ಕರ್ನಾಟಕ

karnataka

ETV Bharat / sports

IPL 2022: ಜೋಸ್​ ಬಟ್ಲರ್ ಮುಡಿಗೆ 6 ವಿಶೇಷ ಪ್ರಶಸ್ತಿ! ಯಾರಿಗೆ ಏನೆಲ್ಲ ಗೌರವ?

ಇಂಡಿಯನ್​ ಪ್ರೀಮಿಯರ್​ ಲೀಗ್​ನ 15ನೇ ಆವೃತ್ತಿಯ ವಿಜೇತರಾಗಿ ಗುಜರಾತ್​ ಟೈಟನ್ಸ್​ ಹೊರಹೊಮ್ಮಿದೆ. ಟೂರ್ನಿಯಲ್ಲಿನ ಉತ್ತಮ ಆಟಕ್ಕೆ ಯಾವೆಲ್ಲ ಆಟಗಾರರು ವಿಶೇಷ ಗೌರವ, ಪ್ರಶಸ್ತಿಗಳಿಗೆ ಭಾಜನರಾದರು ಎಂಬ ವಿವರ ಇಲ್ಲಿದೆ.

IPL 2022 award winners list: Orange Cap, Purple Cap, Fairplay and other awards
ಇಂಡಿಯನ್​ ಪ್ರೀಮಿಯರ್​ ಲೀಗ್​ನ 15ನೇ ಆವೃತ್ತಿ

By

Published : May 30, 2022, 10:20 AM IST

Updated : May 30, 2022, 11:13 AM IST

ಅಹಮದಾಬಾದ್​:ಎರಡು ತಿಂಗಳ ಅದ್ಧೂರಿ ಐಪಿಎಲ್​​ ಕ್ರಿಕೆಟ್​​ ಹಬ್ಬಕ್ಕೆ ಭಾನುವಾರ ತೆರೆ ಬಿದ್ದಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನ 15ನೇ ಆವೃತ್ತಿಯ ವಿಜೇತರಾಗಿ ಗುಜರಾತ್​ ಟೈಟನ್ಸ್​ ಹೊರಹೊಮ್ಮಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮಣಿಸಿದ ಗುಜರಾತ್ ಟೈಟಾನ್ಸ್ ಚೊಚ್ಚಲ ಚಾಂಪಿಯನ್​ ಪಟ್ಟ ಅಲಂಕರಿಸಿತು.

ಹಾರ್ದಿಕ್​ ಪಾಂಡ್ಯ ನೇತೃತ್ವದ ಟೈಟನ್ಸ್​​ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದೆ. 74 ಪಂದ್ಯಗಳ ಟೂರ್ನಿಯು ಸುಮಾರು ಎರಡು ತಿಂಗಳುಗಳ ಕಾಲ ನಡೆದಿದ್ದು, ಅನೇಕ ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಟೂರ್ನಿಯಲ್ಲಿನ ಉತ್ತಮ ಆಟಕ್ಕೆ ಯಾವೆಲ್ಲ ಆಟಗಾರರು ವಿಶೇಷ ಗೌರವ, ಪ್ರಶಸ್ತಿಗಳಿಗೆ ಭಾಜನರಾದರು ಎಂಬ ವಿವರ ಇಲ್ಲಿದೆ.

ರಾಯಲ್ಸ್ ಫೈನಲ್‌ನಲ್ಲಿ ಸೋತರೂ ಸಹ ತಂಡದ ಇಬ್ಬರು ಆಟಗಾರರು ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆದ್ದರು. ಜೋಸ್ ಬಟ್ಲರ್ ಋತುವಿನ ಆಟಗಾರ ಪ್ರಶಸ್ತಿ ಪಡೆದಿದರು. ಬಟ್ಲರ್​ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್​ ಬಾರಿಸಿದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಬಟ್ಲರ್​ 17 ಪಂದ್ಯಗಳಿಂದ 863 ರನ್​ ಗಳಿಸಿದ್ದು, ಈ ಹಿಂದೆ 848 (2016ರಲ್ಲಿ) ರನ್​ ಪೇರಿಸಿದ್ದ ಡೆವಿಡ್​ ವಾರ್ನರ್​ ಅವರನ್ನು ಹಿಂದಿಕ್ಕಿದರು. 2016ರ ಐಪಿಎಲ್​ನಲ್ಲಿ 973 ರನ್​ ಗಳಿಸಿದ್ದ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ತಂಡದ ಮತ್ತೊಬ್ಬ ಆಟಗಾರ ಯುಜ್ವೇಂದ್ರ ಚಹಲ್ 27 ವಿಕೆಟ್​ ಕಬಳಿಸಿದ್ದು, ಪರ್ಪಲ್ ಕ್ಯಾಪ್​ಗೆ ಭಾಜನರಾದರು.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:

  • ಆರೆಂಜ್ ಕ್ಯಾಪ್: ಜೋಸ್ ಬಟ್ಲರ್ (863 ರನ್)
  • ಪರ್ಪಲ್ ಕ್ಯಾಪ್: ಯುಜ್ವೇಂದ್ರ ಚಹಲ್ (27 ವಿಕೆಟ್)
  • ಋತುವಿನ ಆಟಗಾರ: ಜೋಸ್ ಬಟ್ಲರ್
  • ಋತುವಿನ ಉದಯೋನ್ಮುಖ ಆಟಗಾರ: ಉಮ್ರಾನ್ ಮಲಿಕ್
  • ಅತ್ಯಧಿಕ ಸಿಕ್ಸರ್‌ಗಳು: ಜೋಸ್ ಬಟ್ಲರ್ (45)
  • ಅತ್ಯಧಿಕ ಬೌಂಡರಿಗಳು: ಜೋಸ್ ಬಟ್ಲರ್ (83)
  • ಋತುವಿನ ಸೂಪರ್ ಸ್ಟ್ರೈಕರ್: ದಿನೇಶ್ ಕಾರ್ತಿಕ್ (ಸ್ಟ್ರೈಕ್ ರೇಟ್ 183.33)
  • ಐಪಿಎಲ್​ 2022 ಋತುವಿನ ಕ್ಯಾಚ್: ಎವಿನ್ ಲೆವಿಸ್
  • ಋತುವಿನ ಆಟ ಬದಲಾಯಿಸಿದ ಆಟಗಾರ: ಜೋಸ್ ಬಟ್ಲರ್
  • ಋತುವಿನ ಪವರ್ ಪ್ಲೇಯರ್: ಜೋಸ್ ಬಟ್ಲರ್
  • ಋತುವಿನ ವೇಗದ ಎಸೆತ: ಲಾಕಿ ಫರ್ಗುಸನ್ (157.3 ಕಿ.ಮೀ.)
  • ಫೇರ್‌ಪ್ಲೇ ಪ್ರಶಸ್ತಿ: ರಾಜಸ್ಥಾನ್ ರಾಯಲ್ಸ್

ಇದನ್ನೂ ಓದಿ:ಕಪ್​ ಗೆಲ್ಲಲು ನಾವಷ್ಟೇ ಕಷ್ಟಪಟ್ಟಿಲ್ಲ, ನೆಹ್ರಾ, ಕರ್ಸ್ಟನ್‌ರಿಂದ ಹಿಡಿದು ಎಲ್ಲರ ಶ್ರಮವಿದೆ: ಪಾಂಡ್ಯ

Last Updated : May 30, 2022, 11:13 AM IST

ABOUT THE AUTHOR

...view details