ಕೋಲ್ಕತ್ತಾ: ರಾಜಸ್ಥಾನ ರಾಯಲ್ಸ್ ನೀಡಿದ್ದ 189ರನ್ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್19.3 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 191 ರನ್ಗಳಿಕೆ ಮಾಡಿ, ತಾನು ಸ್ಪರ್ಧೆ ಮಾಡಿರುವ ಚೊಚ್ಚಲ ಆವೃತ್ತಿಯಲ್ಲೇ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ಪಡೆ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 188ರನ್ಗಳಿಕೆ ಮಾಡಿತು.
ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಬಟ್ಲರ್(89), ಸ್ಯಾಮ್ಸನ್(47) ಹಾಗೂ ಪಡಿಕ್ಕಲ್(28)ರನ್ಗಳಿಕೆ ಮಾಡಿದರು. ಗುಜರಾತ್ ತಂಡದ ಪರ ಶಮಿ, ದಯಾಲ್, ಸಾಯಿ ಕಿಶೋರ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದುಕೊಂಡರು.
189ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಮೊದಲ ಓವರ್ನಲ್ಲೇ ವೃದ್ಧಿಮಾನ್ ಸಹಾ(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ಶುಬ್ಮನ್-ವೇಡ್ ಜೊಡಿ ತಂಡಕ್ಕೆ ಉತ್ತಮ ಬುನಾದಿ ಹಾಕಿತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ಪಂದ್ಯ ರೋಚಕಘಟ್ಟಕ್ಕೆ ತಲುಪಿತು. ಈ ವೇಳೆ ಹಾರ್ದಿಕ್ ಪಾಂಡ್ಯ(40), ಡೇವಿಡ್ ಮಿಲ್ಲರ್(68) ಸಿಡಿಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.ಕೊನೆ ಓವರ್ನಲ್ಲಿ ತಂಡಕ್ಕೆ ಗೆಲುವಿಗೆ 16ರನ್ಗಳ ಅವಶ್ಯಕತೆ ಇದ್ದಾಗ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ, ತಂಡಕ್ಕೆ ಜಯತಂದಿಟ್ಟರು. ಈ ಮೂಲಕ ಫೈನಲ್ಗೆ ಲಗ್ಗೆ ಹಾಕಿದೆ. ಸೋಲು ಕಂಡಿರುವ ರಾಜಸ್ಥಾನ ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ.