ಕರ್ನಾಟಕ

karnataka

ETV Bharat / sports

"ಐಪಿಎಲ್ ನನಗೆ ಉತ್ತಮ ಕಲಿಕೆ ಭಾಗವಾಗಿದೆ": ಕೊಹ್ಲಿ ಮನದಾಳದ ಮಾತು

"ಐಪಿಎಲ್ ಉತ್ತಮವಾಗುತ್ತಿದೆ. ಹಾಗಾಗಿ ಕ್ರಿಕೆಟಿಗನಾಗಿ ಮತ್ತು ವೈಯಕ್ತಿಕವಾಗಿ ಉತ್ತಮಗೊಳ್ಳಲು ನನಗೆ ಪ್ರೇರೇಪಿಸುತ್ತದೆ. ಪ್ರತಿವರ್ಷ ವಿಶ್ವ ದರ್ಜೆಯ ಕ್ರಿಕೆಟಿಗರೊಂದಿಗೆ ಆಡುವ ಅವಕಾಶವನ್ನು ಪಡೆಯುವುದು ನನಗೆ ಉತ್ತಮ ಕಲಿಕೆಯ ವಿಷಯದಂತೆ ಭಾಸವಾಗುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Kohli
ಕೊಹ್ಲಿ

By

Published : Sep 20, 2021, 10:20 AM IST

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರತಿ ಸೀಸನ್‌ನಲ್ಲಿ ಉತ್ತಮವಾಗುತ್ತಿದೆ. ಇದರ ಪರಿಣಾಮ ಆಟವನ್ನು ಸುಧಾರಿಸಲು ಇದು ದೊಡ್ಡ ಪ್ರೇರಣೆಯಾಗಿದೆ ಎಂದುರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆರ್‌ಸಿಬಿ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಆಡಲಿದೆ.

"ಐಪಿಎಲ್ ಉತ್ತಮವಾಗುತ್ತಿದೆ. ಹಾಗಾಗಿ ಕ್ರಿಕೆಟಿಗನಾಗಿ ಮತ್ತು ವೈಯಕ್ತಿಕವಾಗಿ ಉತ್ತಮಗೊಳ್ಳಲು ನನಗೆ ಪ್ರೇರೇಪಿಸುತ್ತದೆ. ಪ್ರತಿವರ್ಷ ವಿಶ್ವ ದರ್ಜೆಯ ಕ್ರಿಕೆಟಿಗರೊಂದಿಗೆ ಆಡುವ ಅವಕಾಶವನ್ನು ಪಡೆಯುವುದು ನನಗೆ ಉತ್ತಮ ಕಲಿಕೆಯ ವಿಷಯದಂತೆ ಭಾಸವಾಗುತ್ತದೆ. ಕ್ರೀಡೆ ಕೆಲವು ಹಂತದಲ್ಲಿ ಮುಗಿಯುತ್ತದೆ. ಆದರೆ ಕಲಿಕೆ ಎಂದಿಗೂ ನಿಲ್ಲುವುದಿಲ್ಲ. ನಾನು ಪ್ರತಿ ವರ್ಷವೂ ನನ್ನ ಆಟವನ್ನು ಸುಧಾರಿಸುತ್ತಲೇ ಇರುತ್ತೇನೆ" ಎಂದು ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕೊಹ್ಲಿ ಹೇಳಿದರು.

ಕೆಕೆಆರ್ ವಿರುದ್ಧದ ಪಂದ್ಯವು ಐಪಿಎಲ್‌ನಲ್ಲಿ ಕೊಹ್ಲಿಯ 200 ನೇ ಪಂದ್ಯವಾಗಿದೆ. ಆರ್‌ಸಿಬಿಯೊಂದಿಗಿನ ತನ್ನ ಪ್ರಯಾಣದ ಕುರಿತು ಮಾತನಾಡುತ್ತ, ಕೊಹ್ಲಿ ಹೀಗೆ ಹೇಳಿದ್ದಾರೆ. "ಒಂದು ತಂಡದ ಫ್ರಾಂಚೈಸಿಗಾಗಿ ಆಡುತ್ತಿರುವುದಕ್ಕೆ ಹೆಮ್ಮೆ ಇದೆ. ಇಲ್ಲಿಯವೆರೆಗೆ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರೆ ಅವೆಲ್ಲವೂ ನನಗೆ ವಿಶೇಷವಾಗಿದೆ" ಎಂದು ಕೊಹ್ಲಿ ಮಾತನಾಡಿದರು.

KKR ಜೊತೆಗಿನ ಆಟದ ಬಗ್ಗೆ ಮಾತನಾಡಿದ ಅವರು "ಕೆಕೆಆರ್​ ಕೂಡ ಅತ್ಯಂತ ಬಲಿಷ್ಠ ತಂಡವಾಗಿದೆ. ನಾವು ನಮ್ಮ ಆಟದಲ್ಲಿ ಅಗ್ರಸ್ಥಾನದಲ್ಲಿರಬೇಕು. ಕಳೆದ ಎರಡು ಸೀಸನ್​ಗಳಲ್ಲಿ ನಾವು ಅವರ ವಿರುದ್ಧ ಉತ್ತಮವಾಗಿ ಆಡಿದ್ದೇವೆ. ನಮಗೆ ಕೆಲವು ಒಳ್ಳೆಯ ನೆನಪುಗಳು ಇವೆ" ಎಂದರು.

2021 ರ ಐಪಿಎಲ್ ಆವೃತ್ತಿ ಮುಗಿದ ನಂತರ ಆರ್‌ಸಿಬಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಭಾನುವಾರ ಘೋಷಿಸಿದ್ದರು. ಆದರೆ, ಕೊಹ್ಲಿ ಆರ್‌ಸಿಬಿ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ.

ABOUT THE AUTHOR

...view details