ಮುಂಬೈ: ಮುಂಬರುವ ಪಂದ್ಯಗಳಲ್ಲಿ ತಮ್ಮ ತಂಡದ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್ ಕಟ್ಟಬೇಕೆಂದು ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕರ ಹೇಳಿದ್ದಾರೆ.
ಈ ಪಂದ್ಯದ ಬಳಿಕ ಮಾತನಾಡಿರುವ ಕುಮಾರ್ ಸಂಗಕ್ಕರ " ಇಂದಿನ ಪಂದ್ಯದಲ್ಲಿ ನಮ್ಮ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸಮನ್ಗಳಿಂದ ಯಾವುದೆ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ನಾವು 6 -7 ಓವರ್ಗೆ ನಮ್ಮ ತಂಡ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇದು ನಮ್ಮ ಮೊದಲ ಹಿನ್ನಡೆಯಾಗಿತ್ತು. ಆದರೂ ಮದ್ಯಮ ಕ್ರಮಾಂಕದಲ್ಲಿ ಬ್ಯಾಟ್ಸಮನ್ಗಳ ಉತ್ತಮ ಕೊಡುಗೆಯಿಂದ ನಾವು 176 ರನ್ಗಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
"ಆಟಗಾರರು ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು ತುಂಬಾ ಮುಖ್ಯವಾಗಿದೆ ಹಾಗೂ ಬ್ಯಾಟ್ಸ್‌ಮನ್‌ಗಳು ಫೀಲ್ಡ್ ಸೆಟ್ ನೋಡಿಕೊಂಡು ತಮ್ಮ ಸಾಮರ್ಥ್ಯ ಹಾಗೂ ಕೌಶಲದ ಆಧಾರದ ಮೇಲೆ ಆಡಬೇಕಾಗುತ್ತದೆ. ನೀವು ಮಧ್ಯಮ ಕ್ರಮಾಂಕದಲ್ಲಿ ಆಡಲು ಹೊರಟರೆ, ಫೀಲ್ಡರ್‌ಗಳು ಚದುರಿರುತ್ತಾರೆ ಹಾಗೂ ಅಪಾಯದ ಹೊಡೆತಗಳನ್ನು ಹೊಡೆಯುವುದರ ಬದಲು ಬಹಳ ಎಚ್ಚರಿಕೆಯಿಂದ ಶಾಟ್ ಮಾಡಬೇಕಾಗುತ್ತದೆ," ಎಂದು ಹೇಳಿದರು.