ಚೆನ್ನೈ (ತಮಿಳುನಾಡು):ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ಸೋಲುಕಂಡಿದೆ. ನಿನ್ನೆಯ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿಲ್ಯಾಂಡ್ ಕ್ಯಾಪ್ಟನ್ ಹಾಗೂ ಹೈದರಾಬಾದ್ ತಂಡದ ಆಟಗಾರ ಕೇನ್ ವಿಲಿಯಮ್ಸನ್ ಬಗ್ಗೆ ಎಸ್‌ಆರ್‌ಹೆಚ್ ಕೋಚ್ ಟ್ರೆವರ್ ಬೇಲಿಸ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಮ್ಯಾಚ್ ಫಿಟ್‌ನೆಸ್ ಪಡೆಯಲು ವಿಲಿಯಮ್ಸನ್ಗೆ ಇನ್ನೂ ಸ್ವಲ್ಪ ಸಮಯ ಬೇಕು. ಮೊದಲಿನಂತೆ ಇದ್ದಿದ್ದರೆ ಜಾನಿ ಬೈರ್‌ಸ್ಟೋವ್ ಬದಲಿಗೆ ವಿಲಿಯಮ್ಸನ್ ಆಡುತ್ತಿದ್ದರು. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಭಾರತದಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಜಾನಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ವಿಲಿಯಮ್ಸನ್ ಪ್ಲೇಯಿಂಗ್ -11ನಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ನಿನ್ನೆ ಮ್ಯಾಚ್ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಬೇಲಿಸ್ ಹೇಳಿದರು.
ಇದನ್ನೂ ಓದಿ:IPL-2021: ಸನ್ರೈಸರ್ಸ್ ಮೇಲೆ ಸವಾರಿ ಮಾಡಿದ ನೈಟ್ ರೈಡರ್ಸ್