ಕರ್ನಾಟಕ

karnataka

ETV Bharat / sports

Ipl 2021 : ರಾಜಸ್ಥಾನ ರಾಯಲ್ಸ್​​ಗೆ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು - ರಾಜಸ್ಥಾನ ರಾಯಲ್ಸ್ ಗೆಲುವು

ರೋಚಕ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಜಯಗಳಿಸಿದೆ.

Ipl 2021 : Rajasthan royals won by 2 runs against punjab kings
Ipl 2021 : ರಾಜಸ್ಥಾನ ರಾಯಲ್ಸ್​​ಗೆ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು

By

Published : Sep 21, 2021, 11:57 PM IST

Updated : Sep 22, 2021, 12:22 AM IST

ದುಬೈ:ರೋಚಕ ಹಣಾಹಣಿಯಲ್ಲಿರಾಜಸ್ಥಾನ ರಾಯಲ್ಸ್​​ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಅಂತಿಮ ಓವರ್​ನವರೆಗೂ ಕುತೂಹಲ ಉಳಿಸಿಕೊಂಡಿದ್ದ ಪಂದ್ಯ ಕೊನೆಗೆ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಜಾರಿದೆ.

ಕೇವಲ 2ರನ್​ಗಳ ಅಂತರ ಸೋಲು ಗೆಲುವನ್ನು ನಿರ್ಧರಿಸಿರುವುದು ಈ ಪಂದ್ಯದ ವಿಶೇಷವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್​ ರಾಯಲ್ಸ್​​ 20 ಓವರ್​ಗಳಲ್ಲಿ 185 ರನ್​ಗಳನ್ನು ಗಳಿಸಿತ್ತು.

ಇವಿನ್ ಲೆವಿಸ್ (36), ಯಶಸ್ವಿ ಜೈಸ್ವಾಲ್ (49), ಮಹಿಪಾಲ್ ಲೊಮ್ರೋರ್ (43) ಲಿಯಾಮ್ ಲಿವಿಂಗ್​​ಸ್ಟೋನ್ (25) ಅವರ ಆಕರ್ಷಕ ಆಟದಿಂದ ಪಂಜಾಬ್ ಕಿಂಗ್ಸ್​​ಗೆ ಕಠಿಣ ಸವಾಲು ನೀಡಲಾಗಿತ್ತು.

ಪಂಜಾಬ್​ ಕಿಂಗ್ಸ್​ನ 5 ವಿಕೆಟ್, ಮೊಹಮದ್ ಶಮಿ 3 ವಿಕೆಟ್ ಪಡೆದರೆ, ಇಶಾನ್ ಪೋರೆಲ್ ಮತ್ತು ಹರ್​ಪ್ರೀತ್ ಬ್ರಾರ್ ತಲಾ ಒಂದು ವಿಕೆಟ್ ಪಡೆದಿದ್ದರು.

ಬೃಹತ್ ಮೊತ್ತ ಬೆನ್ನಟ್ಟಿದ ಪಂಜಾಬ್

ರಾಜಸ್ಥಾನ ರಾಯಲ್ಸ್ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ ಪಂಜಾಬ್ ಕೊನೆಯವರೆಗೂ ಗೆಲ್ಲುವ ತಂಡವಾಗಿತ್ತು. ಕೆ.ಎಲ್​.ರಾಹುಲ್ (49), ಮಯಾಂಕ್ ಅಗರ್ವಾಲ್ (67), ಐಡೆನ್ ಮರ್ಕ್ರಮ್ (26) , ನಿಕೋಲಸ್ ಪೂರನ್(32) ನೆರವಿನಿಂದ ಗೆಲುವಿನ ಸನಿಹಕ್ಕೆ ಬಂದಿತ್ತು

ಕೊನೆಯ ಓವರ್​..

ಕೊನೆಯ ಓವರ್​ನಲ್ಲಿ 6 ಎಸೆತಗಳಿಗೆ 5 ರನ್​ಗಳ ಅವಶ್ಯಕತೆ ಪಂಜಾಬ್ ಕಿಂಗ್ಸ್​​ಗೆ ಇತ್ತು. ಕಾರ್ತಿಕ್ ತ್ಯಾಗಿ ಐಡನ್ ಮರ್ಕ್ರಮ್​​ಗೆ ಮೊದಲ ಎಸೆತ ಡಾಟ್ ಬಾಲ್ ಆಗಿದ್ದು, ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ.

ಎರಡನೇ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ಎಸೆತವನ್ನು ಎದುರಿಸಿದ ಐಡನ್ ಮರ್ಕ್ರಮ್​ ಕೇವಲ ಒಂದು ರನ್ ಗಳಿಸಿದರು. ನಂತರದ ಎಸೆತದಲ್ಲಿ ನಿಕೋಲಸ್ ಪೂರನ್​ ಔಟಾಗಿದ್ದು, ಪಂಜಾಬ್ ತಂಡ ಆತಂಕಕ್ಕೆ ಸಿಲುಕಿತ್ತು.

ನಂತರ ಕ್ರೀಸ್​ಗೆ ಇಳಿದ ದೀಪಕ್ ಹೂಡಾ ಓವರ್​ನ ನಾಲ್ಕನೇ ಎಸೆತವನ್ನು ಡಾಟ್​ ಬಾಲ್ ಮಾಡಿದ್ದು, ಐದನೇ ಎಸೆತದಲ್ಲಿ ಸಂಜು ಸ್ಯಾಮ್ಸನ್​​ಗೆ ಕ್ಯಾಚ್ ಒಪ್ಪಿಸಿ, ಪೆವಿಲಿಯನ್​​ಗೆ ತೆರಳಿದರು.

ಕೊನೆಯ ಎಸೆತದಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಲು ಮೂರು ರನ್ ಅವಶ್ಯಕತೆ ಇತ್ತು. ಕ್ರೀಸ್​ಗೆ ಇಳಿದ ಫ್ಯಾಬಿಯನ್ ಅಲ್ಲೆನ್ ಯಾವುದೇ ರನ್ ಗಳಿಸಲು ವಿಫಲರಾದರು. ಈ ಮೂಲಕ ಕೇವಲ 2 ರನ್​ಗಳಿಂದ ಪಂಜಾಬ್ ಕಿಂಗ್ಸ್​ ಸೋಲು ಕಂಡಿತು.

Last Updated : Sep 22, 2021, 12:22 AM IST

ABOUT THE AUTHOR

...view details