ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳ ಗೆಲುವು ದಾಖಲಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರೆದಿದೆ. ಇದರ ಮಧ್ಯೆ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಯ 5 ವರ್ಷಗಳ ನಂತರ ಐಪಿಎಲ್ನಲ್ಲಿ ರನೌಟ್ ಬಲೆಗೆ ಬಿದ್ದಿದ್ದಾರೆ.
ಆರ್ಆರ್ ವಿರುದ್ಧದ ಪಂದ್ಯದಲ್ಲಿ 149 ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ದೇವದತ್ ಹಾಗೂ ವಿರಾಟ್ 48 ರನ್ಗಳ ಉತ್ತಮ ಜೊತೆಯಾಟ ನೀಡಿದರು. 25ರನ್ಗಳಿಕೆ ಮಾಡಿದ್ದ ವೇಳೆ ವಿರಾಟ್ ರನೌಟ್ ಆದರು.
ರಾಜಸ್ಥಾನ ರಾಯಲ್ಸ್ ತಂಡದ ಯಂಗ್ ಪ್ಲೇಯರ್ ರಿಯಾನ್ ಪರಾಗ್ ಅದ್ಭುತವಾಗಿ ರನೌಟ್ ಮಾಡುವ ಮೂಲಕ, ಕೊಹ್ಲಿ 5 ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ರೆಕಾರ್ಡ್ಗೆ ತೆರೆ ಎಳೆದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ಕಳೆದ 5 ವರ್ಷಗಳಿಂದ ರನೌಟ್ ಆಗಿಲ್ಲ. ಈ ಹಿಂದೆ 2015ರಲ್ಲಿ ಅವರು ಕೊನೆಯ ಸಲ ರನೌಟ್ ಬಲೆಗೆ ಬಿದ್ದಿದ್ದರು. ಇದಾದ ಬಳಿಕ ಅವರು ಮೈದಾನದಲ್ಲಿ ರನೌಟ್ ಆಗಿರಲಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ಪರಾಗ್ ಅವರ ಅದ್ಭುತ ಥ್ರೋಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:IPL ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ವಿವಾದ: ನಾನು ತಪ್ಪು ಮಾಡಿಲ್ಲ- ಅಶ್ವಿನ್ ಸ್ಪಷ್ಟನೆ
19 ವರ್ಷದ ರಿಯಾನ್ ಪರಾಗ್ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನವೇನೂ ಮೂಡಿ ಬರುತ್ತಿಲ್ಲ. ಆದರೆ ಅದ್ಭುತ ಕ್ಷೇತ್ರರಕ್ಷಣೆ ಮಾಡಿ, ಕೊಹ್ಲಿ ರನೌಟ್ ಮಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ.