ದುಬೈ: ಕೆಕೆಆರ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ರೋಚಕ ಗೆಲವು ಸಾಧಿಸಿದೆ. ನಾಯಕ ಕೆ.ಎಲ್ ರಾಹುಲ್ ಅರ್ಧ ಶತಕದ ನೆರವಿನಿಂದ 19.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೋಲ್ಕತ್ತ ನೀಡಿದ್ದ 166ರನ್‌ಗಳ ಗುರಿ ತಲುಪಿತು.
ಆರಂಭಿಕ ರಾಹುಲ್ 55 ಎಸೆತಗಳಿಂದ 4 ಬೌಂಡರಿ, 2 ಸಿಕ್ಸರ್ ಸಹಿತ 67ರನ್ ಗಳಿಸಿ ಕೊನೆಯ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ, ಕನ್ನಡಿಗ ಮಯಾಂಕ್ ಅಗರ್‌ವಾಲ್ 27 ಎಸೆತಗಳಲ್ಲಿ 3 ಬೌಂಡರಿ, 3 ಭರ್ಜರಿ ಸಿಕ್ಸರ್ ಸಹಿತ 40 ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮುರಿಯದೆ ಮೊದಲ ವಿಕೆಟ್‌ಗೆ 70 ರನ್ ಗಳಿಸಿತು.
ನಂತರ ಬಂದ ಪೂರನ್ 12, ಏಡನ್ ಮಾರ್ಕ್ರಮ್ 18, ದೀಪಕ್ ಹೂಡ 3ರನ್ ಗಳಿಸಿದರು. ಶಾರೂಕ್ ಖಾನ್ ಔಟಾಗದೆ 9 ಎಸೆತಗಳಿಂದ 1 ಬೌಂಡರಿ 2 ಸಿಕ್ಸರ್ ಸಹಿತಿ 22 ರನ್‌ಗಳೊಂದಿಗೆ ಕೊನೆಯಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ 2 ವಿಕೆಟ್ ಗಳಿಸಿದರು. ಶಿವಂ ಮಾವಿ, ಸುನೀಲ್ ನರೇನ್, ವೆಂಕಟೇಶ್ ಅಯ್ಯರ್ ತಲಾ 1 ವಿಕೆಟ್ ಪಡೆದರು. ಮಾರ್ಗನ್ ಪಡೆ ವಿರುದ್ಧದ ಗೆಲುವಿನ ಬಳಿಕ ಪಂಜಾಬ್ 12 ಪಂದ್ಯಗಳಲ್ಲಿ 5ರಲ್ಲಿ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಇದೆ.