ಕರ್ನಾಟಕ

karnataka

ETV Bharat / sports

ಕೋಲ್ಕತ್ತಾ ವಿರುದ್ಧ ಲಖನೌಗೆ ಭರ್ಜರಿ ಜಯ.. ಗುಜರಾತ್​ ಹಿಂದಿಕ್ಕಿ ಅಗ್ರಸ್ಥಾನಕ್ಕೆ ರಾಹುಲ್ ಪಡೆ ಲಗ್ಗೆ

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಲಖನೌ ಸೂಪರ್ ಜೈಂಟ್ಸ್ ಬರೋಬ್ಬರಿ 75ರನ್​ಗಳ ಅಂತರದ ಗೆಲುವು ದಾಖಲು ಮಾಡಿದೆ.

Lucknow Super Giants win
Lucknow Super Giants win

By

Published : May 7, 2022, 11:03 PM IST

ಪುಣೆ:ಇಂಡಿಯನ್​ ಪ್ರೀಮಿಯರ್ ಲೀಗ್​​ನ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಖನೌ ತಂಡ ಅಗ್ರ ಸ್ಥಾನಕ್ಕೆ ಲಗ್ಗೆ ಹಾಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮಿಂಚಿರುವ ಲಖನೌ 75ರನ್​ಗಳಿಂದ ಗೆದ್ದು ಬಿಗಿದೆ.

ಬೌಲಿಂಗ್​ನಲ್ಲಿ ಮಿಂಚಿದ ಆವೇಶ್ ಖಾನ್​​

ಮಹಾರಾಷ್ಟ್ರ ಅಸೋಷಿಯೇಷನ್​ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಆರಂಭಿಕ ಆಘಾತದ ನಡುವೆ ಕೂಡ ನಿಗದಿತ 20 ಓವರ್​​ಗಳಲ್ಲಿ 7ವಿಕೆಟ್​​ನಷ್ಟಕ್ಕೆ 176ರನ್​ಗಳಿಕೆ ಮಾಡಿತು. ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಖನೌ ಮೊದಲ ಓವರ್​​ನಲ್ಲೇ ಕ್ಯಾಪ್ಟನ್​​ ರಾಹುಲ್​(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒದಾದ ಡಿಕಾಕ್​-ಹೂಡಾ ಜೋಡಿ ಎದುರಾಳಿ ಬೌಲರ್​ಗಳನ್ನ ದಂಡಿಸಿದರು. ಈ ಮೂಲಕ 70ರನ್​ಗಳ ಜೊತೆಯಾಟ ನೀಡಿದರು.

ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಡಿಕಾಕ್​ ನರೈನ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೃನಾಲ್​ 25ರನ್​​ಗಳಿಕೆ ಮಾಡಿದ್ರೆ, ಬದೌನಿ 15ರನ್​​​, ಸ್ಟೋಯ್ನಿಸ್​ 28ರನ್, ಹೂಲ್ಡರ್​​ 13ರನ್​ಗಳಿಕೆ ಮಾಡಿ, ತಂಡ 20 ಓವರ್​ಗಳಲ್ಲಿ 7 ವಿಕೆಟ್​​ನಷ್ಟಕ್ಕೆ 176ರನ್​ಗಳಿಕೆ ಮಾಡುವಲ್ಲಿ ಸಹಾಯ ಮಾಡಿದ್ರು. ಕೋಲ್ಕತ್ತಾ ಪರ ರಸೆಲ್ 2 ವಿಕೆಟ್​ ಪಡೆದರೆ, ಸೌಥಿ, ಶಿವಂ ಮಾವಿ, ನರೈನ್ ತಲಾ 1 ವಿಕೆಟ್ ಪಡೆದರು.

ಉತ್ತಮ ಜೊತೆಯಾಟವಾಡಿದ ಡಿಕಾಕ್​-ಹೂಡಾ

177ರನ್​ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಮೊದಲ ಓವರ್​​ನಲ್ಲೇ ವಿಕೆಟ್ ಕೀಪರ್ ಬಾಬಾ ಇಂದ್ರಜಿತ್(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೈದಾನಕ್ಕೆ ಬಂದ ಕ್ಯಾಪ್ಟನ್ ಶ್ರೇಯಸ್ ಕೂಡ ಕೇವಲ 6ರನ್​​ಗಳಿಸಿ ಔಟಾದರು. ಆರಂಭಿಕ ಆಟಗಾರ ಫಿಂಚ್ ಕೂಡ ಕೇವಲ 14ರನ್​ಗಳಿಕೆ ಮಾಡಿ ಹೊಲ್ಡರ್​ ಓವರ್​ನಲ್ಲಿ ವಿಕೆಟ್​​ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಅರ್ಧಶತಕ ಸಿಡಿಸಿ ಮಿಂಚಿದ ಕ್ವಿಂಟನ್ ಡಿಕಾಕ್​​

ಮಧ್ಯಮ ಕ್ರಮಾಂಕದಲ್ಲಿ ಬಂದ ನಿತಿಶ್ ರಾಣಾ 2ರನ್​ಗಳಿಸಿ ಆವೇಶ್ ಖಾನ್​​ಗೆ ಬಲಿಯಾದರೆ​, ರಿಂಕು ಸಿಂಗ್​​ 6ರನ್​ಗಳಿಸಿ ಬಿಷ್ಣೋಯ್​​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಅಬ್ಬರಿಸಿದ ರಸೆಲ್​- ನರೈನ್ ಜೋಡಿ: ಕೆಕೆಆರ್​ ಒಂದಾದ ಹಿಂದೆ ಮತ್ತೊಂದು ವಿಕೆಟ್ ಕಳೆದುಕೊಂಡ್ರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಆಲ್​ರೌಂಡರ್​​​ ಆಂಡ್ರೊ ರೆಸೆಲ್​ 45ರನ್​​ ಹಾಗೂ ನರೈನ್​ 22ರನ್​​ ತಂಡಕ್ಕೆ ಆಸರೆಯಾದರು. ಆದರೆ, ಇವರ ವಿಕೆಟ್ ಬಿಳುತ್ತಿದ್ದಂತೆ ತಂಡದ ಗೆಲುವಿನ ಆಸೆ ಕಮರಿತು. ತದನಂತರ ಬಂದ ಅಕುಲ್ ರಾಯ್ ​0, ಸೌಥಿ 0 ಹಾಗೂ ಹರ್ಷಿತ್ ರಾಣಾ 2ರನ್​ಗಳಿಸಿ ಔಟಾದರು. ಕೆಕೆಆರ್​​ ಕೊನೆಯದಾಗಿ 14.3 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 101ರನ್​ಗಳಿಕೆ ಮಾಡಿ, 75ರನ್​ಗಳ ಅಂತರದ ಸೋಲು ಕಂಡಿತು.

ಲಖನೌ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಆವೇಶ್ ಖಾನ್​, ಹೊಲ್ಡರ್ ತಲಾ 3 ವಿಕೆಟ್ ಪಡೆದುಕೊಂಡರೆ, ಮೋಸಿನ್ ಖಾನ್​, ಚಮೀರಾ ಹಾಗೂ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.

ABOUT THE AUTHOR

...view details