ಕರ್ನಾಟಕ

karnataka

ETV Bharat / sports

IPLನಲ್ಲಿಂದು ಗುಜರಾತ್​ ಸವಾಲು ಎದುರಿಸಲಿದೆ ಮುಂಬೈ: ಅರ್ಜುನ್​ ತೆಂಡೂಲ್ಕರ್​ಗೆ ಚಾನ್ಸ್? - ಇಂಡಿಯನ್ ಪ್ರೀಮಿಯರ್ ಲೀಗ್

ಈಗಾಗಲೇ ಪ್ಲೇ-ಆಫ್​ ರೇಸ್​​ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್​ ತಂಡ ಇಂದು ಬಲಿಷ್ಠ ಗುಜರಾತ್​ ಎದುರು ಕಣಕ್ಕಿಳಿಯುತ್ತಿದೆ.

Gujarat Titans vs Mumbai Indians
Gujarat Titans vs Mumbai Indians

By

Published : May 6, 2022, 9:27 AM IST

ಮುಂಬೈ:ಇಂಡಿಯನ್​ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ಬಲಾಢ್ಯ ಗುಜರಾತ್​​ ಟೈಟನ್ಸ್​ ಹಾಗೂ ಕಳಪೆ ಪ್ರದರ್ಶನದಿಂದ ಈಗಾಗಲೇ ಪ್ರಶಸ್ತಿ ಪೈಪೋಟಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಹಾರ್ದಿಕ್​ ಪಾಂಡ್ಯಾ ಬಳಗ ಪ್ಲೇ-ಆಫ್​​ಗೆ ಅಧಿಕೃತವಾಗಿ ಲಗ್ಗೆ ಹಾಕುವ ಕಾತುರದಲ್ಲಿದೆ. ಇನ್ನೊಂದೆಡೆ, ಒಟ್ಟಾರೆ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸುವ ಉತ್ಸಾಹ ಮುಂಬೈ ಇಂಡಿಯನ್ಸ್​ ತಂಡದ್ದು.

2022ರ ಐಪಿಎಲ್​​ನಲ್ಲಿ ಹೊಸ ಫ್ರಾಂಚೈಸಿ ಗುಜರಾತ್​ ತಾನಾಡಿರುವ 10 ಪಂದ್ಯಗಳ ಪೈಕಿ 8ರಲ್ಲಿ ಗೆದ್ದು 16 ಪಾಯಿಂಟ್​​ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂಬೈ ಕೇವಲ 1 ಗೆಲುವು ಸಾಧಿಸಿ ಕೊನೆಯ ಸ್ಥಾನದಲ್ಲಿದೆ. ಮುಂಬೈನ ಬ್ರೆಬೋರ್ನ್​ ಮೈದಾನದಲ್ಲಿ ರಾತ್ರಿ 7:30ಕ್ಕೆ ಪಂದ್ಯ ಶುರುವಾಗಲಿದ್ದು, ದಾಖಲೆಯ ಐದು ಬಾರಿಯ ಚಾಂಪಿಯನ್​​ ಹೊಸ ತಂಡದ ಸವಾಲು ಎದುರಿಸಲಿದೆ.

ಸತತ ಗೆಲುವಿನ ನಾಗಾಲೋಟದಲ್ಲಿದ್ದ ಗುಜರಾತ್​ ಟೈಟನ್ಸ್​​ ಹಿಂದಿನ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​ ವಿರುದ್ಧ ಸೋಲು ಕಂಡಿತು. ಇದೀಗ ಗೆಲುವಿನ ಲಯಕ್ಕೆ ಮರಳುವ ಉತ್ಸಾಹದಲ್ಲಿದೆ. ಆಡಿರುವ ಎಲ್ಲ ಪಂದ್ಯಗಳಲ್ಲೂ ಗುಜರಾತ್​ ತಂಡ ಅಗ್ರ ಬ್ಯಾಟಿಂಗ್​ ಕ್ರಮಾಂಕದಲ್ಲಿ ಸಮಸ್ಯೆ ಎದುರಿಸಿದ್ದು, ಗಿಲ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡ್ತಿಲ್ಲ. ಮ್ಯಾಥ್ಯೂ ವೇಡ್​ ಬದಲಿಗೆ ಅವಕಾಶ ಪಡೆದುಕೊಂಡಿರುವ ವೃದ್ಧಿಮಾನ್ ಸಹಾ ಉತ್ತಮ ಆರಂಭ ಪಡೆದುಕೊಳ್ತಿದ್ರೂ, ಹೆಚ್ಚಿನ ರನ್​​ಗಳಿಸುವಲ್ಲಿ ವಿಫಲರಾಗ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್​, ರಾಹುಲ್​ ತೆವಾಟಿಯಾ, ರಶೀದ್ ಖಾನ್​​ ತಂಡದ ಕೈಹಿಡಿಯುತ್ತಿದ್ದಾರೆ. ಬೌಲಿಂಗ್​ ವಿಭಾಗ ಸದೃಢವಾಗಿದೆ. ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್ ಮತ್ತು ರಶೀದ್​ ಉತ್ತಮ ಪ್ರದರ್ಶನ ನೀಡ್ತಿದ್ದಾರೆ.

ಇದನ್ನೂ ಓದಿ:89ನೇ ಅರ್ಧಶತಕ ಸಿಡಿಸಿ ಟಿ20 ಇತಿಹಾಸದಲ್ಲಿ ಹೊಸ ದಾಖಲೆ ರಚಿಸಿದ ವಾರ್ನರ್‌!

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ 5 ವಿಕೆಟ್​ಗಳ ಅಂತರದ ಗೆಲುವು ದಾಖಲಿಸಿದ್ದು ಟೂರ್ನಿಯಲ್ಲಿ ಮೊದಲ ಗೆಲುವು ಪಡೆದಿದೆ. ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುವ ಇರಾದೆ ಇದೆ. ಆದರೆ, ತಂಡದ ಆರಂಭಿಕ ಬ್ಯಾಟರ್​​ ರೋಹಿತ್ ಶರ್ಮಾ, ಇಶಾನ್​ ಕಿಶನ್ ಕಳಪೆ ಫಾರ್ಮ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಫಿನಿಶರ್​ ಪಾತ್ರ ನಿರ್ವಹಿಸುತ್ತಿರುವ ಕಿರನ್​ ಪೊಲಾರ್ಡ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡ್ತಿಲ್ಲ. ಆದರೆ, ಸೂರ್ಯಕುಮಾರ್ ಯಾದವ್​ ಬ್ಯಾಟಿಂದ ರನ್‌ ಸಿಡಿಯುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್​ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಡೆನಿಯಲ್​ ಸ್ಯಾಮ್ಸ್, ರಿಲೆ ಮೆರೆಡಿತ್​​ ಲಯಕ್ಕೆ ಮರಳಿದ್ದಾರೆ.

ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ?:ಕಳೆದ ವರ್ಷದಿಂದಲೂ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ದಿಗ್ಗಜ ಸಚಿನ್ ತೆಂಡೂಲ್ಕರ್​ ಪುತ್ರ ಅರ್ಜುನ್ ತೆಂಡೂಲ್ಕರ್​ಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುತ್ತದೆಯೇ? ಎಂಬುದು ಅಭಿಮಾನಿಗಳ ಕುತೂಹಲ. ಇಲ್ಲಿಯವರೆಗೆ ಕೇವಲ ನೆಟ್​​ನಲ್ಲಿ ಅಭ್ಯಾಸ ಮಾಡ್ತಿರುವ ಅರ್ಜುನ್​, ಕೆಲವೊಂದು ಉತ್ತಮ ಎಸೆತ ಹಾಗೂ ದೊಡ್ಡ ಹೊಡೆತಗಳಿಂದ ಗಮನ ಸೆಳೆದಿದ್ದಾರೆ. ತಂಡ ಈಗಾಗಲೇ ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದಿದ್ದು ಅವಕಾಶ ಸಿಗಬಹುದು ಎನ್ನಲಾಗ್ತಿದೆ.

ತಂಡಗಳು: ಗುಜರಾತ್ ಟೈಟನ್ಸ್​: ಅಭಿನವ್ ಮನೋಹರ್ ,ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್, ಸಾಯಿ ಸುದರ್ಶನ್, ಶುಬ್ಮನ್ ಗಿಲ್​,ಹಾರ್ದಿಕ್ ಪಾಂಡ್ಯಾ(ಕ್ಯಾಪ್ಟನ್), ರಾಹುಲ್​ ತೆವಾಟಿಯಾ, ವಿಜಯ್ ಶಂಕರ್, ಮ್ಯಾಥ್ಯೂ ವೇಡ್​, ಗುರ್ಬಾಜ್​, ವೃದ್ಧಿಮಾನ್ ಸಹಾ(ವಿ.ಕೀ), ಅಲ್ಜಾರಿ ಜೋಸೆಫ್​, ದರ್ಶನ್ ನಲ್ಕಂಡೆ, ಲಾಕಿ ಫರ್ಗುಸನ್​, ಮೊಹಮ್ಮದ್ ಶಮಿ, ನೂರ್​ ಅಹ್ಮದ್, ಪ್ರದೀಪ್ ಸಂಗ್ವಾನ್, ರಶೀದ್ ಖಾನ್,ರವಿ ಶ್ರೀನಿವಾಸನ್, ಸಾಯಿ ಕಿಶೋರ್, ವರುಂ್​ ಆರೋನ್​, ಯಶ್ ದಯಾಳ್

ಮುಂಬೈ ಇಂಡಿಯನ್ಸ್​​:ರೋಹಿತ್ ಶರ್ಮಾ (ನಾಯಕ), ಅನ್ಮೂಲ್​ಪ್ರೀತ್​ ಸಿಂಗ್, ರಾಹುಲ್ ಬುದ್ಧಿ, ರಮಣದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಬಸಿಲ್ ಥಂಪಿ, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಟೈಮಲ್ ಮಿಲ್ಸ್, ಅರ್ಷದ್ ಖಾನ್, ಡೇನಿಯಲ್ ಸಾಮ್ಸ್, ಡೆವಾಲ್ಡ್ ಬ್ರೆವಿಸ್, ಫ್ಯಾಬಿಯನ್ ಅಲೆನ್, ಕೀರಾನ್ ಯಾಡ್ಲಾವ್ಡ್ , ಆರ್ಯನ್ ಜುಯಲ್ ಮತ್ತು ಇಶಾನ್ ಕಿಶನ್

ABOUT THE AUTHOR

...view details