ಕರ್ನಾಟಕ

karnataka

ETV Bharat / sports

ಇಶನ್​ ಕಿಶನ್ ಹೃದಯ ಕದ್ದ ಚೋರಿ.. ಮಾಡೆಲ್ ಆದಿತಿ ಬಗ್ಗೆ ನಿಮಗೆಷ್ಟು ಗೊತ್ತು? - ಇಶನ್​ ಕಿಶನ್ ಹೃದಯ ಕದ್ದ ಚೋರಿ

ಮುಂಬೈ ಇಂಡಿಯನ್ಸ್ ತಂಡದ ವಿಕೆಟ್​ ಕೀಪರ್ ಬ್ಯಾಟರ್ ಇಶನ್ ಕಿಶನ್​ 2017ರಿಂದಲೂ ಮಾಡೆಲ್​ ಆದಿತಿ ಜೊತೆ ಗಪ್​ ಚುಪ್​ ಆಗಿ ಸುತ್ತಾಡುತ್ತಿದ್ದಾರೆಂಬ ವದಂತಿ ಇದೆ. ಆದರೆ, ಇದಕ್ಕೆ ಯಾವುದೇ ರೀತಿಯ ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ.

ishan kishan dating model aditi hundia
ishan kishan dating model aditi hundia

By

Published : May 20, 2022, 10:08 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಇಶನ್ ಕಿಶನ್​ ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 15.25 ಕೋಟಿ ರೂ.ಗೆ ಸೇಲ್​ ಆಗಿದ್ದಾರೆ. ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಕಿಶನ್​, ಮಾಡೆಲ್​ವೋರ್ವರ ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಇಶನ್​ ಕಿಶನ್ ಹೃದಯ ಕದ್ದ ಚೋರಿ ಆದಿತಿ

22 ವರ್ಷದ ಸೂಪರ್ ಮಾಡೆಲ್​ ಆದಿತಿ ಹುಂಡಿಯಾ ಜೊತೆ ಇಶನ್ ಕಿಶನ್ ಕಳೆದ ಎರಡು ವರ್ಷಗಳಿಂದಲೂ ಪರಿಚಯವಿದ್ದು, ಇದೀಗ ಡೇಟಿಂಗ್ ನಡೆಸುತ್ತಿದ್ದಾರೆಂಬ ಗಾಳಿ ಸುದ್ದಿ ಹರಿದಾಡ್ತಿದೆ. ಆದರೆ, ಇದರೆ ಬಗ್ಗೆ ಇಬ್ಬರು ಯಾವುದೇ ರೀತಿಯ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಸೂಪರ್ ಮಾಡೆಲ್​ ಆದಿತಿ ಹುಂಡಿಯಾ
ಮಾಡೆಲ್ ಆದಿತಿ ಜೊತೆ ಇಶನ್ ಕಿಶನ್ ಡೇಟಿಂಗ್​

ಆದಿತಿ ಹುಂಡಿಯಾ ಫ್ಯಾಷನ್​ ಶೋ ಉದ್ಯಮದಲ್ಲಿ ಚಿರಪರಿಚಿತ ಹೆಸರಾಗಿದ್ದು, ಅವರು, 2017ರಲ್ಲಿ ಮಿಸ್ ಇಂಡಿಯಾ ರಾಜಸ್ಥಾನ ಕಿರೀಟ ಅಲಂಕರಿಸಿದ್ದಾರೆ. ಇದಾದ ಬಳಿಕ 2018ರಲ್ಲಿ ಮಿಸ್ ದಿವಾ ಆಗಿ ಹೊರಹೊಮ್ಮಿದ್ದಾರೆ.

ಮಾಡೆಲ್​ ಆದಿತಿ
ಮಾಡೆಲ್​​ನಲ್ಲಿ ಹೆಸರು ಮಾಡಿರುವ ಆದಿತಿ

ಆದಿತಿ ಹುಂಡಿಯಾ ಅವರಿಗೆ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್​ ಧೋನಿ ಅಂದರೆ ಅಚ್ಚುಮೆಚ್ಚು. ಆದರೆ, ವಿಕೆಟ್ ಕೀಪರ್​ ಬ್ಯಾಟರ್​ ಇಶಾನ್ ಕಿಶನ್ ಜೊತೆ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ.

ಇವರ ಪ್ರೇಮದ ಯಾವುದೇ ಅಧಿಕೃತ ಮಾಹಿತಿ ಇಲ್ಲ
2017ರಿಂದಲೂ ಜೋಡಿ ಗಪ್​ ಚುಪ್ ಲವ್​​

ಆದಿತಿ ಹುಂಡಿಯಾ ಜನವರಿ 15,1997ರಂದು ರಾಜಸ್ಥಾನದ ಜೈಪುರದಲ್ಲಿ ಲಲಿತ್ ಮತ್ತು ಬಬಿತಾ ಹುಂಡಿಯಾ ದಂಪತಿಗಳಿಗೆ ಜನಿಸಿದ್ದು, ಇವರಿಗೆ ಯಶ್ ಎಂಬ ಸಹೋದರನಿದ್ದಾನೆ. ಶಾಲಾ ಶಿಕ್ಷಣವನ್ನ ಇಂಡಿಯಾ ಇಂಟರ್​ನ್ಯಾಷನಲ್ ಸ್ಕೂಲ್​​ನಲ್ಲಿ ಪೂರ್ಣಗೊಳಿಸಿದ್ದು, ಜೈಪುರದ ಸೇಂಟ್​ ಕ್ಸೇವಿಯರ್ ಕಾಲೇಜ್​​ನಲ್ಲಿ ಬ್ಯುಸಿನೆಟ್​​ ವ್ಯವಹಾರ ಅಧ್ಯಯನ ಮಾಡಿದ್ದಾರೆ.

ಜೈಪುರದ ಸೇಂಟ್​ ಕ್ಸೇವಿಯರ್ ಕಾಲೇಜ್​​ನಲ್ಲಿ ಬ್ಯುಸಿನೆಟ್​​ ವ್ಯವಹಾರ ಅಧ್ಯಯನ
22 ವರ್ಷದ ಸೂಪರ್ ಮಾಡೆಲ್​ ಆದಿತಿ ಹುಂಡಿಯಾ

ಮುಂಬೈ ಇಂಡಿಯನ್ಸ್ ತಂಡದ ವಿಕೆಟ್​ ಕೀಪರ್ ಬ್ಯಾಟರ್ ಇಶನ್ ಕಿಶನ್​ 2017ರಿಂದಲೂ ಮಾಡೆಲ್​ ಆದಿತಿ ಜೊತೆ ಗಪ್​ ಚುಪ್​ ಆಗಿ ಸುತ್ತಾಡುತ್ತಿದ್ದಾರೆಂಭ ವದಂತಿ ಇದೆ. ಆದರೆ, ಇದಕ್ಕೆ ಯಾವುದೇ ರೀತಿಯ ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ.

ಮಾಡೆಲ್ ಆದಿತಿ ಬಗ್ಗೆ ನಿಮಗೆಷ್ಟು ಗೊತ್ತು
ಆದಿತಿ ಹುಂಡಿಯಾ ಫ್ಯಾಷನ್​ ಶೋ ಉದ್ಯಮದಲ್ಲಿ ಚಿರಪರಿಚಿತ

ABOUT THE AUTHOR

...view details