ಪುಣೆ:ಇಂಡಿಯನ್ ಪ್ರೀಮಿಯರ್ ಲೀಗ್ನ 53ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ 20 ಓವರ್ಗಳಲ್ಲಿ 176ರನ್ಗಳಿಕೆ ಮಾಡಿದ್ದು, ಕೋಲ್ಕತ್ತಾ ತಂಡದ ಗೆಲುವಿಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಖನೌ ಮೊದಲ ಓವರ್ನಲ್ಲೇ ಕ್ಯಾಪ್ಟನ್ ರಾಹುಲ್(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒದಾದ ಡಿಕಾಕ್-ಹೂಡಾ ಜೋಡಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಈ ಮೂಲಕ 70ರನ್ಗಳ ಜೊತೆಯಾಟ ನೀಡಿದರು.
ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಡಿಕಾಕ್ ನರೈನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ 25ರನ್ಗಳಿಕೆ ಮಾಡಿದ್ರೆ, ಬದೌನಿ 15ರನ್, ಸ್ಟೋಯ್ನಿಸ್ 28ರನ್, ಹೂಲ್ಡರ್ 13ರನ್ಗಳಿಕೆ ಮಾಡಿ, ತಂಡ 20 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 176ರನ್ಗಳಿಕೆ ಮಾಡುವಲ್ಲಿ ಸಹಾಯ ಮಾಡಿದ್ರು. ಕೋಲ್ಕತ್ತಾ ಪರ ರಸೆಲ್ 2 ವಿಕೆಟ್ ಪಡೆದರೆ, ಸೌಥಿ, ಶಿವಂ ಮಾವಿ, ನರೈನ್ ತಲಾ 1 ವಿಕೆಟ್ ಪಡೆದರು. ಮಹಾರಾಷ್ಟ್ರ ಅಸೋಷಿಯೇಷನ್ ಮೈದಾನದಲ್ಲಿ ಆಯೋಜನೆಗೊಂಡಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.
ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿಕಾಕ್(ವಿ.ಕೀ), ಕೆ.ಎಲ್ ರಾಹುಲ್(ಕ್ಯಾಪ್ಟನ್), ದೀಪಕ್ ಹೂಡಾ, ಸ್ಟೋನಿಸ್, ಕೃನಾಲ್ ಪಾಂಡ್ಯಾ, ಆಯೂಷ್ ಬದೌನಿ, ಜಾಸನ್ ಹೊಲ್ಡರ್, ಚಮೀರಾ, ರವಿ ಬಿಷ್ಟೋಯ್, ಆವೇಶ್ ಖಾನ್, ಮೊಸಿನ್ ಖಾನ್