ಲಿ ಔಟಾದರೆ, ಡೇವಿಡ್ ಮಿಲ್ಲರ್(11) ರನ್ಗಳಿಸಿದ ಲಿವಿಂಗ್ಸ್ಟೋನ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಅದ್ಭುತ ಫಾರ್ಮ್ನಲ್ಲಿ ರಾಹುಲ್ ತೆವಾಟಿಯಾ(11) ಮತ್ತು ರಶೀದ್ ಖಾನ್(0) ರನ್ನು ರಬಾಡ 17ನೇ ಓವರ್ನಲ್ಲಿ ಪೆವಿಲಿಯನ್ಗಟ್ಟಿದರು. ನಂತರ ಬಂದ ಪ್ರದೀಪ್ ಸಂಗ್ವಾನ್(2), ಫರ್ಗುಸನ್(5) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ನಿರಂತರ ವಿಕೆಟ್ ಕಳೆದುಕೊಳ್ಳುತ್ತಿದ್ದ ಟೈಟನ್ಸ್ ಒಂದು ಹಂತದಲ್ಲಿ 120-130 ರನ್ ಗಳಿಸುವುದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು. ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಸಾಯಿ ಸುದರ್ಶನ್ ಕೊನೆಯವರೆಗೂ ಕ್ರೀಸ್ನಲ್ಲಿ ನೆಲೆಯೂರಿ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 64 ರನ್ಗಳಿಸಿ ತಂಡದ ಮೊತ್ತವನ್ನು 143ಕ್ಕೆ ಕೊಂಡೊಯ್ದರು.