ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಣೆಬರಹ ಸರಿ ಇರುವ ಹಾಗೇ ಕಾಣಿಸ್ತಿಲ್ಲ. ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಕಳಪೆ ದಾಖಲೆಗೆ ಪಾತ್ರವಾಯಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಿಎಸ್ಕೆ ಕೇವಲ 97ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಮತ್ತೊಮ್ಮೆ ಕಡಿಮೆ ಸ್ಕೋರ್ಗಳಿಸಿರುವ ಕೆಟ್ಟ ದಾಖಲೆ ಬರೆಯಿತು.
ಐಪಿಎಲ್ನಲ್ಲಿ ಸಿಎಸ್ಕೆ 2008ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 109ರನ್, 2013ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 79ರನ್ ಹಾಗೂ 2019ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 109ರನ್ಗಳಿಗೆ ಆಲೌಟ್ ಆಗುವ ಮೂಲಕ ಅತಿ ಕಡಿಮೆ ಸ್ಕೋರ್ಗಳಿಕೆ ಮಾಡಿರುವ ತಂಡವಾಗಿತ್ತು. ಇದೀಗ 2022ರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ಕೇವಲ 97ರನ್ಗಳಿಗೆ ಆಲೌಟ್ ಆಗಿದೆ.