ಕರ್ನಾಟಕ

karnataka

ETV Bharat / sports

MI vs DC: 3 ವಿಕೆಟ್ ಪಡೆದು ಮಿಂಚಿದ ಬುಮ್ರಾ; ಮುಂಬೈ ಗೆಲುವಿಗೆ 160ರನ್ ಟಾರ್ಗೆಟ್​​​ ನೀಡಿದ ಡೆಲ್ಲಿ

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್​ ಆಯ್ದುಕೊಂಡಿದ್ದು, ಈ ಪಂದ್ಯದಲ್ಲಿ ರೋಹಿತ್ ಬಳಗದ ಗೆಲುವು ಆರ್​ಸಿಬಿ ತಂಡಕ್ಕೆ ಅನಿವಾರ್ಯವಾಗಿದೆ.

Mumbai Indians vs Delhi Capitals
Mumbai Indians vs Delhi Capitals

By

Published : May 21, 2022, 7:31 PM IST

Updated : May 21, 2022, 9:30 PM IST

ಮುಂಬೈ: ಮುಂಬೈ ತಂಡದ ಮಾರಕ ಬೌಲಿಂಗ್ ನಡುವೆ ಕೂಡ ಡೆಲ್ಲಿ ತಂಡದ ಪೊವೆಲ್​​(43), ರಿಷಭ್ ಪಂತ್​(39)ರನ್​ಗಳ ನೆರವಿಂದ ಡೆಲ್ಲಿ ತಂಡ 20 ಓವರ್​ಗಳಲ್ಲಿ 7ವಿಕೆಟ್​ನಷ್ಟಕ್ಕೆ 159ರನ್​​ಗಳಿಕೆ ಮಾಡಿದ್ದು, ಎದುರಾಳಿ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ಆರಂಭದಲ್ಲೇ ಡೇವಿಡ್​ ವಾರ್ನರ್​ ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಮಿಚೆಲ್ ಮಾರ್ಷ್​​(0) ಖಾತೆ ತೆರೆಯುವುದಕ್ಕೂ ಮುನ್ನವೇ ಪೆವಿಲಿಯನ್​ ಸೇರಿಕೊಂಡರು. ಈ ವೇಳೆ ಒಂದಾದ ಪೃಥ್ವಿ ಶಾ- ಕ್ಯಾಪ್ಟನ್ ಪಂತ್ ತಂಡಕ್ಕೆ ಚೇತರಿಕೆ ನೀಡಿದರು.

ಜ್ವರದಿಂದ ಗುಣಮುಖರಾಗಿ ಇಂದಿನ ಪಂದ್ಯದಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಶಾ 24ರನ್​​ಗಳಿಸಿದರೆ, ಪಂತ್​ 39ರನ್​ಗಳ ಕಾಣಿಕೆ ನೀಡಿದರು. ಪಂತ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬಂದ ಸರ್ಫರಾಜ್ ಖಾನ್ 10ರನ್​ ಗಳಿಸಿದರು.

ಅಬ್ಬರಿಸಿದ ಪೊವೆಲ್:ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಡೆಲ್ಲಿ ತಂಡಕ್ಕೆ ಪೊವೆಲ್ ಆಸರೆಯಾದರು. ಇವರು ತಾವು ಎದುರಿಸಿದ 34 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಮೇತ 43 ರನ್​​ಗಳಿಸಿದರು. ಕೊನೆಯಾಗಿ ಅಬ್ಬರಿಸಿದ ಅಕ್ಸರ್ ಕೂಡ ತಾವು ಎದುರಿಸಿದ 10 ಎಸೆತಗಳಲ್ಲಿ 2 ಸಿಕ್ಸರ್ ಸಮೇತ ಅಜೇಯ 19ರನ್​​ಗಳಿಕೆ ಮಾಡಿದ್ದರಿಂದ ತಂಡ 20 ಓವರ್​ಗಳಲ್ಲಿ 7ವಿಕೆಟ್​ನಷ್ಟಕ್ಕೆ 159ರನ್​​​ಗಳಿಕೆ ಮಾಡಿತು.

ಮುಂಬೈ ಇಂಡಿಯನ್ಸ್ ಪರ ಮಿಂಚಿದ ವೇಗಿ ಬುಮ್ರಾ ತಾವು ಎಸೆದ 4ಓವರ್​​ಗಳಲ್ಲಿ 30 ರನ್​ ನೀಡಿ, 4 ವಿಕೆಟ್ ಪಡೆದುಕೊಂಡರು. ಇವರಿಗೆ ಸಾಥ್ ನೀಡಿದ ರಮಣದೀಪ್ 2 ವಿಕೆಟ್ ಪಡೆದರೆ, ಸ್ಯಾಮ್ಸ್ ಹಾಗೂ ಮಾರ್ಕಡೆ ತಲಾ 1 ವಿಕೆಟ್ ಪಡೆದರು.

ಇಂಡಿಯನ್​ ಪ್ರೀಮಿಯರ್ ಲೀಗ್​​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ರಿಷಭ್ ಪಂತ್ ಪಡೆಗೆ ಈ ಪಂದ್ಯ ಕ್ವಾರ್ಟರ್​ ಫೈನಲ್​​ ಆಗಿದ್ದು, ಗೆದ್ದರೆ 4ನೇ ತಂಡವಾಗಿ ಪ್ಲೇ-ಆಫ್​​ ಪ್ರವೇಶ ಪಡೆದುಕೊಳ್ಳಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​​ ಬೌಲಿಂಗ್ ಆಯ್ದುಕೊಂಡಿದೆ.

ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೇ ಪಂದ್ಯವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಈಗಾಗಲೇ ಪ್ಲೇ-ಆಫ್​ ರೇಸ್​​​​​​ನಿಂದ ಹೊರಬಿದ್ದಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ರೋಹಿಗ್ ಬಳಗ ಗೆಲುವು ದಾಖಲು ಮಾಡಿದರೆ, ಆರ್​ಸಿಬಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಲೀಗ್​ ಹಂತದಲ್ಲಿ ತಾನು ಆಡಿರುವ 13 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ದಾಖಲಿಸಿ 14 ಪಾಯಿಂಟ್​ ಹೊಂದಿದ್ದು, ಇಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ ನೇರವಾಗಿ ಪ್ಲೇ-ಆಫ್​ ಪ್ರವೇಶ ಪಡೆದುಕೊಳ್ಳಲಿದೆ. ಹೀಗಾಗಿ, ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದೆ.ಇಂದಿನ ಪಂದ್ಯಕ್ಕಾಗಿ ಮುಂಬೈ ಎರಡು ಬದಲಾವಣೆ ಮಾಡಿದ್ದು, ಸ್ಟುಬ್ಸ್​ ಸ್ಥಾನಕ್ಕೆ ಬ್ರೇವಿಸ್​ ಹಾಗೂ ಸಂಜಯ್ ಸ್ಥಾನಕ್ಕೆ ಹೃತಿಕ್​ ಶೋಕಿನ್​ ಅವಕಾಸ ಪಡೆದುಕೊಂಡಿದ್ದಾರೆ. ಡೆಲ್ಲಿ ತಂಡದಲ್ಲಿ ಲಲಿತ್ ಯಾದವ್ ಸ್ಥಾನಕ್ಕೆ ಪೃಥ್ವಿ ಶಾ ಮರಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಡೇವಿಡ್ ವಾರ್ನರ್​, ಮಿಚೆಲ್ ಮಾರ್ಷ್​, ರಿಷಭ್ ಪಂತ್​(ವಿ,ಕೀ, ಕ್ಯಾಪ್ಟನ್), ಸರ್ಫರಾಜ್ ಖಾನ್​, ಪೊವೆಲ್, ಅಕ್ಸರ್ ಪಟೇಲ್​, ಶಾರ್ದೂಲ್ ಠಾಕೂರ್​, ಕುಲ್ದೀಪ್ ಯಾದವ್, ನೊರ್ಡ್ಜೆ, ಖಲೀಲ್ ಅಹ್ಮದ್​

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ(ಕ್ಯಾಪ್ಟನ್), ಇಶಾನ್ ಕಿಶನ್(ವಿ.ಕೀ), ಬ್ರೆವೀಸ್, ತಿಲಕ್ ವರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಡೆನಿಯಲ್ ಸ್ಯಾಮ್ಸ್, ಹೃತಿಕ್ ಸೋಲಂಕಿ, ಜಸ್ಪ್ರೀತ್ ಬುಮ್ರಾ, ಮೆರ್ಡಿತ್​, ಮಯಾಂಕ್ ಮಾರ್ಕೆಂಡೆ

Last Updated : May 21, 2022, 9:30 PM IST

ABOUT THE AUTHOR

...view details