ಶಾರ್ಜಾ: 14ನೇ ಆವೃತ್ತಿ ಐಪಿಎಲ್ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಬಳಗ ನಿಗದಿತ 20 ಓವರ್ಗಳಲ್ಲಿ 135 ರನ್ ರನ್ಗಳಿಕೆ ಮಾಡಿದೆ.
ಶಾರ್ಜಾ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಕೆಕೆಆರ್ ತಂಡದ ಬೌಲರ್ಗಳ ವಿರುದ್ಧ ಡೆಲ್ಲಿ ರನ್ಗಳಿಕೆ ಮಾಡಲು ಹರಸಾಹಸ ಪಡುವಂತಾಯಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಮೊದಲ 4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 32 ರನ್ಗಳಿಕೆ ಮಾಡಿದರು. 18ರನ್ಗಳಿಕೆ ಮಾಡಿದ್ದ ಪೃಥ್ವಿ ಶಾ ವರುಣ್ ಚಕ್ರವರ್ತಿ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇದಾದ ಬಳಿಕ ಒಂದಾದ ಧವನ್(29)-ಸ್ಟೋನಿಸ್(15) ಜೋಡಿ 10 ಓವರ್ಗಳ ಅಂತ್ಯಕ್ಕೆ 65ರನ್ಗಳಿಕೆ ಮಾಡಿತು.
18ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ಸ್ಟೋನಿಸ್ ವಿಕೆಟ್ ಪಡೆದುಕೊಳ್ಳುವಲ್ಲಿ ಶಿವಂ ಮಾವಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಧವನ್ ಕೂಡ 36ರನ್ಗಳಿಕೆ ಮಾಡಿ ವರುಣ್ ಚಕ್ರವರ್ತಿ ಓವರ್ನಲ್ಲಿ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಬಂದ ಕ್ಯಾಪ್ಟನ್ ಪಂತ್ ಕೂಡ ಕೇವಲ 6ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಸ್ಫೋಟಕ ಆಟಗಾರ ಹೆಟ್ಮಾಯರ್ 17ರನ್ಗಳಿಕೆ ಮಾಡಿ ರನೌಟ್ ಬಲೆಗೆ ಬಿದ್ದರು.
ಇದಾದ ಬಳಿಕ ಶ್ರೇಯಸ್ ಅಯ್ಯರ್ ಅಜೇಯ 37ರನ್ಗಳಿಕೆ ಮಾಡಿದ್ರೆ, ಅಕ್ಸರ್ ಪಟೇಲ್ 4ರನ್ಗಳಿಸಿದರು. ತಂಡ ಕೊನೆಯದಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 135ರನ್ಗಳಿಕೆ ಮಾಡಿತು.
ಇದನ್ನೂ ಓದಿರಿ:ಪ್ಲಂಬರ್ಗೆ ಒಲಿದ ಅದೃಷ್ಟ ಲಕ್ಷ್ಮಿ.. ಡ್ರೀಮ್ 11ನಿಂದ 1 ಕೋಟಿ ರೂ. ಗೆದ್ದ!
ಕೋಲ್ಕತ್ತಾ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಚಕ್ರವರ್ತಿ 2 ವಿಕೆಟ್, ಶಿವಂ ಮಾವಿ, ಫಾರ್ಗೂಸನ್ ತಲಾ 1 ವಿಕೆಟ್ ಪಡೆದುಕೊಂಡರು. ಬೌಲಿಂಗ್ ಮಾಡಿದ ಹಸನ್ ಅಲಿ, ನರೈನ್ ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲರಾದರೂ, ರನ್ಗತಿಗೆ ಕಡಿವಾಣ ಹಾಕಿದರು.